Advertisement

Category: ಸರಣಿ

ಸಾಮಾಜಿಕ ಸಂಘರ್ಷ ಮತ್ತು ಕೊಡುಕೊಳ್ಳುವಿಕೆ

ಕೆರೆ ಒತ್ತುವರಿಯ ಕಾರಣಕ್ಕೆ ಮಳೆನೀರು ಗಂಟಿಚೋರರ ಓಣಿಗೆ ನುಗ್ಗಿತು. ನೀರುನಿಂತು ಆಡು ಕುರಿಗಳು ಸಾವನ್ನಪ್ಪಿದವು. ಮೇವಿನ ಬಣವೆಗಳು ನೀರಲ್ಲಿ ತೇಲಿದವು. ಹೀಗಾಗಿ ಗಂಟಿಚೋರರು ಇದರ ವಿರುದ್ಧ ಕೋರ್ಟಿಗೆ ಹೋದರು. ಕೋರ್ಟು ಕೆರೆಯನ್ನು ಪುನಶ್ಚೇತನ ಮಾಡಲು ಆದೇಶಿಸಿತು. ಈ ಆದೇಶ ಪಾಲನೆಯಾಗಲಿಲ್ಲ. ನಂತರ  ನ್ಯಾಯಾಂಗ ನಿಂದನೆ ದಾವೆ ಹೂಡಿದರು.
‘ಗಂಟಿಚೋರರ ಕಥನಗಳು ‘ಸರಣಿಯಲ್ಲಿ ಡಾ. ಅರುಣ್ ಜೋಳದ ಕೂಡ್ಲಿಗಿ  ಸಾಮಾಜಿಕ ಸವಾಲುಗಳ  ಕುರಿತು ಬರೆದಿದ್ದಾರೆ. 

Read More

ತೊರೆಯಲಾಗದ ಮಾಯೆ ಹಿಯಾ ಯಾಂಗ್ಕೆ

ದೂರವಾಗಿರುವ ತನ್ನ ಸಂಸಾರದ ಸದಸ್ಯರನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ನಿರತನಾದ ಹಾನ್ ದೈನಂದಿನ ನಿರ್ವಹಣೆಗಾಗಿ ಅತಿ ಕಳಪೆ ಮಟ್ಟದ ವಸತಿ ಮತ್ತು ಉದರ ಪೋಷಣೆಯಿಂದ ತೃಪ್ತನಾಗುತ್ತಾನೆ ಮತ್ತು ತನ್ನ ಶೋಧ ಕಾರ್ಯ ಮುಂದುವರಿಸುತ್ತಾನೆ. ಚಿತ್ರದುದ್ದಕ್ಕೂ ಕಟ್ಟಡ ಕೆಡವುತ್ತಿರುವ ಹಾಗೂ ಅದರ ಅವಶೇಷಗಳ ನಡುವೆಯೇ ಹಾನ್ ಸೇರಿದಂತೆ ಕೆಲಸಗಾರರ ಚಲನೆ ಕಾಣುತ್ತಿದ್ದು ಅವು ಅವನ ಅಂತರಂಗದ ತುಮುಲ ಮತ್ತು ಕಳವಳಗಳ ರೂಪಕಗಳಾಗುತ್ತವೆ. ಎ.ಎನ್. ಪ್ರಸನ್ನ ಬರೆಯುವ ಸಿನಿಮಾ ವಿಶ್ಲೇಷಣೆ

Read More

ನೀಲಿ ಬರೆಗಳ ಮುಟ್ಟಿ ಮುಟ್ಟಿ ನೋಡಿದ

ಅಂತೂ ಚಿಕ್ಕಪ್ಪ ಬಂದಿದ್ದ. ಯಾವತ್ತಿನಂತೆ ಎದ್ದು ನಿಂತು ಕೈ ಮುಗಿದೆ. ಬೀಗ ತೆಗೆದು; ‘ಐದು ನಿಮಿಷ ಇರಿ; ಪಲಾವ್ ತರ್ತೀನಿ’ ಎಂದು ಸೈಕಲೇರಿ ಹೋದ. ಪಲಾವ್ ಎನ್ನುವ ಹೆಸರನ್ನೆ ನಾನಾಗ ಕೇಳಿರಲಿಲ್ಲ. ಕೈಕಾಲು ಮುಖ ತೊಳೆದು ದೇವರಿಗೆ ಕಡ್ಡಿ ಹಚ್ಚು ಎಂದ ತಾತ. ಹಾಗೇ ಮಾಡಿದೆ. ಪಲಾವ್ ತಂದ ಚಿಕ್ಕಪ್ಪ. ಗಮ್ಮೆನ್ನುವ ಪೊಟ್ಟಣ. ತಾತನ ಮೆಲ್ಲಗೆ ‘ಇದೇನಪ್ಪಾ’ ಎಂದು ಕೇಳಿದ. ‘ಗಮುಲ್ದನ್ನ’ ಎಂದ. ಅಹಾ! ಅಂತಹ ಗಮಗಮಿಸುವ ಅನ್ನವ ನಾನೆಂದೂ ಉಂಡಿರಲಿಲ್ಲ. ಮೊಗಳ್ಳಿ ಗಣೇಶ್ ಬರೆಯುವ ಆತ್ಮಕತೆ ‘ನನ್ನ ಅನಂತ ಅಸ್ಪೃಶ್ಯ ಆಕಾಶ’ ಸರಣಿಯ ಹದಿನೈದನೆಯ ಕಂತು

Read More

ಅಡಿಕೆ ಹೊತ್ತ ತಲೆಯ ಮೇಲೆ ಆನೆ ಕುಳಿತಾಗ

ದ್ವಿಚಕ್ರ ವಾಹನದಿಂದ ಬಿದ್ದು ಬಂದ ಒಬ್ಬರ ಹರಿದ ಗಾಯಕ್ಕೆ ಹೊಲಿಗೆ ಹಾಕಿ, ಮುರಿದ ಮೂಳೆಗೆ ತಾತ್ಕಾಲಿಕ ಪಟ್ಟಿ ಕಟ್ಟಿ ಆಗುವಷ್ಟರಲ್ಲಿ, ನಿದ್ರಾದೇವಿ ನಿನ್ನ ಸಹವಾಸ ನನಗೆ ಬೇಡ ಎಂದು ಬೇರೆಯವರನ್ನು ಅಪ್ಪಿಕೊಳ್ಳಲು ಹೋಗಿದ್ದಳು. ಅಷ್ಟರಲ್ಲೇ ಇನ್ನೊಂದು ಹುಡುಗಿ. ಆಗಷ್ಟೇ ಹೈಸ್ಕೂಲು ಮುಗಿಸಿದ ಆಕೆ, ತಾನು ಲವ್ ಮಾಡಿದ ಹುಡುಗನನ್ನು ಮದುವೆಯಾಗಲು ತಂದೆ ತಾಯಿ ಒಪ್ಪಲಿಲ್ಲ ಎಂಬ ಕಾರಣಕ್ಕಾಗಿ ಮೇಟಾಸಿಡ್ ಕುಡಿದು ಬಂದಿದ್ದಳು. ಅವಳಿಗೆ ಚಿಕಿತ್ಸೆ ನೀಡಿದ ಬಳಿಕ ಇಬ್ರಾಹಿಂ ಎಂಬ ಮತ್ತೊಬ್ಬ ಪೇಷೆಂಟು ಬಂದಿದ್ದ. ಅವನ  ಸ್ಥಿತಿ ನೋಡಿ, ಯಾಕೋ  ಸಂಶಯ ಮೂಡಿತು. ಡಾ. ಕೆ.ಬಿ. ಸೂರ್ಯಕುಮಾರ್ ಬರಹ 

Read More

ಮಲೆನಾಡಿನ ಬಿಸುಪು, ಹವಿಗನ್ನಡದ ಸೊಗಸು

ನನಗೆ ಒಂದು ಆಶ್ಚರ್ಯ ಅಂತ ಅನ್ನಿಸಿದ್ದು, ಕತೆ ನಡೆಯವ ಆ ಸಮಯ ಏನಿದೆ ಆಗ ಸಿದ್ದಾಪುರದಲ್ಲಿ ಸ್ವಾತಂತ್ರ್ಯ ಹೋರಾಟ ಏರುಗತಿಯಲಿದ್ದ ಸಮಯ. ಪ್ರತಿ ಮನೆಯಲ್ಲೂ ಒಬ್ಬರಲ್ಲಾ ಒಬ್ಬರು ಜೈಲಿಗೆ ಹೋಗಿದ್ದ ಪರಿಸ್ಥಿತಿ ಇತ್ತು. ಮನೆ ಗಂಡಸ್ರೆಲ್ಲಾ ಜೈಲಲ್ಲಿ, ಈ ಕಡೆ ಜಪ್ತಿ ಮಾಡಲೆ ಬಂದಾಗ ಹೆಂಗಸ್ರೇ ಅಡ್ಡ ನಿಂತು ಪೋಲೀಸರ ವಿರುದ್ಧ ಹೋರಾಡಿದ ಸನ್ನಿವೇಶದ ಘಟನೆಗಳು ಬಹಳ ನಡೆದಿವೆ.
“ಓದುವ ಸುಖ” ಅಂಕಣದಲ್ಲಿ ವಿ.ಟಿ. ಶೀಗೇಹಳ್ಳಿ ಬರೆದ ತಲೆಗಳಿ ಕಾದಂಬರಿಯ ಬಗ್ಗೆ ಬರೆದಿದ್ದಾರೆ ಗಿರಿಧರ್‌ ಗುಂಜಗೋಡ್

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ