ಗುರು ಮತ್ತು ಹಕ್ಕಿಗೂಡು: ಸುಕನ್ಯಾ ಕನಾರಳ್ಳಿ ಅಂಕಣ
ಗಾಂಧೀಜಿ ಒಮ್ಮೆ ಯರವಾಡ ಜೈಲಿನಲ್ಲಿದ್ದಾಗ ಒಂದು ರಾತ್ರಿ ಬರಿಯ ದುಃಸ್ವಪ್ನಗಳೇ ಬಿದ್ದು ಬೆಚ್ಚಿದ್ದಾಗ ವಿಚಾರಿಸಿದರಂತೆ. ಹಿಂದಿನ ರಾತ್ರಿಯ ಅಡಿಗೆಯನ್ನು ಒಬ್ಬ ಕೊಲೆಗಡುಕ ಅಪರಾಧಿ ಮಾಡಿದ್ದಾನೆಂದು ತಿಳಿದು ಅಂದಿನಿಂದ ರಾತ್ರಿಯ ಊಟವನ್ನೇ ಬಿಟ್ಟರಂತೆ. ನಮ್ಮ ಸೂಕ್ಷ್ಮ ಶರೀರದ ಚೈತನ್ಯ ಇನ್ನೊಬ್ಬರಿಗೂ ಅನುಭವಕ್ಕೆ ಬರುತ್ತದೆ ಎಂದು ಅರಿವಾಗುವುದು ಬ್ರಹ್ಮವಿದ್ಯೆಯೇನೂ ಅಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣ
