Advertisement

Category: ಅಂಕಣ

ಅರ್ಥಲೋಕದ ಬೆರಗುಗಳ ಅನಾವರಣ

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

Read More

ತ್ರಿಮೂರ್ತಿಗಳನ್ನು ರಂಗದ ಬದುಕಿನ ಚಿತ್ರಗಳೊಂದಿಗೆ ಸಮೀಕರಿಸುತ್ತ…

‘ಕಾಯೌ ಶ್ರೀಗೌರಿ..’ ಎಂಬ ನಾಡಗೀತೆಯನ್ನು ಅಂದು ಬರೆದಿದ್ದ ಬಸವಪ್ಪ ಶಾಸ್ತ್ರಿಗಳು ನೆನಪಾಗುತ್ತಾರೆ. ಮೈಸೂರನ್ನು ನಾವಿಂದು ಸಾಂಸ್ಕೃತಿಕ ನಗರಿ ಎಂದು ಕರೆದುಕೊಳ್ಳುತ್ತೇವೆ. ವಿದ್ವತ್ತಿಗೆ ಹೆಸರಾದದ್ದು ಎಂದು ತಿಳಿದೇ ಇದೆ. ಇಷ್ಟಿದ್ದೂ ಬಸವಪ್ಪ ಶಾಸ್ತ್ರಿಗಳ ಸ್ಮಾರಕದ ಕಡೆಗೆ ಅಸಡ್ಡೆ ಯಾಕೆ ಮತ್ತು ಹೇಗೆ ಬೆಳೆಯಿತೋ ಗೊತ್ತಿಲ್ಲ. ಮೈಸೂರಿನಲ್ಲಿರುವ ಎಲ್.ಐ.ಸಿ ಬಿಲ್ಡಿಂಗ್ ಬಳಿ ರಸ್ತೆ ಪಕ್ಕದಲ್ಲಿ ಬಸವಪ್ಪ ಶಾಸ್ತ್ರಿಗಳ ಸ್ಮಾರಕವಿದೆ. ಅದರ ಬಣ್ಣ ಮಾಸಿ, ಗೋಡೆಗಳ ಮೇಲೆಲ್ಲ ಬಳ್ಳಿ ಹಬ್ಬಿಕೊಳ್ಳುವಷ್ಟು ನಿರ್ಲಕ್ಷ್ಯವೇಕೆ..”

Read More

ಲೇಡೀಸ್ ಹಾಸ್ಟೆಲ್ ದಯ್ಯ ಬಿಡಿಸಿದ ಭಟ್ಕಳದ ಬಾಲೆ

ನನ್ನಲ್ಲಿ ಲೇಡೀಸ್ ಹಾಸ್ಟೆಲ್ ಬಗೆಗೊಂದು ಅಸೀಮ ಕುತೂಹಲ ಬೆಳೆದಿತ್ತು. ಹಾಸ್ಟೆಲ್ ನಲ್ಲಿ ಹುಡುಗಿಯರ ಸಾಮ್ರಾಜ್ಯ ಹೇಗಿದ್ದೀತು? ಹರಟೆಯ ಹೊತ್ತಲ್ಲಿ ಏನೆಲ್ಲ ವಾಗ್ವಾದ ನಡೀಬಹುದು? ಅಡುಗೆ ಸರೀಗಿಲ್ಲ ಅಂದ್ರೆ ಅಡುಗೆಯವ್ರಿಗೆ ಕ್ಲಾಸ್ ತಗೋತಾರಾ? ಪೊಲಿಟಿಕ್ಸ್ ಬಗ್ಗೆ ಮಾತಾಡ್ತಾರಾ? ಹೊಡೆದಾಟಗಳು ನಡೆದ್ರೆ ಹೇಗೆ ನಡೀತದೆ? ಸಂಚುಗಳು ಹೆಂಗೆ ಎಕ್ಸಿಕ್ಯೂಟ್ ಆಗ್ತವೆ? ರೂಮು ಗಲೀಜು ಇಟ್ಕೊಂಡಿರ್ತಾರಾ ಅಥವಾ ಸಿಕ್ಕಾಪಟ್ಟೆ ನೀಟಾಗಿರ್ತದಾ?… ಹೀಗೆ ತರಹೇವಾರಿ ತರ್ಕಗಳು -ಸಹ್ಯಾದ್ರಿ ನಾಗರಾಜ್ ಬರೆಯುವ ‘ಸೊಗದೆ’ ಅಂಕಣ ನಿಮ್ಮ ಓದಿಗೆ.

Read More

ಸಮಬೆಸಗಳ ಸರಿಗಮ ತಪ್ಪಿದ್ದಲ್ಲ

ಈ ಬಾರಿ ಸಿಡ್ನಿ ಮಹಾನಗರ ವಲಯದಲ್ಲಿ ಜಾರಿಗೆ ಬಂದ ಲಾಕ್ ಡೌನ್ ಸ್ವಲ್ಪ ಗಲಾಟೆ ಎಬ್ಬಿಸಿದೆ. ನಗರದ ಪಶ್ಚಿಮ ಬಡಾವಣೆಗಳಲ್ಲಿ ಹೆಚ್ಚು ಡೆಲ್ಟಾ ವೈರಸ್ ಸೋಂಕು ಕಾಣಿಸಿದ್ದು ವರದಿಯಾಗಿತ್ತು. ಆ ಪ್ರದೇಶದಲ್ಲಿ ವಾಸಿಸುತ್ತಿರುವ, ಅನೇಕತೆಗಳಿರುವ- ಅಂದರೆ ಆಂಗ್ಲೋ-ಆಸ್ಟ್ರೇಲಿಯನ್ ಅಲ್ಲದ ಬೇರೆ ಸಂಸ್ಕೃತಿಗಳ ಜನರು ಲಾಕ್ ಡೌನ್ ನಿಯಮಗಳನ್ನು ಸರಿಯಾಗಿ ಪಾಲಿಸಲಿಲ್ಲವೆಂದು ಸುದ್ದಿಯಾಗಿತ್ತು. ರಾಜ್ಯಸರ್ಕಾರ ಆ ಬಡಾವಣೆಗಳಲ್ಲಿ ಬಂದೋಬಸ್ತು ಮಾಡಲು, ಪೊಲೀಸರನ್ನು ಕಳಿಸಿತು. ಇದು ಅಲ್ಲಿನ ವಿವಿಧ ಸಂಸ್ಕೃತಿಗಳ ಜನಸಮುದಾಯಗಳನ್ನು ಆತಂಕಕ್ಕೀಡು ಮಾಡಿದೆ ಎಂಬ ಸುದ್ದಿ ಚರ್ಚೆಗೆ ಬಂದಿದೆ. ಡಾ. ವಿನತೆ ಶರ್ಮ ಬರೆಯುವ ‘ಆಸ್ಟ್ರೇಲಿಯಾ ಪತ್ರ’

Read More

ಒಬ್ಬರೊಳಗೊಬ್ಬರು ಮಾಯವಾಗುವ ಬಗೆ

‘ದಿ ವೈಟ್ ಕ್ಯಾಸಲ್’ ಕಾದಂಬರಿ ಟರ್ಕಿಯ ಆಟಮನ್ ಸಾಮ್ರಾಜ್ಯದಲ್ಲಿ ಗುಲಾಮನಾಗಿರುವ ಇಟಲಿ ದೇಶದ ವಿದ್ಯಾರ್ಥಿಯೊಬ್ಬನ ಪ್ರವರ. ಇದು ಹದಿನೇಳನೆಯ ಶತಮಾನದ ಕತೆ. ಇಟಲಿಯ ವೆನಿಸ್ ನಗರದಿಂದ ನೇಪಲ್ಸ್ ನಗರಕ್ಕೆ ಹಡಗಿನಲ್ಲಿ ಪ್ರಯಾಣಿಸುತ್ತಿದ್ದಾಗ ಈತ ಟರ್ಕರ ಸೈನ್ಯಕ್ಕೆ ಸೆರೆ ಸಿಕ್ಕವನು. ಜೀವ ಹೋದರೂ ತಾನು ಹುಟ್ಟಿದ ಕ್ರಿಶ್ಚಿಯನ್ ಧರ್ಮವನ್ನು ಬಿಡಲಾರೆ ಎಂಬ ಪಣ ತೊಟ್ಟವನು. ತೊಟ್ಟ ಪಣವನ್ನು ಕಾಯ್ದುಕೊಳ್ಳುವುದು ಸುಲಭವೇ ? ಧರ್ಮದ ಈ ನಂಟು ಅವನನ್ನು ಎತ್ತ ಕೊಂಡೊಯ್ಯುವುದು?”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ