Advertisement

Category: ವ್ಯಕ್ತಿ ವಿಶೇಷ

ಅನುಭವ ಬುತ್ತಿಯನ್ನು ಅಕ್ಷರವಾಗಿಸಿದ ಲೇಖಕಿ ಅರ್ನಾಕ್ಸ್‌

ಅರ್ನಾಕ್ಸ್ ಬೆಳೆದಿದ್ದು ಫ್ರಾನ್ಸಿನ ನಾರ್ಮಂಡಿ ಪ್ರಾಂತ್ಯದ ಯ್ವೆಟೊಟ್ ಎಂಬ ಪುಟ್ಟ ನಗರದಲ್ಲಿ. ಅವರ ತಂದೆ ಅಲ್ಲಿ ಒಂದು ಕಿರಾಣಿ ಅಂಗಡಿ ಮತ್ತು ಕೆಫೆಯನ್ನು ನಡೆಸುತ್ತಿದ್ದರು. ಅಲ್ಲಿಯ ಶಾಲೆಯಲ್ಲಿ ಕಲಿಯುತ್ತಿರುವಾಗಲೇ ಅವರಿಗೆ ಬಡತನವು ತಂದಿಡಬಹುದಾದ ಸಾಮಾಜಿಕ ತಾರತಮ್ಯದ ಅರಿವಾಯಿತು. ತಮ್ಮ ಬರವಣಿಗೆಯ ಐವತ್ತು ವರ್ಷಗಳಲ್ಲಿ ಅವರು ಬರೆದ ಕೃತಿಗಳ ಸಂಖ್ಯೆ ಇಪ್ಪತ್ತಕ್ಕಿಂತಲೂ ಹೆಚ್ಚು. ಹೆಚ್ಚಿನವು ಕಾದಂಬರಿಗಳಾದರೆ ಇನ್ನು ಕೆಲವು ನಾಟಕಗಳು, ಚಿತ್ರಕಥೆಗಳು. 2022ರ ನೊಬೆಲ್ ಪಾರಿತೋಷಕ ಫ್ರಾನ್ಸಿನ ಲೇಖಕಿ ಆನ್ ಅರ್ನಾಕ್ಸ್ ಕುರಿತು ಸುಧಾ ಆಡುಕಳ ಬರಹ

Read More

ಗಾಂಧೀ ಎಂಬ ಶಾಶ್ವತ ಸತ್ಯ

ಗಾಂಧೀಜಿಗೆ ಅಹಿಂಸೆ ಕೇವಲ ಒಂದು ಪರಿಕಲ್ಪನೆಯಲ್ಲ. ಅದು ಯಾರಿಗೂ ಯಾವುದೇ ನೋವನ್ನುಂಟು ಮಾಡಬಾರದೆಂಬುದನ್ನು ಮನಗಾಣಿಸಬೇಕು; ಕಾರಣ ದುರಾಲೋಚನೆಯೂ ಹಿಂಸೆ, ಅಸಹನೆಯೂ ಹಿಂಸೆ. ಅನ್ಯರಿಗೆ ಕಡೆಗಣಿಸುವುದೂ ಹಿಂಸೆ. ಅಷ್ಟೇ ಏಕೆ ಲೋಕಕ್ಕೆ ಅವಶ್ಯಕವಾದುದನ್ನು ತಾನೊಬ್ಬನೇ ಇಟ್ಟುಕೊಳ್ಳುವದೂ ಹಿಂಸೆಯೆ. ಇದರಿಂದ ಅಹಿಂಸೆಯೆಂದರೆ ಒಂದು ರೀತಿಯ ನಕಾರಾತ್ಮಕ ಧೋರಣೆಯೆಂದು ತಿಳಿಯಬೇಕಿಲ್ಲ. ಹೇಡಿತನವಂತೂ ಖಂಡಿತ ಅಲ್ಲ. ಮನುಬಳಿಗಾರ್‌ ಅವರು ಮಹಾತ್ಮಾ ಗಾಂಧೀಜಿಯ ಕುರಿತು ಬರೆದ ಲೇಖನವೊಂದು ನಿಮಗಾಗಿ

Read More

ಪುರಾಣ ವಾಙ್ಮಯದ ರಸಋಷಿ ದೇರಾಜೆ ಸೀತಾರಾಮಯ್ಯ

ಕಲೆಯು ಕಾಲಕ್ಕೆ, ಕಾಲವು ನಟನಿಗೆ ಅನುಗುಣವಾಗಿ ತಿರುವುಗಳನ್ನು ಪಡೆಯುತ್ತದೆ ಎನ್ನುವುದನ್ನು ಮರೆಯಬಾರದು.  “ಕಾವ್ಯದ ರಚನೆ ಎಂದರೆ ಅದು ಭಾವನೆಗಳಲ್ಲಿ ಮುಳುಗಿಹೋಗುವುದಲ್ಲ, ಆದರೆ ಭಾವನೆಗಳಿಂದ ಮುಕ್ತನಾಗುವುದು, ವ್ಯಕ್ತಿತ್ವವನ್ನು ಪ್ರದರ್ಶಿಸುವುದಲ್ಲ ಬದಲಾಗಿ ತನ್ನ ವ್ಯಕ್ತಿತ್ವದಿಂದ ಬಿಡುಗಡೆ ಹೊಂದುವುದು” ಎಂದು ಎಲಿಯಟ್‌ ಹೇಳುತ್ತಾನೆ. ದೇರಾಜೆಯವರ ಸಂದರ್ಭದಲ್ಲಿ ಇದನ್ನು ನಾವು ಚೆನ್ನಾಗಿ ಅನ್ವಯಿಸಬಹುದು. ನಾರಾಯಣ ಯಾಜಿ ಬರಹ

Read More

ಕಥಾಲೋಕದ ಆಯಾಮಗಳನ್ನು ಬದಲಿಸಿದ ತಿರುಮಲೇಶರು

ನವ್ಯ ಮತ್ತು ಈ ಪೀಳಿಗೆಯ ತರುಣ ಕತೆಗಾರರನ್ನು ಆಳವಾಗಿ ಪ್ರಭಾವಿಸಿದ ಕೆ. ವಿ. ತಿರುಮಲೇಶರು ಅನೇಕ ದೃಷ್ಟಿಯಿಂದ ಕನ್ನಡದ ಸಣ್ಣಕತೆಯ ಕಲಾತ್ಮಕ- ವೈಚಾರಿಕ ಆಯಾಮಗಳನ್ನು ಬದಲಿಸಿದರು. ಸಿದ್ಧ ಮಾನದಂಡಗಳಿಲ್ಲದೆ ನೇರವಾಗಿ ಆರಂಭಗೊಳ್ಳುವ ಇವರ ಕತೆಗಳು ಆಪ್ತವೆನಿಸುವ ನಿರೂಪಣ ವಿಧಾನವನ್ನು ಹೊಂದಿವೆ. ನಿರೂಪಣೆಗೆ ಸೂಕ್ತವಾದ ವಿಕಸನಶೀಲ ಭಾಷೆಯಿದೆ. ಸವಕಲು ಹಾದಿಯಿಂದ ಹೊಸ ಹಾದಿಯೊಳಗೆ ತವಕದಿಂದ ಮುನ್ನುಗ್ಗುವ ವೇಗವಿದೆ. ಹಲವಾರು ವರ್ಷಗಳಿಂದ ಬರೆಯುತ್ತಲೇ ಇರುವ ತಿರುಮಲೇಶರು ಸದಾ ಹೊಸತನ್ನೇ ಕಾಣಿಕೆಯಾಗಿ ನೀಡುತ್ತಿದ್ದಾರೆ. ಇಂದು ಕೆ.ವಿ. ತಿರುಮಲೇಶ್‌ ಅವರ ಹುಟ್ಟುಹಬ್ಬ. ಅವರು ಬರೆದ 
ʻಕೆಲವು ಕಥಾನಕಗಳುʼ  ಕಥಾಸಂಕಲನದ ಕುರಿತು ಡಾ. ಸುಭಾಷ್ ಪಟ್ಟಾಜೆ ಬರಹ ಈ ಸಂದರ್ಭದ ಓದಿಗಾಗಿ

Read More

ಬದಲಾದ ಜಗದಲ್ಲಿ ಕದಲದೆ ನಿಂತಿದ್ದ ರಾಣಿ

ಜಗತ್ತಿನ ಅತಿದೊಡ್ಡ ನಗರ ಲಂಡನ್. ಆದರೆ ಸಂತಸ ನೆಮ್ಮದಿಗಳು ನೆಲೆಸಿರುವ ಊರಲ್ಲ. ಕಾರ್ಮಿಕರ ಸಂಕಟ, ಕ್ರಾಂತಿಯ ಭಯ, ಇಡೀ ಪಟ್ಟಣವನ್ನು ಸ್ತಬ್ದವಾಗಿಸಬಲ್ಲ ಮುಷ್ಕರಗಳು ವಿಜೃಂಭಿಸುತ್ತಿದ್ದ, ಎರಡನೆಯ ಮಹಾಯುದ್ಧದ ಭೀಕರ ಆಘಾತಗಳಿಂದ ಕಕ್ಕಾಬಿಕ್ಕಿಯಾದ ಜಾಗ. ಅಂತಹ ಪ್ರಕ್ಷುಬ್ದ ಕಾಲದಲ್ಲಿ ಎಲಿಜೆಬೆತ್ ಹುಟ್ಟಿದ್ದು.ಆ ಪ್ರಕ್ಷುಬ್ಧತೆಯ ಸಹವಾಸದಿಂದ ಅವರಿಗೆ ಎಂದೂ ಬಿಡುಗಡೆ ಸಿಗಲೇ ಇಲ್ಲ. ಬ್ರಿಟನ್ನಿನ ಜನಸಾಮಾನ್ಯರ, ಕಾಮನ್ ವೆಲ್ತ್ ದೇಶಗಳ ಜನರ ಅಷ್ಟೇ ಏಕೆ ಸಂಪರ್ಕಕ್ಕೆ ಬಂದ ಜಗತ್ತಿನ ಎಲ್ಲ ಪ್ರಧಾನಿಗಳ, ಅಧ್ಯಕ್ಷರ, ಮಹಾನಾಯಕರ ಅಪಾರ ಪ್ರೀತಿ ಅಭಿಮಾನವನ್ನು ಸಂಪಾದಿಸಿದ ಮಹಾರಾಣಿ ಒಂದು ಶತಮಾನದ ರಾಜಕೀಯ ಸಾಮಾಜಿಕ ಆರ್ಥಿಕ ವೈಜ್ಞಾನಿಕ ಆರೋಗ್ಯ ಕ್ಷೇತ್ರಗಳ ಪ್ರಗತಿ ಮತ್ತು ದುರಂತಗಳಿಗೆ ಸಾಕ್ಷಿಯಾದವರು ನಿನ್ನೆಯಷ್ಟೇ ಅಗಲಿದ್ದಾರೆ.  ಅವರ ಕುರಿತು ಯೋಗೀಂದ್ರ ಮರವಂತೆ ಬರೆದ ಲೇಖವೊಂದು ಇಲ್ಲಿದೆ. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ