Advertisement

Category: ಅಂಕಣ

ಆಸ್ಟ್ರೇಲಿಯಾದ ಎನ್‌ಡಿಐಎಸ್‌ ಅನುದಾನದ ಏಳುಬೀಳುಗಳು: ಡಾ. ವಿನತೆ ಶರ್ಮ ಅಂಕಣ

ಈ NDIS ಸಹಾಯವನ್ನು ಪಡೆಯಲು ಕೆಲವು ಅರ್ಹತಾ ಮಾನದಂಡಗಳಿವೆ. ಅನುದಾನವನ್ನು ಕೋರಲು ಅಭ್ಯರ್ಥಿಗಳು ತಮಗಿರುವ ಅಂಗ ಮತ್ತು ಮಾನಸಿಕ ನ್ಯೂನತೆಗಳ ತಪಾಸಣಾ ವರದಿಗಳನ್ನು ಸಲ್ಲಿಸಬೇಕು. ತಮ್ಮ ಕುಟುಂಬ ವಾರ್ಷಿಕ ಆದಾಯ, ಸ್ಥಿರ, ಅಸ್ಥಿರ ಆಸ್ತಿ ವಿವರಗಳು, ಇರುವ ಸಾಮರ್ಥ್ಯಗಳ ಬಳಕೆ, ದೌರ್ಬಲ್ಯಗಳಿಂದ ಆಗುತ್ತಿರುವ ಪರಿಣಾಮ, ಹೀಗೇ ಅನೇಕ ದಾಖಲೆಗಳನ್ನು ಒದಗಿಸಬೇಕು. ಇವನ್ನೆಲ್ಲಾ ಪಡೆಯುವುದು, ಒದಗಿಸುವುದು ಸುಲಭದ ಮಾತಲ್ಲ. ಅನೇಕರಿಗೆ ಇದು ದೊಡ್ಡ ಚಾಲೆಂಜ್. ಇವರೊಡನೆ ಇವರ ಕುಟುಂಬ ಸದಸ್ಯರೂ ಕಣಕ್ಕಿಳಿದು ಪರದಾಡಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

 ಎಐ ಯುಗ, ಹುಡುಕಾಟ, ಚಾರಣಪ್ರೀತಿ ಹಾಗೂ `ಘಾಂದ್ರುಕ್’…: ಡಾ. ಎಲ್.ಜಿ. ಮೀರಾ ಅಂಕಣ

`ಮೋಕ್ಷ ಹುಡುಕುತ್ತಾ ಪ್ರೀತಿಯ ಬಂಧನದಲ್ಲಿ’ – ಲಂಕೇಶರ ಲೇಖನ ನೆನಪಾಗುತ್ತೆ. ಬಿಟ್ಟೇನೆಂದರೂ ಮನುಷ್ಯನಿಗೆ ಮನುಷ್ಯರ ಸಹವಾಸವನ್ನು ಬಿಡಲು ಸಾಧ್ಯವೇ? `ಯಾರ ಹತ್ತಿರವೂ ನಾನು ಮಾತಾಡುವುದಿಲ್ಲ, ಮನುಷ್ಯರ ಸಹವಾಸವೇ ಬೇಡ’ ಎಂದುಕೊಂಡ ಸಿದ್ಧಾರ್ಥನು ಕೆಲವು ದಿನ ಹೀಗಿದ್ದರೂ ನಂತರ ನಿಧಾನವಾಗಿ ಮನುಷ್ಯರ ಸಂಗ, ಸಹವಾಸ ಬೆಳೆಸುತ್ತಾ ಹೋಗುವುದು, ಸೋಫಿಯಾಳ ಪ್ರೀತಿಯಲ್ಲಿ ತಲ್ಲೀನನಾಗುವುದು, ಹಾಗೂ ತಾನು ನೋಡಿದ ವಿವರಣೆಗೆ ಮೀರಿದ ಹಿಂಸೆಯಿಂದ ಮನುಷ್ಯರ ಬಗೆಗೆ ತೀವ್ರ ಅಪನಂಬಿಕೆ ಬೆಳೆಸಿಕೊಂಡಿದ್ದ ಸೋಫಿಯಾಳು ಸಿದ್ಧಾರ್ಥನನ್ನು ಹೃದಯಕ್ಕೆ ಹಚ್ಚಿಕೊಳ್ಳುವುದು – ಇವು ಏನನ್ನು ಸೂಚಿಸುತ್ತವೆ?
ಡಾ. ಎಲ್.ಜಿ. ಮೀರಾ ಬರೆಯುವ “ಮೀರಕ್ಕರ” ಅಂಕಣ

Read More

ಮನದ ಕಿಟಕಿ: ರವೀಂದ್ರ ನಾಯಕ್ ಸಣ್ಕಕ್ಕಿಬೆಟ್ಟು ಅಂಕಣ

ಮನೆಯ ರಾಮಾಯಣ ಮುಗಿಸಿ ಹೊರಗೆ ಬಂದು ಡ್ಯೂಟಿಗೆಂದು ಬೈಕ್ ಹತ್ತುವಾಗ ಆ ಗಂಡಸಿನ ಮುಖ ನೋಡಬೇಕು… ಯುದ್ಧ ನಂತರದ ನಿರ್ಮಲ ಶಾಂತಿ, ಆನಂದ ಅವರ ಮುಖದಲ್ಲಿ; ಜೀವಾವಧಿ ಶಿಕ್ಷೆ ಮುಗಿಸಿ ಈಗಷ್ಟೇ ಹೊರ ಬಂದ ಖೈದಿಯ ಸಂತೋಷದಂತೆ ನಿರಾಳ ಮುಖಭಾವ. ಸಂಜೆ ಮತ್ತೆ ಮನೆಯ ಬಾಗಿಲು ಬಡಿಯುವಾಗ ಮತ್ತದೇ ಬೇಸರ. “ಒಂದೇ ಮನೆಯಲ್ಲಿ ವಿಚ್ಭೇದಿತ ಮನಸ್ಸುಗಳು ಸಹಭೋಜನ ಮಾಡುತ್ತವೆ” ಎಂದು ಎಲ್ಲೋ ಓದಿದ್ದ ಮಾತು ಇವರನ್ನು ನೋಡಿದಾಗ ಅದೆಷ್ಟು ನಿಜ ಅನ್ನಿಸಿತು…
ರವೀಂದ್ರ ನಾಯಕ್ ಸಣ್ಣಕ್ಕಿಬೆಟ್ಟು ಅಂಕಣ “ಇನ್ನೊಂದು ಬದಿ”ಯ ಹನ್ನೆರಡನೆಯ ಬರಹ

Read More

‘ವಿಧವೆ’ ನಿಮ್ಮನ್ನು ತುಂಬ ಕಾಡಿದಳೆ?: ಕಾಸರವಳ್ಳಿಯವರೊಂದಿಗೆ ಒಂದು ಸಂದರ್ಶನ: ಸುಕನ್ಯಾ ಕನಾರಳ್ಳಿ ಅಂಕಣ

‘ನಾಯಿನೆರಳು’ ವಿನ ಮೂರನೆಯ ಭಾಗದಲ್ಲಿ ಪ್ರಭುತ್ವ ಹೆಚ್ಚು ಹೆಚ್ಚು ಮೂಗು ತೂರಿಸೋದನ್ನ ತೋರಿಸೋದಕ್ಕೆ ಪ್ರಯತ್ನಪಟ್ಟಿದೀನಿ. ಪೋಲೀಸು, ಕೋರ್ಟು, ಕೇಸು… ಅವು ಮಂದಿಯ ವೈಯುಕ್ತಿಕ ಜೀವನದ ನಿರ್ಧಾರಗಳು ಅನ್ನೋ ಅಂಶವನ್ನ ಗಣನೆಗೇ ತಗೊಳಲ್ಲ. ವೆಂಕಟಲಕ್ಷ್ಮಿಗೆ ವ್ಯವಸ್ಥೆಯ ಆಯಾಮಗಳ ಪರಿಚಯ ಇದೆ. ಜೊತೆಗೆ, ಸಮುದಾಯದ ಒಂದು ಪಾತ್ರ ‘ಸ್ವಲ್ಪ ದಿನ ಹಿಟ್ಲರ್ ಕಾಟ ಕೊಟ್ಟ. ಈಗ ಗಾಂಧಿ ಕಾಟ,’ ಅಂತ ಹೇಳುತ್ತೆ. ಅವರಿಬ್ಬರ ನಡುವಿನ ವ್ಯತ್ಯಾಸವೂ ಅವರಿಗೆ ಗೊತ್ತಿಲ್ಲ.
ಸುಕನ್ಯಾ ಕನಾರಳ್ಳಿ ಬರೆಯುವ “ಕಡೆಗಣ್ಣಿನ ಬಿಡಿನೋಟ” ಅಂಕಣದ ಇಪ್ಪತ್ತೈದನೆಯ ಬರಹ

Read More

ಸೆರಗ ಬಿಡು ಮರುಳೆ: ಜಯಲಕ್ಷ್ಮಿ ಪಾಟೀಲ್ ಅಂಕಣ

ಅಗತ್ಯವಿಲ್ಲದಿದ್ದರೂ, ಇಷ್ಟವಿಲ್ಲದಿದ್ದರೂ, ಪಾಲಿಸಲೇಬೇಕು ಎನ್ನುವುದು ಹೇರಿಕೆಯಾದಾಗ ಸಂಪ್ರದಾಯಗಳು ಸಂಕೋಲೆಗಳಾಗಿ ಹಿಂಸಿಸತೊಡಗುತ್ತದೆ. ಈ ಹೇರಿಕೆ ಕೇವಲ ಸಮಾಜದ್ದಲ್ಲ ನಮ್ಮೊಳಗಿನದೂ ಸಹ! ‘ಸಂಪ್ರದಾಯವನ್ನು ಬಿಟ್ಟು ನಡೆದಲ್ಲಿ ಏನಾದರೂ ಅವಘಡ ಸಂಭವಿಸಿದರೆ ಗತಿ ಏನು ಮುಂದೆ?!’ ಎನ್ನುವ ನಮ್ಮೊಳಗಿನ ಭೀತಿಯೇ ಅರ್ಧ ಮನುಷ್ಯರನ್ನು, ‘ಬಿಟ್ಟರೂ ಬಿಡಲಾರದೀ ಮಾಯೆ’ ಎಂದು ತ್ರಿಶಂಕು ಸ್ಥಿತಿಯಲ್ಲಿ ನೇತಾಡುವಂತೆ ಮಾಡುತ್ತದೆ. ಕಾಲಾಂತರದಲ್ಲಿ ಅಕ್ಷರ, ಹಣ, ಸಾರಿಗೆ ಮತ್ತು ಮಾಧ್ಯಮ ಇತ್ಯಾದಿ ಅನುಕೂಲತೆ ಎಲ್ಲರಿಗೂ ಎಟುಕತೊಡಗಿದಂತೆ, ಅಷ್ಟಿಷ್ಟು ಮೌಢ್ಯಗಳು, ಸಂಪ್ರದಾಯದ ಸಂಕೋಲೆಗಳು ಸಡಿಲಗೊಂಡರೂ, ತ್ರಿಶಂಕು ಸ್ಥಿತಿಯಿಂದ ಅಷ್ಟು ಸುಲಭದಲ್ಲಿ ಬಿಡುಗಡೆ ಸಿಗುವುದಿಲ್ಲ.
ಜಯಲಕ್ಷ್ಮಿ ಪಾಟೀಲ್ ಬರೆಯುವ “ಗರ್ದಿ ಗಮ್ಮತ್ತು” ಅಂಕಣ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ