Advertisement

Category: ಸಾಹಿತ್ಯ

ಓಬಿರಾಯನ ಕಾಲದ ಕತೆ: ಮಾ. ವರ್ಧಮಾನ ಹೆಗ್ಡೆಯವರು ಬರೆದ ಕತೆ “ಸುಕುಮಾರ’ ಯಾ `ಅಣ್ಣೀ”

“ಆತನ ವಿಚಿತ್ರ ಡ್ರೆಸ್ಸ್, ಮುಖದಲ್ಲಿ ಫ್ರೆಂಚ್ ಕಟ್ ಮೀಸೆಯನ್ನು ನೋಡಿ ಆರಿಗರಿಗೆ ಪ್ರಥಮ ಆತನ ಪರಿಚಯವೇ ಆಗಲಿಲ್ಲ. ಬರುತ್ತಲೇ `ಗುಡ್ ಮಾರ್ನಿಂಗ್ ಫಾದರ್’ ಎಂದು ಹೇಳಿದ್ದನ್ನು ಕೇಳಿ ಸ್ವರದಿಂದ ಅಣ್ಣಿ ಎಂದು ತಿಳಿದು, `ಸಾವಿರಾರು ರೂಪಾಯಿ ಖರ್ಚು ಮಾಡಿ ಇಷ್ಟಾದರೂ ಇಂಗ್ಲೀಷ್ ಓದಿದಿಯಲ್ಲಾ ಸಾಕು’ ಎಂದರು.”

Read More

ಡಾ. ಕೆ. ಚಿನ್ನಪ್ಪ ಗೌಡರ ಕವನಸಂಕಲನಕ್ಕೆ ಡಾ. ಬಿ.ಎ. ವಿವೇಕ ರೈ ಮುನ್ನುಡಿ

“ಕಲ್ಕುಡ-ಕಲ್ಲುರ್ಟಿ ಪಾಡ್ದನದಲ್ಲಿನ ಕಲ್ಲುರ್ಟಿಯ ಕತೆ ಒಂದು ಅಮಾನುಷ ದೌರ್ಜನ್ಯದ ವಿರುದ್ಧದ ಸೇಡಿನ ಹೋರಾಟದ ಗಾಥೆ. `ಕಲ್ಲಲ್ಲಿ ಉರಿವ ಬೆಂಕಿ’ ಕವನವು ಕಲ್ಲುರ್ಟಿಯ ರೋಷದ ಪ್ರತಿಕಾರದ ಕಥನ. ಅಣ್ಣ ಬೈರಕಲ್ಕುಡನ ಕೈ ಕಾಲನ್ನು ಕಾರ್ಕಳದ ಭೈರರಸ ಅನ್ಯಾಯವಾಗಿ ಕತ್ತರಿಸಿದ ಸೇಡನ್ನು ತಂಗಿ ಕಲ್ಲುರ್ಟಿ ತೀರಿಸಿ ಸತ್ಯದೇವತೆಯಾಗುತ್ತಾಳೆ.”

Read More

ಅಸ್ಪೃಶ್ಯರು : ಆಶಾ ಜಗದೀಶ್ ಅನುವಾದಿಸಿದ ರಸ್ಕಿನ್ ಬಾಂಡ್ ಬರೆದ ಮೊದಲ ಕತೆ.

“ಕಸಗುಡಿಸುವ ಹುಡುಗ ಇಡೀ ದಿನ ತನ್ನ ಮೊಣಕಾಲಿಗೆ ತಗುಲುವ ಬಕೇಟ್ ಹಿಡಿದು ಮನೆಗೂ ಕೆರೆಗೂ ಓಡಾಡಿಕೊಂಡಿರುತ್ತಿದ್ದ. ಹಾಗೆ ಪ್ರತಿ ಸಾರಿ ಹೋಗುವಾಗ ಬರುವಾಗ ಅವನ ಮುಖದಲ್ಲೊಂದು ದೊಡ್ಡ ಸ್ನೇಹಪೂರ್ವಕ ನಗೆ ಇಣುಕುತ್ತಿತ್ತು. ಆದರೆ ನಾನವನನ್ನು ದುರುಗುಟ್ಟಿ ನೋಡುತ್ತಿದ್ದೆ. ಅವನಿಗೆ ನನ್ನದೇ ವಯಸ್ಸು… ಹತ್ತು ವರ್ಷ. ಅವನಿಗೆ ಸಣ್ಣಗೆ ಕತ್ತರಿಸಿದ ಕ್ರಾಪ್ ಇತ್ತು.”

Read More

ವಾಸುದೇವ ನಾಡಿಗ್ ಕವನ ಸಂಕಲನಕ್ಕೆ ದಿಲೀಪ್ ಕುಮಾರ್ ಮುನ್ನುಡಿ.

“ಕರವಸ್ತ್ರದ ಅನನ್ಯತೆ ತಿಳಿಯುವುದು ಹಿಂದಿನ ಸಂಕಲನಗಳಲ್ಲಿನ ಭಾಷೆ-ಬಂಧ-ಪ್ರತಿಮೆಗಳಲ್ಲಿಂದ ಬಿಡುಗಡೆ ಹೊಂದದೆ ಇಂದಿಗೆ ತೆರೆದುಕೊಂಡಿರುವ ತೀವ್ರವಾದ ಭಾವದ ಅಭಿವ್ಯಕ್ತಿಯ ಸ್ಥಿತಿಗೆ ಬಾಯಾಗುವ ಹಂಬಲದಿಂದ. ಎಲ್ಲ ಕಾವ್ಯಗಳೂ ತೀವ್ರವಾದ ಭಾವದ ಅಭಿವ್ಯಕ್ತಿಗೆ ತುಡಿಯುತ್ತಿದ್ದರೂ ಒಂದು ಸಂಕಲನದಿಂದ ಮತ್ತೊಂದು ಸಂಕಲನಕ್ಕೆ ಬೆಳೆದಿರುವ ಇವರ ಕಟ್ಟುವಿಕೆಯಿಂದ.”

Read More

ಓಬಿರಾಯನಕಾಲದ ಕತೆ: ಹುರುಳಿ ಭೀಮರಾವ್ ಬರೆದ ಕತೆ “ಮಾರಯ್ಯನ ಕವಾತು ”

“ಮಾರಯ್ಯನ ಖಾಸಗಿ ಮರ್ಯಾದೆಗಾಗಲೀ ಅವನು ಅಲಂಕರಿಸಿದ ಆ ಹುದ್ದೆಯ ಗೌರವಕ್ಕಾಗಲೀ ಕುಂದಕ ತರುವ ಹಕ್ಕು ಆ ವಾಲಿಗಿರಲೇ ಕೂಡದು. ಭಾಗವತರು ಹುಕುಂ ಪ್ರಕಾರ ಆ ಪದಗಳನ್ನೇ ಬಿಟ್ಟು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ