Advertisement

Category: ಸಾಹಿತ್ಯ

ಬಿಡುಗಡೆ: ಮೀರಾ ಸಂಪಿಗೆ ಬರೆದ ಈ ವಾರದ ಕತೆ

“ಮುಂದೆ, ಆ ಮನೆಯಲ್ಲಿರಲಿಕ್ಕಾಗದೆ ಆಕೆ ಮನೆ ಖಾಲಿ ಮಾಡಿ ಹೋದಳು. ಅಡಿಗೆ ಮಾಡುವ ಕೆಲಸ ಸಿಕ್ಕಿದೆಯೆಂದು, ಸಂಬಳ ಚೆನ್ನಾಗಿದ್ದು, ಊಟ ಬಟ್ಟೆ ಖರ್ಚು ಕಳೆಯುತ್ತದೆಂದೂ, ಗಂಡನ ಖಾಯಿಲೆಗಾಗಿ ಮಾಡಿದ ಸಾಲ ತೀರಿಸುವುದಕ್ಕೆ ಸಹಾಯವಾಗುತ್ತದೆಂದು ಹೇಳಿದಳು. ಸಾಲ ಮುಗಿಯಲು ಅನೇಕ ವರ್ಷಗಳೇ ಬೇಕಾಗಬಹುದೆಂದೂ ತಿಳಿಸಿದಳು. ಅವಳ ಸಮಾಧಾನ, ಸ್ಥೈರ್ಯಗಳನ್ನು ಮೆಚ್ಚಿ ನಾನೂ ಕೆಲವು ಧೈರ್ಯದ ಮಾತನ್ನಾಡಿ ಅವಳಿಗೆ ವಿದಾಯ ಹೇಳಿದೆ. ಅಂತೂ ಹಲವು ವರುಷಗಳ ಹೊಡೆತ, ಬಡಿತದ ನರಕದಿಂದ ಆ ಜೀವಿಗೆ ಶಾಶ್ವತ ಬಿಡುಗಡೆ ದೊರೆಯಿತಲ್ಲಾ ಎಂದು ನೆಮ್ಮದಿಯ ಉಸಿರೆಳೆದೆ.”

Read More

ಸಂಸ್ಕೃತಿ ಕಥನವೇ ಆಗಿಬಿಡುವ ಬಾಲ್ಯದ ನೆನಪುಗಳ ಹೊತ್ತಿಗೆ

”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ”

Read More

ಮೇದಿನಿ ಕವನ ಸಂಕಲನಕ್ಕೆ ಎಸ್.ಆರ್.ವಿಜಯಶಂಕರ್ ಮುನ್ನುಡಿ

“ಭಾವವು ಪ್ರೇಮವಾಗುವುದು ಸಹಜ ಬೆಳವಣಿಗೆ. ಪ್ರೇಮದ ಮುಂದಿನ ಹಂತ ಜೊತೆಯಾದ ಬದುಕು. ಅದು ವಾಸ್ತವ. ಆದರೆ ವಾಸ್ತವದಲ್ಲಿ ಭಾವದ ಬೀಜ ಭಿನ್ನ ರೂಪದಲ್ಲಿ ಇರುತ್ತದೆ. ಮೊಳಕೆ ಬೀಜದಿಂದ ಹುಟ್ಟಿದ್ದೇ ಆದರೂ ಅದು ಬೀಜವಲ್ಲ. ಲೋಕದ ಸತ್ಯದ ಇಂತಹ ಹಲವು ನೆಲೆಗಳ ಅರಿವು ಕವಯಿತ್ರಿಗಿದೆ.”

Read More

ಓಬೀರಾಯನ ಕಾಲದ ಕತೆಗಳ ಸರಣಿಯಲ್ಲಿ ತುದಿಯಡ್ಕ ವಿಷ್ಣ್ವಯ್ಯ ಬರೆದ ಕತೆ: ಶ್ಯಾನುಭಾಗ ಶ್ಯಾಮಣ್ಣನವರು

” ಶ್ಯಾನುಭಾಗ ಶ್ಯಾಮಣ್ಣನವರದ್ದು ಆನುವಂಶಿಕ ಶ್ಯಾನುಭಾಗತಿಕೆಯಾಗಿದ್ದುದರಿಂದ ಅವರ ಹಿರಿಯರು ಮನೆಯ ಪಕ್ಕದಲ್ಲೇ ಸರಕಾರಿ ಅಧಿಕಾರಿಗಳು ಉಳಿದುಕೊಳ್ಳಲೆಂದೇ ಒಂದು ಕಟ್ಟಡವನ್ನು ಕಟ್ಟಿಸಿದ್ದರು. ಅದರಲ್ಲಿ ಒಂದು ಅಡುಗೆ ಕೋಣೆ, ಮಲಗುವ ಕೋಣೆ, ಬರವಣಿಗೆ ನಡೆಸಲು ಮೇಜು ಕುರ್ಚಿಗಳಿರುವ ಮೊಗಸಾಲೆ ಮುಂತಾದ ಎಲ್ಲಾ ಅನುಕೂಲತೆಗಳು ಇದ್ದವು.”

Read More

ಕಥನಗಾರಿಕೆಯ ಬೈನಾಕ್ಯುಲರ್ ನಲ್ಲಿ ಕಂಡ ಗತ ಮತ್ತು ವರ್ತಮಾನಗಳು:ವಿಕ್ರಮ್ ಕಥೆಗಳ ಕುರಿತು ಗೀತಾ ವಸಂತ

ಹಮಾರಾ ಬಜಾಜ್ ನ ಕತೆಗಳಲ್ಲಿ ಅಸ್ತಿತ್ವ ಶೋಧದ ಆಯಾಮವು ಅಂತರಗಂಗೆಯಂತೆ ಒಳಗೊಳಗೇ ಹರಿಯುತ್ತ ಎಲ್ಲ ಕತೆಗಳನ್ನು ಒಂದು ಹರಿವಿನಲ್ಲಿ ಬೆಸೆಯುತ್ತದೆ. ದೇಹ, ಪ್ರಜ್ಞೆಗಳಲ್ಲಿ ಯಾವುದು ನಿಜ ಎಂಬ ತೊಡಕುಗಳನ್ನು ಅನುಭವಿಸುತ್ತಲೇ ಅದನ್ನು ನಿಧಾನವಾಗಿ ಬಿಡಿಸುವ ತರ್ಕದ ನಾಜೂಕು ಹೆಣಿಗೆಯನ್ನು ಕತೆಗಳು ನಿರ್ಮಿಸುತ್ತವೆ. ದೇಹದ ಐಂದ್ರಿಕ ಅನುಭವಗಳನ್ನು ಕಾಮದ ಮೂಲಕ ಶೋಧಿಸುವ ಕತೆಗಳು ಪ್ರಜ್ಞೆಯ ಅನುಭವವನ್ನು ವಿಶ್ಲೇಷಿಸಲು ತರ್ಕದ ಮೊರೆ ಹೋಗುತ್ತವೆ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಇತಿಹಾಸದ ಪ್ರಮಾದಗಳು..: ಪದ್ಮರಾಜ ದಂಡಾವತಿ ಕೃತಿಯ ಪುಟಗಳು

ಹಾಗೆ ನೋಡಿದರೆ ಅವರ ಕಾಲದಲ್ಲಿಯೇ ನಾವು ಅನೇಕರು ಅಂಕಣಗಳನ್ನು ಬರೆದೆವು. ಅದು ಹಿಂದೆ ಇತಿಹಾಸದಲ್ಲಿ ಎಂದೂ ಇರಲೇ ಇಲ್ಲ. ಇದನ್ನು ʻಡೆಕ್ಕನ್‌ ಹೆರಾಲ್ಡ್‌ʼನ ಸುದ್ದಿ ಸಂಪಾದಕರಾಗಿದ್ದ ನಾಗಭೂಷಣರಾವ್‌…

Read More

ಬರಹ ಭಂಡಾರ