Advertisement

Category: ದಿನದ ಅಗ್ರ ಬರಹ

ಅನಿಲ್‌ ಗುನ್ನಾಪೂರ ಬರೆದ ಈ ಭಾನುವಾರದ ಕತೆ

ದಿನಪತ್ರಿಕೆ ಓದುತ್ತ ಕುಳಿತಿದ್ದವನೊಬ್ಬ ‘ಅಲ್ರೀ ಅವ್ರಿಗೆ ಕೆಲಸ ಮಾಡ್ರಿ ಅಂತೀರಿ.. ಕೆಲಸ ಯಾರು ಕೊಡ್ತರ‍್ರಿ? ನೋಡಿದ್ರಲಾ ಮ್ಯಾಲ್ ಮಲಗಿದ್ದ ಸಾಹೇಬ್ರು ಬರಿ ಮುಟ್ಟಿದ್ರೆ ಹೆಂಗ್ ಹೊಡ್ದು ಕಳಸಿದ್ರು’ ಎಂದು ಮತ್ತೆ ದಿನಪತ್ರಿಕೆ ಓದುವುದರಲ್ಲಿ ಮಗ್ನನಾದ. ನಂತರದಲ್ಲಿ ಯಾರೂ ಏನೂ ಎನ್ನದೇ ತಮ್ಮ ಪಾಡಿಗೆ ತಾವು ಕುಳಿತರು. ಅವಳಿಗೆ ಹಾಗೆ ಹೊಡೆಯಬಾರದಿತ್ತೆನಿಸಿ, ನನ್ನ ಮೇಲೆ ನನಗೇ ಸಿಟ್ಟು ಬಂತು. ಅಕಸ್ಮಾತ್ ಅವಳು ತಿರುಗಿ ಹೊಡೆದಿದ್ದರೆ? ಅವಳು ನಗುತ್ತಲೇ ‘ಅದಕ್ಯಾಕ ಸಿಟ್ಟು ಮಾಡ್ಕೋತಿ ಮಾಮಾ.. ಮಲಗು ಮಲಗು’ ಎಂದು ನಗುನಗುತ್ತಲೇ ಹೋಗಿದ್ದು ಕಣ್ಮುಂದೆ ಬರುತ್ತಿತ್ತು.
ಅನಿಲ್‌ ಗುನ್ನಾಪೂರ ಹೊಸ ಕಥಾ ಸಂಕಲನ “ಸರ್ವೇ ನಂಬರ್-‌೯೭” ದ “ಗೋಲ್‌ಗುಂಬಜ್ ಎಕ್ಸ್‌ಪ್ರೆಸ್‌” ಕತೆ ನಿಮ್ಮ ಓದಿಗೆ

Read More

ಕಂಬನಿ ಮಿಡಿದ ಕರಾಳ ದಿನ: ಪೂರ್ಣೇಶ್‌ ಮತ್ತಾವರ ಸರಣಿ

ಹೊರಗೆ ನೋಡಿದರೆ ಚಂದಿರನ ಬೆಳಕಿತ್ತು! ನಮ್ಮೆದೆಗಳಲ್ಲಿ ಆವರಿಸಿದ್ದ ಗಾಢಾಂಧಕಾರವನ್ನು ಬಡಿದೋಡಿಸಲಾಗದ ಆ ಬೆಳಕು ಶೋಕ ಸೂಚನೆಗೆ ಹೊತ್ತಿಸಿದ್ದ ಸೊಡರಿನಂತೆಯೇ ನಮಗೆ ಗೋಚರಿಸಿತ್ತು! ಮಲಗ ಹೊರಟರೆ ಅವನದೇ ನೆನಪುಗಳು. ನಿದ್ದೆ ಬರುವಂತಿರಲಿಲ್ಲ… ಬಂದ ಅಲ್ಪ ಸ್ವಲ್ಪ ನಿದ್ದೆಯಲ್ಲೂ ಹೊರಗೆ ಅವನು ಬಂದಂತೆ, ನೋಡಿ ನಾವು ಅಚ್ಚರಿಪಟ್ಟಂತೆ, ಓಡಿ ಹೋಗಿ ಅಪ್ಪಿದಂತೆ ಕನಸುಗಳು.. ಎಚ್ಚರಗೊಂಡು ಕುಳಿತು, ಒಡನೆಯೇ ಬಾಗಿಲು ತೆರೆದು ಹೊರ ನಡೆದರೆ, “ಪ್ರಸನ್ನ, ಪ್ರಸನ್ನ,…” ಎಂದು ಕರೆದರೆ…. ಅಲ್ಲಿ ಅವನಿಲ್ಲ!
ಪೂರ್ಣೇಶ್‌ ಮತ್ತಾವರ ಬರೆಯುವ “ನವೋದಯವೆಂಬ ನೌಕೆಯಲ್ಲಿ…” ಸರಣಿಯ ಎಂಟನೆಯ ಬರಹ

Read More

ಸಮಾಜ ಮತ್ತು ದೇವರ ಕುದುರೆ: ಸಚಿನ್ ಎ ಜೆ ಬರಹ

ಇಲ್ಲಿ ಶಿಕ್ಷಣದ ಹಸಿವು ಎದ್ದು ಕಾಣುವಂತಹ ದೃಶ್ಯ, ಯಾವ ಗಂಡಸಿನ ಆಧಾರವಿಲ್ಲದೆ ತನ್ನ ಮಗನ ಭವಿಷ್ಯಕ್ಕಾಗಿ ಏನೂ ಅರಿಯದ ಹೆಂಗಸು ಕಚೇರಿ, ಶಾಲೆ ಇವುಗಳ ಹೋರಾಟದಲ್ಲಿ ಗೆಲ್ಲುವ ಸನ್ನಿವೇಶ ನಿಜಕ್ಕೂ ಅದ್ಭುತ “ಅವ್ವ ನಾನು ಓದಲೂ ಬೇಕು ನಂಗೆ ನೀನು ಬೇಕು” ಎನ್ನುವಂತಹ ಒಂದು ಬರಹ ಓದು ಮತ್ತು ಪ್ರೀತಿ ಎರಡು ಮನುಷ್ಯನ ಬಹುಮುಖ್ಯ ಅಂಗವಾಗಿದೆ ಎಂಬುದನ್ನು ತೋರಿಸಿಕೊಡುತ್ತದೆ ರಾಮಾಂಜಿಗೆ ಓದಿನಲ್ಲಿ ಅಪಾರ ಆಸಕ್ತಿ. ಹಾಗಾಗಿ ತನ್ನ ಮಗನನ್ನು ಓದಿಸುವ ಉದ್ದೇಶದಿಂದ ರಾಮಾಂಜಿಯ ತಾಯಿ ಶಿಕ್ಷಣವನ್ನು ಕೊಡಿಸುವಂತಹ ದೃಶ್ಯ, ಅಲೆಮಾರಿ ಜೀವನಕ್ಕೂ ಕೂಡ ಶಿಕ್ಷಣ ಅಗತ್ಯ ಎಂಬುದನ್ನು ಸಾಬೀತುಪಡಿಸುತ್ತದೆ.
ಎಸ್. ಗಂಗಾಧರಯ್ಯ ಕಥಾಸಂಕಲನ “ದೇವರ ಕುದುರೆ”ಯ ಕುರಿತು ಸಚಿನ್ ಎ ಜೆ ಬರಹ

Read More

ಉದರನಿಮಿತ್ಥಂ ಸುಳ್ಳಿನ ವೇಷಂ!!: ಬಸವನಗೌಡ ಹೆಬ್ಬಳಗೆರೆ ಸರಣಿ

ಆತನಕ ಎಲ್ಲಾ ಅಂದುಕೊಂಡಂತೆಯೇ ನಡೆದು ಇನ್ನೇನು ಛತ್ರದೊಳಗೆ ಎರಡು ಹೆಜ್ಜೆ ಹೋಗಿಲ್ಲ, ಅಷ್ಟರೊಳಗೆ ಪ್ರೌಢಶಾಲಾ ಗೆಳೆಯ, ನನ್ನ ಜ್ಯೂನಿಯರ್ ಒಬ್ಬ ಸಿಕ್ಕ. ನನ್ನ ಮುಖಪರಿಚಯ ಚೆನ್ನಾಗಿಯೇ ಇದ್ದ ಮಂಜುನಾಥನೇ ಅವನು! ನಾನು ಅವನ ಮುಖ ಕಂಡೊಡನೆಯೇ ತಬ್ಬಿಬ್ಬಾಗಿ, ನನ್ನ ಪರಿಚಿತರ ಮದುವೆಗೆ ಬಂದಿದ್ದೇನೆ ಎಂದು ಅವನ ಎದುರು ತೋರ್ಪಡಿಸಿಕೊಳ್ಳಲು, ಅವನು ಮಾತಾಡುವ ಮುನ್ನವೇ ‘ಏನ್ ಮಂಜು ಇಲ್ಲಿ?’ ಎಂದು ಪ್ರಶ್ನಿಸಿದೆ. ಅದಕ್ಕವನು ಅತ್ಯಾಶ್ಚರ್ಯ ಮುಖ ಭಾವದಿಂದ ‘ಅಣ್ಣಾ, ಇಲ್ಲಿ ನಡೆಯುತ್ತಿರುವುದು ನನ್ನ ಸ್ವಂತ ಅಕ್ಕನ ಮದುವೆ’ ಎಂದ! ಈಗ ತಬ್ಬಿಬ್ಬಾಗುವ ಸರದಿ ನನ್ನದಾಗಿತ್ತು.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಇಪ್ಪತ್ತೇಳನೆಯ ಕಂತು ನಿಮ್ಮ ಓದಿಗೆ

Read More

ಮಗನಂತೆ ಮಗಳನ್ನೂ ಕಾಣೋಣ: ಅನುಸೂಯ ಯತೀಶ್ ಸರಣಿ

ಆ ಹುಡುಗನನ್ನ ಎಬ್ಬಿಸಿ ಯಾಕೋ ನಿನ್ನ ತಂಗಿ ಶಾಲೆಗೆ ಬಂದಿಲ್ಲ? ಎಂದಾಗ ಇಂದು ಮನೆಯಲ್ಲಿ ಬಟ್ಟೆ ಒಗೆಯುವ ಕೆಲಸ ಇತ್ತು. ಅದಕ್ಕೆ ಅಮ್ಮ ರಜೆ ಹಾಕಿಸಿದ್ದಾರೆ ಮಿಸ್ ಎಂದನು. ನೀನು ಮಾತ್ರ ಶಾಲೆಗೆ ಬಂದಿದ್ದೀಯಾ? ನೀನು ಬಟ್ಟೆ ಒಗೆಯಲು ಹೋಗಲಿಲ್ಲವೇನು? ಎಂದು ಕೇಳಿದ್ದಕ್ಕೆ “ನಾನು ಹುಡುಗ ಮಿಸ್, ಬಟ್ಟೆ ತೊಳೆಯಲು ಹೋದರೆ ಯಾರಾದರೂ ನಗುತ್ತಾರೆ ಅಷ್ಟೇ” ಎಂದವನು, ಈ ಮಿಸ್‌ಗೆ ಅಷ್ಟು ಗೊತ್ತಿಲ್ಲವಾ? ಎಂಬ ಭಾವದಲ್ಲಿ ಗೆಳೆಯರೊಂದಿಗೆ ಮುಸಿಮುಸಿ ನಗಲಾರಂಭಿಸಿದ್ದ. ನನ್ನ ಮನಸ್ಸು ಈ ಲಿಂಗ ತಾರತಮ್ಯದ ಭಾವವನ್ನು ಕಂಡು ಖೇದಗೊಂಡಿತು.
ಅನುಸೂಯ ಯತೀಶ್ “ಬೆಳೆಯುವ ಮೊಳಕೆ” ಸರಣಿ ನಿಮ್ಮ ಓದಿಗ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ