Advertisement

Category: ಪುಸ್ತಕ ಸಂಪಿಗೆ

ಕರ್ಮನಿಷ್ಟೆಯಲ್ಲಿ ಜಯಕಂಡವನ ಕಥನ: ನಾರಾಯಣ ಯಾಜಿ ಬರಹ

ಮೊದಲು ಪ್ರಥಮ ಪುರುಷದಲ್ಲಿ ಪ್ರಾರಂಭಮಾಡಿದ ಹೆಗಡೆಯವರು ಇದ್ದಕ್ಕಿದ್ದಂತೆ ಅದನ್ನು ತೃತೀಯ ಪುರುಷದಲ್ಲಿ ಬರೆಯಲು ಪ್ರಾರಂಭಿಸುವುದು ಕುತೂಹಲಕಾರಿ. ಶೀರ್ಷಿಕೆಯಲ್ಲಿ ಹೇಳಿರುವಂತೆ ಇದು ಜಯರಾಮ ಹೆಗಡೆಯ ಜೀವನಕಥನ ಎನ್ನುವಾಗ ತನ್ನನ್ನು ತಾನು ಹೊರಗಡೆ ನಿಂತು ‘ಜಯರಾಮ’ ಎನ್ನುವ ಮೂಲಕ ಕಥನವನ್ನು ಹೇಳುವಾಗ ಮನಸ್ಸಿನ ಅನೇಕ ವಿಷಯಗಳನ್ನು ತೆರೆದಿಡಬಹುದು ಎನ್ನುವುದು ಅವರ ಅನಿಸಿಕೆಯಾಗಿರಬಹುದು. ಅದೂ ಅಲ್ಲದೇ ಲೇಖನನ್ನೂ ಸಹ ವಿಮರ್ಶೆಗೊಳಿಸಲು ಈ ರೀತಿಯ ಬರಹದಿಂದ ಸಾಧ್ಯ.
ಜಯರಾಮ ಹೆಗಡೆ ಜೀವನ ಕಥನ ‘ಬೀದಿಯ ಬದುಕು’ ಕೃತಿಯ ಕುರಿತು ನಾರಾಯಣ ಯಾಜಿ ಬರಹ ನಿಮ್ಮ ಓದಿಗೆ

Read More

ವಿಷಮಯ ವಿಶ್ವದ ವಿಷಾದ ಗಾಥೆ: ನಾಗೇಶ್‌ ಹೆಗಡೆ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ತನ್ನ ಮಕ್ಕಳಿಗಾಗಿ ಆಸ್ತಿ, ಐಶ್ವರ್ಯ ಸಂಪತ್ತುಗಳನ್ನೆಲ್ಲ ಮಾಡುತ್ತಾನೆ. ಆದರೆ ಪ್ರಕೃತಿ ಮಾನವನಿಗೆ ಕೊಟ್ಟ ನಿಸರ್ಗದತ್ತವಾದ ಸಂಪತ್ತನ್ನೆಲ್ಲ ಲೂಟಿ ಮಾಡುತ್ತಿದ್ದಾನೆ. ನಾವು ಪ್ರಕೃತಿಗೆ ಕೊಡಬೇಕಾದ ಗೌರವವನ್ನು ಕೊಡದೆ ಅವಿಧೇಯತೆಯಿಂದ ನಡೆಸಿಕೊಳ್ಳುತ್ತಾ ಬಂದಿದ್ದೇವೆ. ಪ್ರಕೃತಿಯ ಮುನಿಸನ್ನು ಎದುರಿಸಲು ನಾವು ಸಿದ್ಧರಿದ್ದೇವೆಯೇ, ಅದು ಸಾಧ್ಯವೇ? ಪ್ರಕೃತಿಯ ವಿರುದ್ಧ ಮನುಷ್ಯ ಗೆದ್ದಿದ್ದೇ ಆದರೆ ಮುಂದೆ ಅವನಿಗೆ ಸೋಲು ಕಟ್ಟಿಟ್ಟ ಬುತ್ತಿ’ ಎಂದು ಚಿಂತಕ ಯೂಜಿನ್ ಶುಮಾಕರ್‌ರ ಮಾತನ್ನು ಲೇಖಕರು ಉಲ್ಲೇಖಿಸುತ್ತಾರೆ.
ನಾಗೇಶ್‌ ಹೆಗಡೆ ಬರೆದ ‘ಪರಿಸರದ ಮಹಾ ದುರಂತಗಳು’ ಕೃತಿಯ ಕುರಿತು ಡಾ. ರಾಜೇಂದ್ರಕುಮಾರ್ ಕೆ.ಮುದ್ನಾಳ್ ಬರಹ

Read More

‘ಸೀತೆ ಹೂ’ ಅರಳುವ ಸಮಯ…: ಶಾಂತಾ ಜಯಾನಂದ್ ಕವನ ಸಂಕಲನಕ್ಕೆ ಎಚ್.ಆರ್.‌ ಸುಜಾತಾ ಮುನ್ನುಡಿ

ನಿಸರ್ಗ ಪ್ರೇಮ, ಸಂಸಾರ ಹೊಂದಾಣಿಕೆ, ಸಾಮಾಜಿಕ ನಡವಳಿಕೆ, ಸಾಮಾಜಿಕ ನ್ಯಾಯ, ಹೆಣ್ಣಿನ ಶೋಷಣೆ, ಎಲ್ಲವನ್ನೂ ಒರೆಗೆ ಹಚ್ಚುವ ಸಾಮರ್ಥ್ಯ ಶಾಂತಾ ಜಯಾನಂದರ ಕವನಗಳಲ್ಲಿ ಕಾಣಸಿಗುತ್ತವೆ. ರೂಪದರ್ಶಿ, ಕುಂಬಳ ಬಳ್ಳಿಯ ಹೂವು, ಸೀತೆಹೂ, ಸೀರೆ ಮಾರುವ ಹುಡುಗ, ವಿಮಾನ ನಿಲ್ದಾಣ, ಬುದ್ಧ, ನೀಲಿ ಕುರಿಂಜಿ, ಪಯಣ, ಸಾಲು ಮರದ ತಿಮ್ಮಕ್ಕ, ಪಂಚ ಪತಿವ್ರತೆಯರು, ಮುಂತಾದ ಕವನಗಳು ಜಗತ್ತಿನ ಚಲನೆಯನ್ನೂ , ಅದರಲ್ಲಿ ಉಳಿಯುವ ನೆನಪನ್ನು, ತಾತ್ವಿಕ ಧೋರಣೆಯನ್ನು ತೆರೆದು ತೋರುತ್ತವೆ.
ಶಾಂತಾ ಜಯಾನಂದ್ ಕವನ ಸಂಕಲನ “ಸೀತೆ ಹೂ” ಕೃತಿಗೆ ಎಚ್.ಆರ್.‌ ಸುಜಾತಾ ಮುನ್ನುಡಿ

Read More

‘ಕಾಲಾಯಾತಸ್ಮೈ ನಮಃ’: ಕೆ ಸತ್ಯನಾರಾಯಣ ಕಾದಂಬರಿಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

ಮಕ್ಕಳಿಗೆ ಯಾವ ಹಂತದಲ್ಲಿ ತಾಯಿ ತಂದೆಯರು ಬೇಕೆನಿಸುವುದಿಲ್ಲ ಅಥವಾ ಸಾಕೆನಿಸುತ್ತಾರೆ? ಎಂಬ ಗೊಂದಲದ ಆದರೆ ಪ್ರಸ್ತುತ ಪ್ರಶ್ನೆಯೂ ಇಲ್ಲಿದೆ! ನಮ್ಮ ತಲೆಮಾರಿನವರು ತಂದೆ ತಾಯಿಯರ ಮಾನಸಿಕ ಜಗತ್ತಿನಿಂದ ಕ್ರಮೇಣ ದೂರವಾದರೆ, ಇಂದಿನವರದು ಧಿಡೀರ್ ದೂರವಾಗುವಿಕೆ! ಭಾವನೆಗಳ ಘರ್ಷಣೆ! ಕೋಚಿಂಗ್ ಸೆಂಟರಿನಲ್ಲಿ ಡೆಪ್ಯೂಟಿ ಕರೆಸ್ಪಾಂಡೆಂಟ್ ಆಗಿದ್ದ ಮೇಲ್ ಮಧ್ಯಮ ವರ್ಗದ ರಂಗನಾಥ್ ಮತ್ತು ಶಿಕ್ಷಕಿ ಸುಧಾ ದಂಪತಿಗಳ ಮಕ್ಕಳು ವಿಕ್ರಮ್ ಹಾಗೂ ಪ್ರಾರ್ಥನಾ.
ಕೆ ಸತ್ಯನಾರಾಯಣ ಕಾದಂಬರಿ “ಕಾಲಜಿಂಕೆ”ಯ ಕುರಿತು ಸಿ ಬಿ ಶೈಲಾ ಜಯಕುಮಾರ್ ಬರಹ

Read More

ರಾಜ್ಕುಮಾರ್ ಅಂದ್ರ ಏನಂದ್ಕಂಡೆ?: ಎಂ. ಜವರಾಜ್‌ ಹೊಸ ಕಾದಂಬರಿಯ ಆಯ್ದ ಭಾಗ

ಪಂಚಾಯ್ತಿ ಆಫೀಸ್ ಮಗ್ಗುಲು ಬೀದಿಲಿದ್ದ ಕುಂಟ ಸಿದ್ದಪ್ಪನ ಮನೆಯ ಅಂಗಳದಲ್ಲಿ ಒಂದಷ್ಟು ಜನ ಮಾತಾಡ್ತ ನಿಂತಿದ್ದರು. ಅಲ್ಲಿಗೆ ನಾಕಾರು ಪೇಪರು ಬರುತ್ತಿದ್ದವು. ಕುಂಟ ಸಿದ್ದಪ್ಪ ಬಿಳಿಪಂಚೆ ಬಿಳಿ ಶರ್ಟು ಹಾಕೊಂಡು ಕ್ರಾಪ್ ತಲೆ ಬಾಚ್ಕೊಂಡು ಕಾಲಿನ ಮೇಲೆ ಕಾಲು ಹಾಕಿಕೊಂಡು “ಇದು ಗೋಕಾಕ್ ಚಳುವಳಿ ಅಂತ. ಅವ್ರೊಬ್ಬ ದೊಡ್ ಕವಿ. ಅವ್ರು ಸರ್ಕಾರಕ್ಕೆ ಬರ್ದ ಪತ್ರನ ಇಟ್ಕೊಂಡು ನಡಿತಿರ ಹೋರಾಟ ಇದು. ಏಯ್‌ ನೋಡ್ರಪ್ಪ, ಬಾಯಿಲ್ಲಿ” ಅಂತ ಕರೆದು, “ನೀನು ಐದ್ನೆ ಕ್ಲಾಸಾ? ನಾಕ್ನೆ ಕ್ಲಾಸಾ?” ಅಂದ. ನಾನು, ʼಹುʼ” ಎನ್ನುವವನಂತೆ ತಲೆದೂಗಿದೆ. “ಹೌದಾ? ಹೋಗು, ಇನ್ಮೇಲ ಇಂಗ್ಲಿಸ್ ಗಿಂಗ್ಲಿಸ್ ಓದಂಗಿಲ್ಲ, ಬರೀ ಕನ್ನಡ. ನಿನ್ತವು ಇಂಗ್ಲಿಸ್ ಬುಕ್ಸ್ ಇದ್ರ ತೂದು ಬಿಸಾಕಿ ಕನ್ನಡ ಇಟ್ಗ” ಅಂದ. ಅಲ್ಲೊಬ್ಬ ಕೇಳ್ತಿದ್ದವನು “ಇದ್ಕ ರಾಜ್ಕುಮಾರ್ ಯಾಕ್ ಮದ್ಯಕ್ ಬಂದ?” ಅಂತ ಕೇಳಿದ.
ಎಂ. ಜವರಾಜ್‌ ಹೊಸ ಕಾದಂಬರಿ “ಪೋಸ್ಟ್‌ಮ್ಯಾನ್‌ ಗಂಗಣ್ಣ” ಕೃತಿಯ ಆಯ್ದ ಭಾಗ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ