Advertisement

Category: ಸರಣಿ

ತಾಷ್ಕೆಂಟ್‌ಗೆ ವಿದಾಯ

ಯುದ್ಧದ ಹಿಂಸೆ ಮತ್ತು ಅಸಹಾಯಕತೆಯನ್ನು ಸಹಿಸುತ್ತ, ಸಾವು ನೋವು ಅನುಭವಿಸುತ್ತ ಮುನ್ನಡೆಯುವ ಛಲ ಲೋಕದ ಜನಸಮುದಾಯಗಳಿಗೆ ಅದು ಹೇಗೆ ಬರುವುದೊ! ಬಹುಶಃ ಅನುಭವಿಸಿದಾಗಲೇ ಗೊತ್ತಾಗುವುದು. ಇದೇ ಉಜ್ಬೆಕಿಸ್ತಾನ ಮೂಲದ ಮೊಘಲ ಸಂತತಿಯ ಔರಂಗಜೇಬ್, ನನ್ನ ಜನ್ಮಸ್ಥಳ ವಿಜಯಪುರದ ಮೇಲೆ ದಂಡೆತ್ತಿ ಬಂದು ಆದಿಲಶಾಹಿ ಸಾಮ್ರಾಜ್ಯವನ್ನು ಹಾಳುಗೆಡವಿದ. ಅನೇಕ ಸೂಫಿಸಂತರ ಕೊಲೆ ಮಾಡಿದ. ಯುದ್ಧದಲ್ಲಿ ಯಾರು ಮುಸ್ಲಿಮರು? ಯಾರು ಹಿಂದುಗಳು? ಯಾರು ಕ್ರೈಸ್ತರು? ಯುದ್ಧದಲ್ಲಿ ಧರ್ಮವಿಲ್ಲ, ನೀತಿಯಿಲ್ಲ, ನ್ಯಾಯವಿಲ್ಲ. ಅದು ಕೇವಲ ಯುದ್ಧ. ಗೆದ್ದವರನ್ನೂ ಆರ್ಥಿಕವಾಗಿ ಮತ್ತು ನೈತಿಕವಾಗಿ ಸೋಲಿಸುವ ಯುದ್ಧ.
ರಂಜಾನ್‌ ದರ್ಗಾ ಬರೆಯುವ ‘ನೆನಪಾದಾಗಲೆಲ್ಲ’ ಸರಣಿಯ 47ನೇ ಕಂತು ಇಲ್ಲಿದೆ.

Read More

ಚಿತೆಯ ಜೊತೆ ಚಿತೆಯಾಗಿದ್ದೆ

ಆ ಹೆಂಗಸು ನನ್ನತ್ತ ಎರಡು ಮೂರು ಬಾರಿ ನೋಡಿತು. ಅವಳ ಕಣ್ಣಲ್ಲಿದ್ದ ನೀರೆಲ್ಲ ತೀರಿ ಹೋಗಿದ್ದವೇನೊ! ಸ್ಮಶಾನದ ಮೂಲೆಯಲ್ಲಿ ಶವದತ್ತ ನೋಡುತ್ತಲೇ ಕೂತು ಕೂಸಿಗೆ ಎದೆ ಕಚ್ಚಿಸಿದ್ದಳು. ಆ ಕೂಸಿನ ಹೆಜ್ಜೆಗಳಿನ್ನೂ ಮೂಡಿಯೇ ಇಲ್ಲಾ… ಅವನು ನಡೆ ನಡತೆ ನುಡಿಗಳ ಮುಗಿಸಿದ್ದ. ಆ ಹೆಂಗಸಿನ ಹೆಜ್ಜೆಗಳು ಬಾಕಿ ಇದ್ದವು. ಸ್ಮಶಾನ ಬಿಟ್ಟು ಬೇಗ ಮನೆಗೆ ತೆರಳಲು ಮುಂದಾಗಿದ್ದರು. ಸ್ಮಶಾಸನದಲ್ಲಿ ಸಂಸಾರವೇ! ಆಕೆಯೂ ಆ ಜನರ ಜೊತೆ ಎದ್ದು ಹೊರಟಳು ಏನೂ ಆಗಿಯೇ ಇಲ್ಲ ಎಂಬಂತೆ.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆ ಸರಣಿಯ 38ನೇ ಕಂತು

Read More

ಚೆಗೆವಾರನನ್ನು ನೆನಪಿಸುವ ʻಮೋಟಾರ್ ಸೈಕಲ್ ಡೈರೀಸ್ʼ

1952ರಲ್ಲಿ ಅದೊಂದು ದಿನ ಲ್ಯಾಟಿನ್ ಅಮೆರಿಕದ ದೇಶಗಳಲ್ಲಿ ಒಂದಾದ ಅರ್ಜಂಟೀನಾದಲ್ಲಿ ಮೆಡಿಕಲ್ ಓದುತ್ತಿದ್ದ ಸ್ನೇಹಿತರಾದ ಅರ್ನೆಸ್ಟೋ ಚೆಗೆವಾರ ಮತ್ತು ಆಲ್ಬರ್ಟೋ ಗ್ರೆನಾಡೋಗೆ ಒಂದು ಅಪೂರ್ವವಾದ ಉಮೇದು ಉಂಟಾಗುತ್ತದೆ. ಅದು ಎಂಥವರನ್ನೂ ಬೆಚ್ಚಿಬೀಳಿಸುವಂಥಾದ್ದು. ಸುಮಾರು ಎಂಟು ಸಾವಿರ ಮೈಲಿ ವಿಸ್ತಾರದ ಇಡೀ ದಕ್ಷಿಣ ಅಮೆರಿಕವನ್ನು 1939ನೇ ಮಾಡೆಲ್ಲಿನ ಮೋಟಾರ್ ಬೈಕಿನಲ್ಲಿ ಸುತ್ತಾಡಿಕೊಂಡು ಬರಬೇಕು, ಎಂದು. ಹಾಗೆಂದೇ ಪ್ರಯಾಣ ಹೊರಟ ಗೆಳೆಯರಿಬ್ಬರ ಸ್ವಭಾವ, ನಡವಳಿಕೆ ಒಂದಕ್ಕೊಂದು ತಾಳಮೇಳವಿಲ್ಲದ್ದು.
ಎ.ಎನ್. ಪ್ರಸನ್ನ ಬರೆಯುವ ‘ಲೋಕ ಸಿನಿಮಾ ಟಾಕೀಸ್‌’ನಲ್ಲಿ ಬ್ರೆಜಿ಼ಲ್‌ನ ʻಮೋಟಾರ್ ಸೈಕಲ್ ಡೈರೀಸ್ʼ ಸಿನಿಮಾದ ವಿಶ್ಲೇಷಣೆ

Read More

ಉಜ್ಬೆಕಿಸ್ತಾನದ ನೆನಪಿನಲ್ಲಿ ಇತಿಹಾಸದ ನೋಟಗಳು

ನಮ್ಮ ಗೈಡ್, ಇತಿಹಾಸ ತಜ್ಞೆ ಗುಲ್ಚೆಹರಾ ನಮ್ಮನ್ನು ಈ ಮದ್ರಸಾ ಮುಂದೆ ಇರುವ ಬೃಹತ್ತಾದ ಏಕಶಿಲಾ ಕುಂಡವನ್ನು ತೋರಿಸಿದಳು. ಅದು ಒಂದು ಟ್ಯಾಂಕರ್ ನೀರು ತುಂಬುವಷ್ಟು ಆಳ ಮತ್ತು ಅಗಲ ಹೊಂದಿದೆ. ೧೯೧೭ರಲ್ಲಿ ರಷ್ಯಾದಲ್ಲಿ ನಡೆದ ಅಕ್ಟೋಬರ್ ಮಹಾಕ್ರಾಂತಿ ನಡೆದ ಘಟನೆಯಲ್ಲಿ ಕಮ್ಯುನಿಸ್ಟ್ ಸರ್ಕಾರ ಬಂದದ್ದು ಗೊತ್ತಾದ ಕೂಡಲೆ ಸಮರಕಂದದ ಯುವತಿಯರು ತಮ್ಮ ಬುರ್ಖಾಗಳನ್ನು ತಂದು ಈ ಕುಂಡದಲ್ಲಿ ಹಾಕಿ ಸುಟ್ಟರು ಎಂದು ಗುಲ್ ಚೆಹರಾ ತಿಳಿಸಿದಳು. ಹಾಗೆ ಬುರ್ಖಾಗಳನ್ನು ಸುಟ್ಟವರಲ್ಲಿ ಆಗ ಯುವತಿಯಾಗಿದ್ದ ತನ್ನ ಅಜ್ಜಿಯೂ ಇದ್ದಳೆಂದು ಹೇಳಿದಳು. ನಮಗೆಲ್ಲ ಆಶ್ವರ್ಯವೆನಿಸಿತು.  ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗೆಲೆಲ್ಲʼ ಸರಣಿಯ ೪೬ನೇ ಕಂತು ಇಂದಿನ ಓದಿಗಾಗಿ

Read More

ನಿಶೆಯ ಹೆಬ್ಬಾವಿನ ಬಾಯಲ್ಲಿ ಮಲಗಿದ್ದೆ

“ನನ್ನ ಸ್ವಕಾರಣದಿಂದ ಪಿಎಚ್.ಡಿ ಸಂಶೋಧನೆಗೂ, ಅತಿಥಿ ಉಪನ್ಯಾಸಕ ವೃತ್ತಿಗೂ ರಾಜಿನಾಮೆ ನೀಡುತ್ತಿರುವೆ’ ಎಂದು ಒಂದು ಸಾಲಿನ ರಾಜಿನಾಮೆ ಬರೆದು ಲಕೋಟೆಯಲ್ಲಿಟ್ಟು ಯಾರ್ಯಾರಿಗೆ ಕೊಡಬೇಕೊ ಅವರಿಗೆಲ್ಲ ಕೊಟ್ಟು ಹಾಸ್ಟಲಿಗೆ ಬಂದೆ. ಆ ಕ್ಷಣವೇ ಕ್ಯಾಂಪಸ್ಸನ್ನು ತೊರೆದೆ. ಯಾರಿಗೂ ಹೇಳಲಿಲ್ಲ. ಇಷ್ಟು ಕಾಲ ಪೊರೆದ ಕ್ಯಾಂಪಸ್ಸೇ ನಿನ್ನನ್ನು ಬಿಟ್ಟು ಹೋಗುತ್ತಿರುವೆ. ನಿನ್ನ ಈ ನೆಲದ ಸಾರವನೆಲ್ಲ ತಾಯ ಎದೆ ಹಾಲ ಕುಡಿದಂತೆ ಹೀರಿ ಅರಗಿಸಿಕೊಂಡಿರುವೆ. ಹೋಗುವೆ ನನ್ನ ಮುದ್ದಿನ ನವಿಲುದಾರಿಗಳೇ ಎಂದು ಕತ್ತಲಲ್ಲಿ ಬಂದಿದ್ದೆ”
ʻನನ್ನ ಅನಂತ ಅಸ್ಪೃಶ್ಯ ಆಕಾಶʼ ಮೊಗಳ್ಳಿ ಗಣೇಶ್‌  ಆತ್ಮಕತೆಯ  ಮೂವತ್ತೇಳನೆಯ ಕಂತು. 

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ