ಆರ್ಯಕನೆಂಬ ನಾಯಕ: ಸತೀಶ್ ತಿಪಟೂರು ಬರಹ
ನಾವು ಮಾಡುವ ರಂಗಕೃಷಿಯು ಪ್ರಾಮಾಣಿಕವಾಗಿದ್ದರೆ ಪ್ರತಿಕ್ಷಣವೂ ಹುಟ್ಟುವ ಅಹಂಕಾರವನ್ನು ವಿಸರ್ಜಿಸುತ್ತಲೇ ಇರುತ್ತದೆ ಎಂದು ಹೇಳಿದೆ. ಯಾರ ಸ್ಮೃತಿಗಳು ಸಮಾಜದ ನೋವಿನಿಂದ ಅದ್ದುಕೊಂಡಿರುತ್ತದೋ, ಸಮುದಾಯದ ಕಾಳಜಿಗಳಲ್ಲಿ ಬೆಸೆದುಕೊಂಡಿರುತ್ತದೋ, ಅಂತಹ ಪ್ರಕೃತಿಗಳು ಹಣ, ಅಧಿಕಾರ, ಪ್ರಭಾವಳಿಗಳಿಂದ ಒದಗಿಬರಬಹುದಾದ ಅಹಂಕಾರದಿಂದ ಮುಕ್ತವಾಗಿರುತ್ತದೆ. ಇಲ್ಲಿ ಯಾರ ಬೇರುಗಳು ಸಡಿಲವಾಗಿರುತ್ತದೋ ಅಂತಹವರ ಪ್ರಕೃತಿ ಪಲ್ಲಟವಾಗುತ್ತದೆ; ಮತ್ತು ಹಾಗೆ ಆದುದಕ್ಕೆ ಇರುವ ಕಾರಣಗಳನ್ನು ದೊಡ್ಡದು ಮಾಡುತ್ತಾ ತಮ್ಮ ಇರುವಿಕೆಗೆ ಸಮರ್ಥನೆಯನ್ನು ನೀಡುತ್ತದೆ ಎಂದು ಹೇಳಿದೆ. ಹಣ, ಅಧಿಕಾರ, ಪ್ರಭಾವಳಿಗಳನ್ನು ಧಾರಣೆ ಮಾಡಿಕೊಂಡು ಜೀರ್ಣಿಸಿಕೊಳ್ಳುವ ಶಕ್ತಿಬೇಕು.
ಸತೀಶ್ ತಿಪಟೂರು ಅವರ “ಮಣ್ಣಿನ ಬಂಡಿಯಲ್ಲಿ ಫುಕುವೋಕಾ” ಕೃತಿಯ ಮತ್ತೊಂದು ಅಧ್ಯಾಯ ನಿಮ್ಮ ಓದಿಗೆ