ಶಾಂತಿ, ಕ್ರಾಂತಿ, ಸ್ವಾತಂತ್ರ್ಯದ ಹಗಲುಗನಸು: ಡಾ. ವಿನತೆ ಶರ್ಮ
ಮೊದಲನೇ ಪ್ರಾಪಂಚಿಕ ಮಹಾಯುದ್ಧದಲ್ಲಿ ಭಾಗವಹಿಸಿದ್ದ ಆಸ್ಟ್ರೇಲಿಯನ್ ಸೈನಿಕರಲ್ಲಿ ಮೂಲನಿವಾಸಿಗಳೂ ಇದ್ದರು. ಆದರೆ ಯುದ್ಧದ ನಂತರ ದೇಶದ ಸರಕಾರಗಳು ಅವರ ಹೆಸರನ್ನು ನೆನಪಿಸಿಕೊಳ್ಳುವ ಪ್ರಯತ್ನವನ್ನು ಮಾಡಲಿಲ್ಲ. ಆಸ್ಟ್ರೇಲಿಯನ್ ಬಿಳಿ ಸೈನಿಕರಿಗೆ ಮತ್ತು ಅವರ ಕುಟುಂಬಗಳಿಗೆ ಎಲ್ಲಾ ರೀತಿಯ ಬಿರುದುಗಳು ಮತ್ತು ಸೌಲಭ್ಯ, ಸೌಕರ್ಯಗಳು ಲಭಿಸಿದವು. ಎರಡನೇ ಮಹಾಯುದ್ಧದ ನಂತರವೂ ಇದೇ ಕತೆಯಾಗಿದ್ದು ಈ ಬಾರಿ ಯುದ್ಧದಲ್ಲಿ ಭಾಗವಹಿಸಿದ್ದ ಮೂಲನಿವಾಸಿಗಳ ಹೆಸರುಗಳನ್ನೂ ಮಾತ್ರ ದಾಖಲಿಸಲಾಗಿತ್ತು.
ಡಾ. ವಿನತೆ ಶರ್ಮ ಹೊಸ ಕೃತಿ “ಅಬೊರಿಜಿನಲ್ ಆಸ್ಟ್ರೇಲಿಯಾಕ್ಕೊಂದು ವಲಸಿಗ ಲೆನ್ಸ್”ಯಿಂದ ಒಂದು ಬರಹ ನಿಮ್ಮ ಓದಿಗೆ