Advertisement

Category: ಅಂಕಣ

ಸಂಬಂಧಗಳಿಗೂ ಒಂದು ಕೊನೆಯ ದಿನ ಇದ್ದರೆ….!

ಪರಿಚಯ ಸ್ನೇಹಕ್ಕೆ ತಿರುಗಿ, ಸ್ನೇಹ ಮತ್ತಷ್ಟು ಆತ್ಮೀಯ, ಅಪ್ಯಾಯ ಬಂಧವಾಗಿ ಬದುಕು ಹಿತವೆನಿಸುವ ದಿನಗಳಲ್ಲಿ ಯಾರಿಗಾದರೂ ಅಂತಹದ್ದೊಂದು ಸಂಬಂಧ ಜಡವಾಗಬಹುದೆಂಬ ಸುಳಿವು ಸಿಕ್ಕಿರುವುದಿಲ್ಲ. ಈ ದಿನ, ಈ ಕ್ಷಣ, ಈ ಕಾಲ ಸದಾ ಹೀಗೆಯೇ ಇರುವುದೆಂಬ ನಂಬಿಕೆ, ಆಶಯದ ಬುನಾದಿಯ ಮೇಲೆ ಕಟ್ಟಿದ ಕನಸಿನ ಗೋಪುರ ಕುಸಿಯತೊಡಗಿದಾಗ ಶುರು ಸತ್ವಪರೀಕ್ಷೆ. ಜೊತೆಯಾಗಿ ಎದುರಿಸಿದ ಕಷ್ಟ ಸುಖ, ಕೂಡಿಟ್ಟ ನೆನಪುಗಳು, ಜೋಳಿಗೆ ತುಂಬಿದ ಅನುಭವಗಳು ಮಸುಕಾಗುವವರೆಗೂ ಮುಗಿಯದ ಉಮ್ಮಳಿಕೆ‌. ಇದು ಬರಿಯ ಪ್ರೇಮಿಗಳಿಗೆ ಸಂಬಂಧಿಸಿದ ವಿಷಯವಲ್ಲ.
ಎಸ್. ನಾಗಶ್ರೀ ಅಜಯ್ ಬರೆಯುವ “ಲೋಕ ಏಕಾಂತ” ಅಂಕಣ

Read More

ಮಳೆಬೆಳೆ, ಸಂತೋಷ, ನೆಮ್ಮದಿಗಳ ಕಣಜ

ಕಳೆದ ಇಡೀ ಬೇಸಿಗೆಯಲ್ಲಿ ನಮ್ಮ ರಾಣಿರಾಜ್ಯದಲ್ಲಿ ಮಳೆ ಎಂಬುದು ಮರೀಚಿಕೆಯಾಗಿತ್ತು. ಬೇಸಿಗೆ ಬರುವುದಕ್ಕೂ ಮುನ್ನ ಸರ್ಕಾರವು ಬರಲಿರುವ ಚಂಡಮಾರುತಗಳ ಬಗ್ಗೆ, ಮಳೆಪ್ರವಾಹಗಳ ಬಗ್ಗೆ ಅದೇನೆಲ್ಲಾ ಎಚ್ಚರಿಕೆ ಕೊಟ್ಟಿತ್ತು ಎಂದರೆ ದೂರಪ್ರವಾಸಕ್ಕೇನಾದರೂ ಹೋದರೆ ಮನೆಕಡೆ ಪರಿಸ್ಥಿತಿ ಏನಪ್ಪಾ ಎಂದೆಲ್ಲ ಚಿಂತೆಯಾಗಿತ್ತು. ಹಾಗೇನೂ ಆಗದೆ ಕಡೆಗೆ ನೆಟ್ಟಗೊಂದು ಸರಿಯಾದ ಮಳೆಯೂ ಬೀಳದೆ, ಬೇರೊಂದು ತರಹದ ಚಿಂತೆಯಾಗಿತ್ತು. ಬಿಸಿಲು ಹೆಚ್ಚಾಗಿ, ಮಳೆನೀರು ಕೊಯ್ಲಿನ ಟ್ಯಾಂಕ್ ಪೂರಾ ಖಾಲಿಯಾಗಿ, ಏನೊಂದೂ ತರಕಾರಿ ಬೆಳೆಯಲಿಲ್ಲ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ಅಂಕಣ

Read More

ನಿನ್ನೆ ಇದ್ದದ್ದು ಇವತ್ತು ಮಂಗಮಾಯ!

ಒಮ್ಮಿಂದೊಮ್ಮೆಲೆ ಮೂಡುತ್ತಿದ್ದ ಆ ಕಳೆ ನಮ್ಮಲ್ಲಿ ಚಿಂತೆ ಉಂಟುಮಾಡಿದ್ದು ಹೌದು. ಅಂತಹ ಗಿಡಗಳು ಬೆಳೆಯುವಂತೆ ಯಾರಾದರೂ ಬೇಕಂತಲೇ ಒಂದಿಷ್ಟು ಬೀಜಗಳನ್ನು ನಮ್ಮ ಭತ್ತದ ಬೆಳೆಗಳ ನಡುವೆ ಎಸೆದಿರಬೇಕು ಎಂಬ ಸಂಶಯ ನಾಗಣ್ಣ ಅವರಿಗೆ ಮೂಡಿತು. ಇದ್ದರೂ ಇದ್ದೀತು ಅಂತ ನನಗೂ ಅನಿಸಿತು. ಆದರೆ ನಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯವೋ ಅದನ್ನು ಮಾಡೋಣ ಅಂತ ಸುಮ್ಮನಾದೆ. ಒಂದು ಮೂಟೆ ಭತ್ತ ಬಂದರೂ ಸಾಕು, ಒಂದಿಷ್ಟು ದಿನ ವಿಷರಹಿತ ಅನ್ನ ಉಣ್ಣಬಹುದು ಎಂಬ ಸಣ್ಣ ಆಸೆ ನಮಗಿತ್ತು ಅಷ್ಟೇ!
ಗುರುಪ್ರಸಾದ ಕುರ್ತಕೋಟಿ ಬರೆಯುವ “ಗ್ರಾಮ ಡ್ರಾಮಾಯಣ” ಅಂಕಣ ನಿಮ್ಮ ಓದಿಗೆ

Read More

ಮಹಿಳಾ ಕ್ರಿಕೆಟ್ ಲೋಕದ‌ ತಾರೆಯರು….

ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

ಕಾವ್ಯ ಸಾಗರದಲ್ಲೊಂದು ‘ಒದ್ದೆಗಣ್ಣಿನ ದೀಪ’….

ಈ ಎಲ್ಲ ಕವಿತೆಗಳೂ ವಿವಿಧ ವಿಷಯಗಳನ್ನು ಕುರಿತು ಮಾತನಾಡಿವೆ. ಧರ್ಮ, ರಾಜಕೀಯ, ಪ್ರಭುತ್ವ, ನಿರಂಕುಶಾಧಿಕಾರ, ಕೋಮುವಾದ, ಧರ್ಮಾಂಧತೆ, ಬಡತನ, ಹಸಿವು, ಗೊಡ್ಡು ಸಂಪ್ರದಾಯ, ಪ್ರೇಮ, ಅಗಲಿಕೆ, ಸಾವು ಇತ್ಯಾದಿಗಳು ಸೇರಿಕೊಂಡಿವೆ. ಕಾವ್ಯದ ಕುರಿತು ಹೆಚ್ಚು ಗಂಭೀರ ಚರ್ಚೆಗಳಾಗುತ್ತಿಲ್ಲ ನಿಜ. ಆದರೆ ನಿಜವಾದ ಕಾವ್ಯಕ್ಕೆ ಇಂಥ ಔಪಚಾರಿಕ ಚೌಕಟ್ಟುಗಳೇಕೆ ಬೇಕು? ಸತ್ವಯುತವಾದ ಕಾವ್ಯ ಎಂದೆಂದಿಗೂ ತನ್ನ ಬೆಲೆಯನ್ನು ಕಳೆದುಕೊಳ್ಳುವುದಿಲ್ಲ. ಅಭಿಷೇಕ್‌ ವೈ.ಎಸ್. ಬರೆಯುವ “ಕಾವ್ಯದ ಹೊಸ ಕಾಲ” ಅಂಕಣದಲ್ಲಿ ಚಾಂದ್‌ ಪಾಷಾ ಎನ್.ಎಸ್. ಕವನ ಸಂಕಲನದ ಕುರಿತು ಬರೆದಿದ್ದಾರೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ