Advertisement

Category: ಸಂಪಿಗೆ ಸ್ಪೆಷಲ್

ಕೊಕ್….ಕೊಕ್ಕ್… ಕುಕ್ಕುಟಾಯಣ: ವಸಂತಕುಮಾರ್ ಕಲ್ಯಾಣಿ ಪ್ರಬಂಧ

ಸುಮಾರು ನಾಲ್ಕು ಮೂವತ್ತಕ್ಕೆ ಯಾವುದೋ ಕನಸಿನ ಲೋಕದಲ್ಲಿದ್ದವನಿಗೆ, ಎಂಪಿ ಶಂಕರ್ ವಜ್ರಮುನಿ, ತೂಗುದೀಪ ಶ್ರೀನಿವಾಸ್, ಪ್ರಭಾಕರ್, ಶಕ್ತಿಪ್ರಸಾದ್ ಮುಂತಾದವರೆಲ್ಲ ಒಟ್ಟಿಗೆ ಗಹಗಹಿಸಿ ನಕ್ಕ ಹಾಗೆ ದನಿ ಕೇಳಿ ಎಚ್ಚರವಾಯಿತು. ಕೆಲಕ್ಷಣದ ನಂತರ ಅದು ಚೇಚಿ ಮನೆಯ ಕೋಳಿಯ ಕೂಗು ಎಂಬ ಕಟು ವಾಸ್ತವ ಅರಿವಿಗೆ ಬಂತು. ಸರಿ ‘ಸುಸು’ ಮಾಡಿ ನೀರು ಕುಡಿದು ಮಲಗಿದರಾಯಿತು ಎಂದು, ಎಲ್ಲ ಮುಗಿಸಿ ಮಲಗಿದರೆ, ಅದರ ಆರ್ಭಟ ಇನ್ನಷ್ಟು ಹೆಚ್ಚಾಯಿತು.
ವಸಂತಕುಮಾರ್ ಕಲ್ಯಾಣಿ ಪ್ರಬಂಧ ನಿಮ್ಮ ಓದಿಗೆ

Read More

ನಮ್ಮ ಓದನ್ನು ರೂಪಿಸಿದ ಮಾಯಾದರ್ಪಣದ ಮಾಯಾವಿ: ಎಂ. ಎಸ್. ಶ್ರೀರಾಮ್ ಬರಹ

ದಿವಾಕರ್‌ಗೆ ಸಾಹಿತ್ಯದ ಬಗ್ಗೆ ಇರುವ ಆಳವಾದ ಒಳನೋಟಗಳು, ಸಂಗೀತ ಮತ್ತು ಸಿನಿಮಾಗಳ ಬಗ್ಗೆಯೂ ಇದೆ. ಬೇಂದ್ರೆಯವರ ಅನೇಕ ಕವಿತೆಗಳಿಗೆ ದಿವಾಕರ್ ರಾಗಸಂಯೋಜನೆ ಮಾಡಿದ್ದಾರೆ. ‘ಮಲ್ಲಿಗೆ’ಯಲ್ಲಿದ್ದಾಗ ಅನೇಕ ಪುಸ್ತಕಗಳ ಮುಖಪುಟಗಳನ್ನೂ ವಿನ್ಯಾಸ ಮಾಡಿದ್ದರು.
ಎಂಭತ್ತರ ಹೊಸ್ತಿನಲ್ಲಿರುವ ಹಿರಿಯ ಕಥೆಗಾರ ಎಸ್. ದಿವಾಕರ್ ಅವರ ಸಾಹಿತ್ಯ ಸಂಭ್ರಮದ ಕೃತಿ “ಪರಿಮಳದ ಪಡಸಾಲೆ”ಗೆ ಎಂ.ಎಸ್.‌ ಶ್ರೀರಾಮ್‌ ಬರೆದ ಬರಹ ನಿಮ್ಮ ಓದಿಗೆ

Read More

“ನಾವುಗಳಿಲ್ಲಿ ಪರಸ್ಪರರು”: ಮಹಾಲಕ್ಷ್ಮೀ ಕೆ. ಎನ್. ಬರಹ

ಇಳೆಗೆ ತಂಪು ಬೇಕು ವರುಣನಿಗೆ ಕಾಯ್ತಾಳೆ. ಅವನಿಗೆ ನೆಲೆಬೇಕು ಇವಳನ್ನೇ ಅರಸುತ್ತಾನೆ. “ಇವರಿಬ್ಬರದ್ದೂ ಇಲ್ಲಿ ಪರಸ್ಪರತೆ”. ಇದ್ದಕ್ಕಿದ್ದಂತೆ ಮೋಡ ಹೆಪ್ಪುಗಟ್ಟುತ್ತೆ, ಕಪ್ಪುಗಾಗುತ್ತೆ, ಕತ್ತಲಿನಂತಾಗುತ್ತೆ, ಎಲ್ಲವೂ ನಿಶ್ಶಬ್ಧವಾಗುತ್ತೆ, ಹಕ್ಕಿ ಹಿಂಡು ಗೂಡನ್ನರಸಿ ಚಿಲಿಪಿಲಿಗುಟ್ಟುತ್ತಾ ಬರುತ್ವೆ, ಜೋರುಗಾಳಿ ನಿಲ್ಲುತ್ತೆ, ಎಲ್ಲರೂ- ಎಲ್ಲವೂ ಬಾನಿಗೆ ಮುಖಮಾಡಿ ನೋಡುವಷ್ಟರಲ್ಲಿ ಧೋ…. ಅಂತ ಜಡಿ ಮಳೆ ಬಂದೇಬಿಡುತ್ತೆ.
ಮಹಾಲಕ್ಷ್ಮೀ ಕೆ. ಎನ್. ಬರಹ ನಿಮ್ಮ ಓದಿಗೆ

Read More

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

Read More

ಬಾಗಿಲಿಗೆ ಬಂದಿಹನು ಬಳೆಗಾರ: ಸ್ಮಿತಾ ರಾಘವೇಂದ್ರ ಬರಹ

ನನಗೂ ಒಳಗೊಳಗೇ ಗಾಭರಿ; ಮದುವೆಗೂ ಮುಂಚೆ ಡಜನ್ ಗಟ್ಟಲೆ ಬಳೆ ತುಂಬಿಕೊಂಡು ಒಂದೂ ಒಡೆಯದಂತೆ ಇಟ್ಟುಕೊಳ್ಳುತ್ತಿದ್ದೆನಲ್ಲ.. ಈಗ ಏನಾಯ್ತು. ಗಡಿಬಿಡಿಯಲ್ಲಿ ಕೆಲಸ ಮಾಡಿದ್ರೆ ಬಳೆ ಒಡದೆ ಹೋಗ್ತದೆ ನೋಡು ಅಂದ ಅಮ್ಮನ ಮಾತು ನೆನಪಾಗಿ ಸಮಾಧಾನವಾಗುತ್ತಿತ್ತಾದರೂ ಈ ಅಪಶಕುನ ಎನ್ನುವ ಭಯದಿಂದ ತಪ್ಪಿಸಿಕೊಳ್ಳಲು ಗಾಜಿನ ಬಳೆ ತೊಡುವುದನ್ನು ಕ್ರಮೇಣ ಬದಲಿಸಿದ್ದೆ.
ಬಳೆಗಾರ ಮತ್ತು ಬಳೆಗಳ ಕುರಿತು ಸ್ಮಿತಾ ರಾಘವೇಂದ್ರ ಕಲ್ಲೇಶ್ವರ ಬರಹ ನಿಮ್ಮ ಓದಿಗೆ

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ