Advertisement

Category: ಅಂಕಣ

ಕೈತೋಟಗಾರರ ಖಂಡಾಂತರ ಕಥೆಗಳು: ವಿನತೆ ಶರ್ಮ ಅಂಕಣ

ಆಸ್ಟ್ರೇಲಿಯಾದಲ್ಲಿ ನಡು-ಚಳಿಗಾಲದ ಜುಲೈ ತಿಂಗಳು ಮುಗಿಯುತ್ತಾ ಇರುವಾಗ ಹಗಲು ಬೆಳಕಿನ ಅವಧಿ ಹೆಚ್ಚುತ್ತಿದೆ. ಅತ್ತ ಬ್ರಿಟನ್ನಿನಲ್ಲಿರುವ ನಮ್ಮ ಬಂಧುಗಳು ಅವರ ‘ಸೂರ್ಯ ಮುಳುಗದ’ ಬೇಸಿಗೆ ದಿನಗಳ ಬಗ್ಗೆ ಉತ್ಸಾಹದಿಂದ ಮಾತನಾಡುವಾಗ ಇತ್ತ ನಾನು ಆಸ್ಟ್ರೇಲಿಯಾದ ನಮ್ಮ ರಾಣಿರಾಜ್ಯದಲ್ಲಿ ಕೂಡ ದಿನಕರನ ಕೃಪೆ ಜಾಸ್ತಿಯಾಗುತ್ತಿದೆ, ಎನ್ನುತ್ತೀನಿ.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಅಮೆರಿಕಾದ ಶಾಲೆಗಳು: ಎಂ.ವಿ. ಶಶಿಭೂಷಣ ರಾಜು ಅಂಕಣ

ಮಕ್ಕಳು ಕಾಲೇಜಿಗೆ ಸೇರಿ, ಓದು ಮುಗಿಸಿ ಕೆಲಸಕ್ಕೆ ಸೇರಿಕೊಂಡು ತಮ್ಮ ಜೀವನದಲ್ಲಿ ನಿರತರಾಗುತ್ತಾರೆ. ತಂದೆ ತಾಯಿಯರಿಗೆ ನೆಂಟರಾಗಿಬಿಡುತ್ತಾರೆ. ದೇಶ ತುಂಬಾ ದೊಡ್ಡದಿರುವುದರಿಂದ ಹತ್ತಿರದಲ್ಲೇ ಕೆಲಸ ಸಿಗಲು ಸಾಧ್ಯವಾಗುವುದಿಲ್ಲ. ಮಕ್ಕಳು ತಂದೆ ತಾಯಿ ಜೊತೆ ಇರಲು ಬಯಸುವುದೂ ಇಲ್ಲ. ರಜೆಯ ಸಮಯದಲ್ಲಿ ಮನೆಗೆ ಬಂದು ಇದ್ದು ಹೋಗುತ್ತಾರೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಸಮ-ಬೆಸಗಳ ಅರಿವು, ಹರಿವು: ವಿನತೆ ಶರ್ಮ ಅಂಕಣ

ನಮ್ಮ ರಾಣಿರಾಜ್ಯದ ರಾಜಧಾನಿ ಬ್ರಿಸ್ಬೇನ್ ನಗರಕ್ಕೆ ಭಾರತದ ಹೆಸರುವಾಸಿ ರೆಸ್ಟರೆಂಟ್ ‘ಶರವಣ ಭವನ’ ಕಾಲಿಟ್ಟಿದೆ. ಇದೇನು ಒಂದು ಹೇಳಿಕೊಳ್ಳುವಂತಹ ಸುದ್ದಿಯಾ ಎಂದು ಹುಬ್ಬೇರಿಸಬೇಡಿ ಎಂಬ ಕಳಕಳಿಯ ವಿನಂತಿ. ಸಿಡ್ನಿ, ಮೆಲ್ಬೋರ್ನ್ ನಗರಗಳಲ್ಲಿ ಶರವಣ ಭವನವು ಬಂದು ನೆಲೆಯೂರಿ ಅಲ್ಲಿನ ಎಲ್ಲರೂ ಊಟ ತಿಂಡಿಗಳನ್ನು ಸವಿಯುತ್ತಿದ್ದಾಗ ಆಸ್ಟ್ರೇಲಿಯಾದ ಬೇರೆ ನಗರಗಳಲ್ಲಿ ದಕ್ಷಿಣ ಭಾರತೀಯರು ಹೊಟ್ಟೆ ಉರಿಸಿಕೊಳ್ಳುತ್ತಿದ್ದರು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ”

Read More

ಸಾಹೇಬರ ಟೇಪಿನೊಳಗೆ ನೀಲಿಯ ಗೋವಿಂದ: ಸುಧಾ ಆಡುಕಳ ಅಂಕಣ

ಬೇರೆ ದಿನಗಳಲ್ಲಿ ಬಾಯಿ ಮುಚ್ಚದಂತೆ ಸೋಬಾನೆ ಪದ ಹೇಳುವ ಗಣಪಿ, ಗೋಯ್ದು ಎಲ್ಲರನ್ನೂ ಎಷ್ಟು ಒತ್ತಾಯಿಸಿದರೂ ಬಾಯಿಬಿಡಲಿಲ್ಲ. “ಅದ ಪೆಟ್ಟಿಗಿ ಮುಂದೆಲ್ಲ ಹೇಳೂಕೆ ಆಗೂದಿಲ್ವೆ. ಹೆದ್ರೀಕಿ ಬರ್ತದೆ. ದೆನಿ ನಡಗಿ ಗಂಟಲು ಕಟ್ಟೋಯ್ತದೆ. ಮತ್ತೆ ಸಾಯೇಬ್ರು ಕೇಳಿದ್ರೆ ಕಿವಿ ಮುಚ್ಕಬೇಕಾಗೂದು.” ಎನ್ನುತ್ತಾ ಹಾಡಲು ನಿರಾಕರಿಸಿದರು. ಸಾಯೇಬರನ್ನು ನಿರಾಸೆಗೊಳಲಿಸಲು ಇಷ್ಟವಿಲ್ಲದ ನೀಲಿಯ ಅಪ್ಪ ಯಾವುದಾದರೂ ಹಾಡನ್ನು ಹೇಳುವಂತೆ ಮಗಳನ್ನು ಪುಸಲಾಯಿಸಿದರು.
ಸುಧಾ ಆಡುಕಳ ಬರೆಯುವ “ಹೊಳೆಸಾಲು” ಅಂಕಣ

Read More

ಅಮೆರಿಕಾದ ಸ್ವಾತಂತ್ರೋತ್ಸವ: ಎಂ.ವಿ. ಶಶಿಭೂಷಣ ರಾಜು ಅಂಕಣ

ಅಮೆರಿಕಾದ ಪೌರತ್ವ ಮತ್ತು ವಲಸೆ ಸೇವಾ ಸಂಸ್ಥೆ ಈ ವರುಷದ ಸ್ವಾತಂತ್ರ್ಯ ದಿನವನ್ನು ಸುಮಾರು ಹನ್ನೊಂದು ಸಾವಿರ ಜನರಿಗೆ ಅಮೆರಿಕದ ಪೌರತ್ವ ಕೊಟ್ಟು ವಿಶೇಷವಾಗಿ ಆಚರಿಸುತ್ತಿದೆ. ಅಮೆರಿಕಾದ ಜನ ಸ್ವತಂತ್ರ ಪಡೆದು ತುಂಬಾ ಮುಂದೆ ಹೋಗಿದ್ದಾರೆ. ಪ್ರಪಂಚದ ಶ್ರೀಮಂತ ರಾಷ್ಟ್ರವನ್ನಾಗಿ ಮಾಡಿದ್ದಾರೆ. ಬಹುತೇಕ ಎಲ್ಲಾ ವಲಯಗಳಲ್ಲೂ ಬಲಾಢ್ಯ ದೇಶವಾಗಿ ಅಮೆರಿಕಾ ಹೊರಹೊಮ್ಮಿದೆ. ಪ್ರಪಂಚದ ಇತರ ದೇಶಗಳ ತನ್ನ ಪ್ರಭಾವ ಬೀರುವಷ್ಟು ಬೆಳೆದಿದೆ.
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ