ಸೌದಿ ದೇಶದ ಹಿನ್ನೆಲೆ…: ದರ್ಶನ್ ಜಯಣ್ಣ ಸರಣಿ
ಈ ದೇಶದ ಮೊದಲ ಹೆಸರು ನಜ್ದ್ ಮತ್ತು ಹೇಜಾಜ್ ಎಂದಾಗಿತ್ತು. ಹೆಜಾಜ್‌ನಲ್ಲಿಯೇ ಮೆಕ್ಕಾ- ಮದೀನಾ ಎಲ್ಲ ಇರುವುದು ಮತ್ತು ನಜ್ದ್ ಎಂದರೆ ಇಂದಿನ ಸೌದಿಯ ಮಧ್ಯ ಭಾಗವಾಗಿದೆ. ಅಬ್ದುಲ್ ಅಜೀಜ್(1875 – 1953) ಈ ಎರಡು ಭಾಗಗಳ ಜೊತೆಗೆ ತಂಪಾದ ಬೆಟ್ಟಗುಡ್ಡಗಳಿಂದ ಕೂಡಿರುವ ಯೆಮೆನ್‌ಗೆ ಹೊಂದಿಕೊಂಡಿರುವ ದಕ್ಷಿಣದ ನಜ್ರನ್, ಅಸಿರ್ ಮತ್ತು ಉತ್ತರದ ಅಂದರೆ ಸಿರಿಯಾ ಇರಾಕ್‌ನ ಕಡೆಯ ನಾರ್ದರ್ನ್ ಗಡಿಯನ್ನು ಹಾಗೆಯೇ ಇಂದಿನ ತೈಲದ ತೊಟ್ಟಿಲಾದ ಈಸ್ಟರ್ನ್ ಪ್ರಾವಿನ್ಸ್ ಅನ್ನು ನಂತರದ ವರ್ಷಗಳಲ್ಲಿ ದಂಗೆ ಹೊರಟು ಸೌದಿಗೆ ಸೇರಿಸಿಕೊಳ್ಳುತ್ತಾನೆ.
ದರ್ಶನ್ ಜಯಣ್ಣ ಬರೆಯುವ “ಸೌದಿ ಡೇಟ್ಸ್” ಸರಣಿಯ ನಾಲ್ಕನೆಯ ಬರಹ

