Advertisement

Category: ಪ್ರವಾಸ

ರಾಮನಾಥಪುರದ ದೇವಾಲಯಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ರಾಮನಾಥಪುರದ ದೇಗುಲಗಳನ್ನು ಕಾಲಕಾಲಕ್ಕೆ ಜೀರ್ಣೋದ್ಧಾರಮಾಡಿ ನವೀಕರಿಸಿರುವುದರಿಂದ ಈ ನಿರ್ಮಿತಿಗಳು ಯಾವ ಯಾವ ಕಾಲದ್ದೆಂದು ನಿರ್ಣಯಿಸುವುದು ಕಷ್ಟ. ರಾಮೇಶ್ವರ ದೇವಾಲಯವೊಂದು ಹೊಯ್ಸಳಕಾಲದ್ದಾಗಿದ್ದು ಇದನ್ನೂ ಉಳಿದ ದೇಗುಲಗಳನ್ನೂ ವಿಜಯನಗರದ ಆಳ್ವಿಕೆಯ ಕಾಲದಲ್ಲಿ ಜೀರ್ಣೋದ್ಧಾರ ಮಾಡಲಾಗಿದೆ. ಎಲ್ಲ ದೇಗುಲಗಳಿಗೂ ಪೌರಾಣಿಕ ಹಿನ್ನೆಲೆ ತಳುಕುಹಾಕಿಕೊಂಡಿದೆ.”

Read More

ಮೂಗೂರಿನ ದೇಶೇಶ್ವರ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ತ್ರಿಭಂಗಿಯಲ್ಲಿ ನಿಂತ ಭೈರವನ ಕೊರಳಿಗೆ ಸರ್ಪದ ಆಭರಣ. ಸುತ್ತಲಿನ ಪ್ರಭಾವಳಿಯಲ್ಲಿ ಮಕರಗಳೂ ಗಣದೇವತೆಗಳೂ ಕಂಡುಬರುತ್ತವೆ. ಸಪ್ತಮಾತೃಕೆಯರನ್ನು ಅವರವರ ವಾಹನಗಳೊಡನೆ ಚಿತ್ರಿಸಿರುವುದು ಗಮನಾರ್ಹ. ದ್ವಿಭುಜಗಳಿಂದ ಕೂಡಿದ ಸೂರ್ಯನ ವಿಗ್ರಹವು ಚಿಕ್ಕದಾಗಿದ್ದರೂ ಗಮನಸೆಳೆಯುತ್ತದೆ. ಎರಡೂ ಕೈಗಳಲ್ಲಿ ಕಮಲವನ್ನು ಧರಿಸಿದ ಸೂರ್ಯನ ಕಿರೀಟವು ಕೊಳಗದ ಆಕಾರದಲ್ಲಿದೆ.”

Read More

ಸುಗತ ಸಂಶಿರೋ ಚಿತ್ರೀಕರಣ: ಕುರಸೋವಾನ ಆತ್ಮಕತೆಯ ಮತ್ತೊಂದು ಪುಟ

“ಆಂತರಿಕ ಸಚಿವಾಲಯವು ಸಿನಿಮಾದ ಕುರಿತು ಏನು ಹೇಳಿದರು ಅನ್ನುವುದನ್ನು ಹೇಳುತ್ತೇನೆ. ಅದು ನೆನಪಾದರೇನೆ ಸಿಟ್ಟು ಉಕ್ಕುತ್ತದೆ. ಸಿಟ್ಟು ಮಾಡಿಕೊಳ್ಳುವುದು ನನ್ನ ಆರೋಗ್ಯಕ್ಕೆ ಒಳ್ಳೆಯದಲ್ಲ ಆದರೂ ಅದನ್ನು ಹೇಳುತ್ತೇನೆ. ಆ ಸಮಯದಲ್ಲಿ ಸಚಿವಾಲಯವು ನಿರ್ದೇಶಕನ ಮೊದಲ ಚಿತ್ರವನ್ನು ಅವನ ನಿರ್ದೇಶನ ಪರೀಕ್ಷೆಯಂತೆ ಪರಿಗಣಿಸುತ್ತಿದ್ದರು. ಸುಗತ ಸಂಶಿರೊ ಮುಗಿಯುತ್ತಿದ್ದಂತೆ…”

Read More

ಮಹಾಕೂಟದ ದೇಗುಲಗಳು: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮಹಾಕೂಟೇಶ್ವರ ದೇವಾಲಯವು ಕಾಶಿತೀರ್ಥ ಹಾಗೂ ಶಿವಪುಷ್ಕರಣಿಗಳೆಂಬ ಕೊಳಗಳ ಬದಿಯಲ್ಲಿದೆ. ಇಲ್ಲಿನ ಪುಷ್ಕರಣಿಯ ಮಂಟಪದಲ್ಲಿ ಪಂಚಮುಖ ಶಿವಲಿಂಗವಿರುವುದೊಂದು ವಿಶೇಷ. ಮಹಾಕೂಟೇಶ್ವರ ದೇವಾಲಯವು ದ್ರಾವಿಡಶೈಲಿಯ ಶಿಖರವನ್ನು ಹೊಂದಿರುವ ದೇವಾಲಯಗಳ ಪೈಕಿ ಕರ್ನಾಟಕದಲ್ಲೇ ಮೊದಲಿನದೆಂಬ ಕೀರ್ತಿಗೆ ಪಾತ್ರವಾಗಿದೆ. ಗರ್ಭಗೃಹ, ಪ್ರದಕ್ಷಿಣಾಪಥ, ನವರಂಗ ಹಾಗೂ ಮುಖಮಂಟಪಗಳನ್ನು ಹೊಂದಿರುವ ದೇಗುಲದ ಮುಂಭಾಗದಲ್ಲಿ ನಂದಿಯ ಮಂಟಪವೂ ಇದೆ.”

Read More

ಮೂಡಬಿದರೆಯ ಸಾವಿರಕಂಬದ ಬಸದಿ: ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿ

“ಮುಂದೆ ಕಾಣುವ ಬಸದಿಯ ಕಟ್ಟಡವು ಕಗ್ಗಲ್ಲಿನ ನಿರ್ಮಿತಿ. ಕಟ್ಟಡದ ಮೇಲುಭಾಗ ಮರದಿಂದ ಮಾಡಲ್ಪಟ್ಟಿದ್ದು ಹೆಂಚು ಹೊದಿಸಿದೆ. ಕರಾವಳಿಪ್ರದೇಶದ ಬಿಸಿಲು, ಗಾಳಿ, ಮಳೆಗಳನ್ನು ತಡೆಯಲು ಸಮರ್ಥವಾಗುವಂತಹ ವಾಸ್ತುಶೈಲಿಯುಳ್ಳ ನಿರ್ಮಾಣ. ಹಲವು ಮಂಟಪಗಳನ್ನುಳ್ಳ ಬಸದಿಯ ಕಟ್ಟಡದತ್ತ ಸೋಪಾನವೇರಿ ಹೋದರೆ ಮೊದಲಿಗೆ ನಕ್ಷತ್ರಾಕಾರದ ಮಂಟಪವನ್ನು ಕಾಣುವಿರಿ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ