Advertisement

Category: ಸರಣಿ

ಕೀರು ಟೇಸ್ಟ್: ಸುಮಾವೀಣಾ ಸರಣಿ

ಇನ್ನು ದೊಡ್ಡವರು ತಪ್ಪು ಬರೆಯುವುದಿಲ್ಲವೆ… ಅವರೂ ಬರೆಯುವರು ಚನ್ನೇಗೌಡ ಬರೆಯಲು ಚೆನ್ನೈಗೌಡ ಎಂದೊಮ್ಮೆ ಕೈ ತಪ್ಪಿನಿಂದ ಬಂದಿತ್ತು. ಒಮ್ಮೆ ಹೀಗೆ…. ಹಿತೈಷಿಗಳೊಬ್ಬರು ಬಹಳ ಸಂತೋಷದಿಂದ ವಾಟ್ಸ್ಆಪ್‌ಲ್ಲಿ ಸಂದೇಶಿಸುತ್ತಿದ್ದರು ಕಡೆಗೆ ಆದಷ್ಟು ಬೇಗ ಆಗಲಿ ಎಂದು ಟೈಪಿಸುವುದರ ಬದಲು ಆದಷ್ಟು ಬೇಗ ಅಗಲಿ ಎಂದಿದ್ದನ್ನು ನೋಡಿ ಕಣ್ ಕಣ್ ಬಿಟ್ಟಹಾಗೆ ಇನ್ನೊಬ್ಬರು ನಿಮ್ಮ ಬರಹ ಸತ್ವಯುತವಾಗಿದೆ ಎನ್ನುವ ಬದಲು ಸತ್ತಂತಿದೆ ಎಂದಿದ್ದರು…
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿಯ ಮೂರನೆಯ ಬರಹ

Read More

ಅಮಾನುಷ ಮನಸ್ಥಿತಿಗಳ ಮಧ್ಯೆ ಮನುಷ್ಯತ್ವದ ತಲಾಶು: ರಾಮ್ ಪ್ರಕಾಶ್ ರೈ ಕೆ. ಸರಣಿ

ನಾಪತ್ತೆಯಾಗಿದ್ದಾರೆ ಎಂಬ ನೋಟಿಸುಗಳು ಇನ್ನೂ ವಿಲೇವಾರಿಯಾಗದೆ ಕಚೇರಿ ಫಲಕದಲ್ಲಿ ಕುಳಿತುಕೊಂಡಿರುವುದೇ ಆ ಮನುಷ್ಯನ ಸ್ವಭಾವಕ್ಕೆ ಹಿಡಿದ ಕನ್ನಡಿ. ಅವನ ಸರಹದ್ದಿನಲ್ಲಿ ಸ್ಲಮ್ಮಿನ ಭಾರವಾದ ಉಸಿರುಗಳೇ ಹೆಚ್ಚಿದ್ದರಿಂದ, ಆ ಜೀವಗಳಿಗೆ ಅಲ್ಲಿ ಬೆಲೆ ಇರುತ್ತಿರಲಿಲ್ಲ. ಮಾನವೀಯತೆಯ ಬಗ್ಗೆ ಪುಟಗಟ್ಟಲೆ ಮಾತುಗಳು ಕೇಳಿಬಂದರೂ ನಮ್ಮ ಸುತ್ತಮುತ್ತಲೇ ಇರುವ ಖಾಲಿ ಕಿಸೆಯ ಜನರ ಜೀವ-ಜೀವನ ಸದಾ ಅನಾಥವಲ್ಲವೇ
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿಯಲ್ಲಿ ಹಿಂದಿಯ ‘ಸೆಕ್ಟರ್ -36’ ಸಿನಿಮಾದ ವಿಶ್ಲೇಷಣೆ

Read More

ಏಕೆ ಇಷ್ಟೊಂದು ದ್ವೇಷ!: ಕೆ. ಸತ್ಯನಾರಾಯಣ ಪ್ರವಾಸ ಸರಣಿ

ಇವರೆಲ್ಲ ಎಷ್ಟು ಸುಖವಾಗಿದ್ದಾರೆ, ಆರಾಮವಾಗಿದ್ದಾರೆ, ಯಾವುದೇ ಗೊಂದಲವಿಲ್ಲ, ತಳಮಳವಿಲ್ಲ. ಮುಖದಲ್ಲಿ ಅದೆಷ್ಟು ಜೀವಂತಿಕೆ, ಆರೋಗ್ಯ, ಉಲ್ಲಾಸ. ಯಾವುದರಲ್ಲೂ ಆತುರವಿಲ್ಲ, ಧಾವಂತವಿಲ್ಲ. ಪ್ರತಿ ಕ್ಷಣವನ್ನೂ ವಿವರವಾಗಿ, ವಿರಾಮವಾಗಿ ಅನುಭವಿಸುತ್ತಿದ್ದಾರೆ. ವಾಯುವಿಹಾರದ ಸಮಯದಲ್ಲಿ. ಟ್ರಾಮ್ ಒಳಗಡೆ ಕುಳಿತಾಗ, ಮಾರ್ಕೆಟ್‌ನಲ್ಲಿ ವ್ಯಾಪಾರ ಮಾಡುವಾಗ, ಸ್ಕೂಲ್ ಬಳಿ ಮಕ್ಕಳನ್ನು ಬಿಡಲು ಬರುವಾಗ ನೋಡಿದ್ದೇನೆ. ಎಲ್ಲರೂ ಬಿಳಿ ಬಣ್ಣದವರು, ಕೆಂಪು ಬಣ್ಣದವರು. ತುಂಬಾ ಸುಖವಾಗಿದ್ದಾರೆ, ಸಂತೃಪ್ತಿಯಿಂದಿದ್ದಾರೆ ಎಂಬ ಭಾವನೆ. ಸರಿ, ಅವರು ಸಂತೋಷವಾಗಿದ್ದರೆ, ಸುಖವಾಗಿದ್ದರೆ ನನಗೇಕೆ ಈ ರೀತಿಯ ಅಸೂಯೆ, ದ್ವೇಷ?
ಕೆ. ಸತ್ಯನಾರಾಯಣ ಬರೆಯುವ ಪ್ರವಾಸ ಪ್ರಬಂಧಗಳ “ನೆದರ್‌ಲ್ಯಾಂಡ್ಸ್ ಬಾಣಂತನ” ಸರಣಿ

Read More

ಮತ್ತೆ ಸಿಗುವ ಆಶಯದ ಪಯಣ: ಚಂದ್ರಮತಿ ಸೋಂದಾ ಸರಣಿ

ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು

Read More

ದೂರದೂರಲ್ಲಿ ಸಿಕ್ಕನು ಅಣ್ಣ: ಗುರುಪ್ರಸಾದ ಕುರ್ತಕೋಟಿ ಸರಣಿ

ಅದೇನು ಅದೃಷ್ಟವೋ ಕೂಡಲೇ ಉತ್ತರಿಸಿದ. ಬಾ ಅಂತ ಆಹ್ವಾನಿಸಿದ ಕೂಡ. ಪುಣ್ಯಕ್ಕೆ ಲ್ಯಾಂಡ್ ಲೈನ್‌ನಿಂದ ಕರೆ ಕೂಡ ಮಾಡಿದ. ಅವನ ಜೊತೆಗೆ ನಾನು ಬಹುಶಃ ಪ್ರಥಮ ಬಾರಿಗೆ ಮಾತಾಡಿದ್ದೆ! ನಾನು ಹುಟ್ಟುವುದಕ್ಕಿಂತ ಮೊದಲೆಯೇ ಅವನು ಭಾರತ ಬಿಟ್ಟು ಬಂದಿದ್ದ ಕಾರಣ ನಾನು ಅವನ ಜೊತೆಗೆ ಈಗಾಗಲೇ ಮಾತಾಡಬಹುದಾದ ಅವಕಾಶಗಳು ತೀರಾ ಕಡಿಮೆ ಇದ್ದವು. ಅವನು ಮಾತಾಡುವ ಶೈಲಿ ನನ್ನ ಅಪ್ಪನ ತರಹವೇ ಅನಿಸಿತು. ಬಹಳ ಖುಷಿ ಆಯ್ತು.
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ತೈದನೆಯ ಬರಹ
ಗದಗ ನನ್ನ ಹೃದಯಕ್ಕೆ ಬಹು ಹತ್ತಿರದ ಊರು. ಅಲ್ಲಿ ನಾನು ಹುಟ್ಟಿದ್ದು ಅಷ್ಟೇ ಆದರೂ ಅಲ್ಲಿ ಕಳೆದ ಕೆಲವೇ ಕೆಲವು

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ