ನೊಂದವರ ಬಾಳಿಗೆ ಮುಲಾಮಾಗುವ ಟೀಚರ್
ಶಾಲಿನಿಗೆ ರುಸ್ತುಂ ಪಪ್ಪಾ ಏಕೆ ನನ್ನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತಾನೆ? ನನ್ನ ಬಗ್ಗೆ ಯಾಕೆ ಕಾಳಜಿ ತಗೊಳ್ತಾನೆ ಅನ್ನೋದು ಅವಳಿಗೆ ಯಕ್ಷ ಪ್ರಶ್ನೆಯಾಗಿತ್ತು. ತನ್ನ ಸಾಕು ತಾಯಿ ಮತ್ತು ಅವಳ ಚಿಕ್ಕಮ್ಮ ಒಂದು ದಿನ ಮಾತಾಡಿದ ಮಾತುಗಳನ್ನು ಕೇಳಿ ಕರಳು ಕತ್ತರಿಸಿದಂತಾಗಿ ರುಸ್ತುಂ ಪಪ್ಪಾನ ಕುರಿತು ಸತ್ಯದ ಅರಿವಾಗುತ್ತದೆ. ಬನದ ಹುಣ್ಣಿಮೆಗೆ ಸವದತ್ತಿ ಎಲ್ಲಮ್ಮನ ಗುಡ್ಡಕ್ಕೆ ಹೋದಾಗ ದೇವಿಯ ಪ್ರಸಾದವೆಂಬಂತೆ ರುಸ್ತುಂ ಅವರ ಕೈಗೆ ಬಂದ ಈ ಹಸುಗೂಸೆ ಈ ಶಾಲಿನಿ.
ವೈ.ಜಿ. ಭಗವತಿ ಬರೆದ ಮಕ್ಕಳ ಕಾದಂಬರಿ “ಮಕ್ಕಳು ಓದಿದ ಟೀಚರ್ ಡೈರಿ”ಕೃತಿಯ ಕುರಿತು ನಾಗರಾಜ್ ಎಂ. ಹುಡೇದ್ ಬರಹ