Advertisement

Category: ಸರಣಿ

ಸುಬ್ಬಮ್ಮನ್ ಇಂಗ್ಲಿಷೂ…. : ಸುಮಾವೀಣಾ ಸರಣಿ

“ಬರ ತಿಂಗ್ಳು ಆಲ್ ನಿಲ್ಲುಸ್ತೀನಿ. ನಮ್ ಅಸ ಗಬ್ಬಾಗೈತಿ. ಉಲ್ ತರಸ್ಬೇಕು. ಅಲ್ಲಿವರ್ಗೂ ಗೇಟ್ ಹಾಕಳಿ. ಆಕಾಸ್ವಾಣಿಲಿ ವಾರ್ತ್ ಬತ್ತೈತಿ. ಎಸೊಂದು ಟೇಮ್ ಆಗೈತಿ. ದ್ವಾಸ್ಗೆ ಹಾಕಿದ್ದೆ ಅಯ್ಯೋ! ಕ್ವಾಣೆಲಿ ಶಿಂಕ್ ಹತ್ರ ಕಾಪಿ ಇಟ್ಟಿದ್ದೆ ಎಲ್ಲ ಹಾರೋಗಿರ್ತೈತಿ” ಎಂದು ಮನೆಗೆ ಬೇಗ ಬೇಗನೆ ಹೋಗುತ್ತಾ ಇನ್ನೂ ಗೇಟ್ ಹತ್ತಿರವೆ “ಮೊಮ್ಮೊಗಳಿಗೆ ವ್ಯಾಸ್ಲೆಣ್ಣೆ ತತ್ತಾ. ಕಾಲ್ ಒಡದು ಸೀಳ್ ಬುಟ್ಟವೆ, ಸೆಟಾರ್ ಹಾಕಂಡು, ಕಾಲ್ಚೀಲ, ಕುವಾಲಿ, ಕೈಗ್ ಬ್ಲೌಸ್ ಇಕ್ಕಂಡ್ರು ತಪ್ನಿಲ್ಲ.” ಎನ್ನುವುದು ಜೋರಾಗಿ ಕೇಳಿಸಿತು.
ಸುಮಾವೀಣಾ ಬರೆಯುವ “ಮಾತು-ಕ್ಯಾತೆ” ಸರಣಿ

Read More

ಇದು ನಿಮ್ದೇ ಸೈಟು ತಾನೇ!: ಎಚ್. ಗೋಪಾಲಕೃಷ್ಣ ಸರಣಿ

ನಾವು ಮನೆ ಮುಗಿಸಿ ವಾಸಕ್ಕೆ ಅಂತ ಬಂದಮೇಲೂ ಸಹ ಈ ಮನೆ ಕೇಸು ತುಂಬಾ ದಿವಸ ಎಳೆಯಿತು. ಸೈಟಿನ ಮೂಲ ಓನರ್ ಪರ್ಯಾಯ ಸೈಟಿಗೆ ಒಪ್ಪಿಗೆ ಕೊಡದೇ ಇದ್ದದ್ದು ಮತ್ತು ಅದೇ ಸೈಟು ತಮಗೆ ಬೇಕು ಅಂತ ಇರಾದೆ ವ್ಯಕ್ತ ಪಡಿಸಿದ್ದು ಕೇಸು ಎಳೆಯಲು ಅವಕಾಶ ಆಯಿತು. ಸೊಸೈಟಿ ಮಧ್ಯೆ ಪ್ರವೇಶ ಮಾಡಿ ಅಲ್ಟರ್ನೇಟ್ ಸೈಟು ಕೊಡ್ತೀವಿ ಅಂದರೂ ಕೊಸರಾಟ ಮುಂದುವರೆದು ಸುಮಾರು ಇಪ್ಪತ್ತು ವರ್ಷ ಕೇಸು ನಡೆದು ಕೊನೆಗೆ ಒಂದು ಕಾಂಪ್ರಮೈಸ್ ಡೀಲ್ ಆಯ್ತು.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿ

Read More

ನಮ್ಮ ಪರಿಸೆಗಳು: ಸುಮಾ ಸತೀಶ್ ಸರಣಿ

ಬಂಗಾರುದ್ ಕಾಟುಮಲಿಂಗೇಶ್ವರುನ್ನ ವರ್ಸುಕ್ಕೆ ಎಲ್ಡು ದಪ ಮಾತ್ರ ತೆಗ್ದು ಊರಾಚೇಗ್ಳ ಗುಡೀಗೆ ತಕಾ ಬರ್ತಾರೆ. ಅದ್ಕೆ ಮುಂದ್ಲೇ‌ ಆ ಲಿಂಗುದ್ ತೂಕ ಬರ್ದು ಮಡ್ಗಿ, ವಾಪ್ಸು ಇಕ್ಕಾ ಮದ್ಲು ಇನ್ನೊಂದು ದಪ ತೂಕ ನೋಡಿ ಮಡುಗ್ತಾರೆ. ಸಿವರಾತ್ರಿ ಪರಿಸೇ ಟೇಮ್ ನಾಗೆ ಒಂದು ಕಿತ, ಕಾರ್ತೀಕದಾಗೆ ಕೊನೇ ಸೋಮವಾರ ಇನ್ನೊಂದು ಕಿತ ದ್ಯಾವ್ರಿಗೆ ಹೊರುಕ್ ಬರಾಕೆ ಮೋಕ್ಷ ಸಿಕ್ತೈತೆ. ಜನುರ್ಗೂ ಕಣ್ ತುಂಬ್ಕಣಾಕೆ ಆಗ್ತೈತೆ.
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಗುರುತರ ಗುರಿಯೆಡೆಗೆ ಓಡಲಿ ಜಮೈಕಾ: ಡಾ. ವಿಶ್ವನಾಥ ನೇರಳಕಟ್ಟೆ ಸರಣಿ

ಜಮೈಕಾದ ಜನರು ಕಲೆಗಳ ಬಗೆಗೆ ಅತೀವ ಆಸಕ್ತಿಯನ್ನು ಹೊಂದಿದ್ದಾರೆ. ದೃಶ್ಯ ಕಲೆಗಳು ಮತ್ತು ಪ್ರದರ್ಶನ ಕಲೆಗಳು ಜಮೈಕಾದ ಜನರ ಬದುಕಿನ ಅವಿಭಾಜ್ಯ ಅಂಗಗಳು. ಕಲ್ಪನೆ, ಉತ್ಸುಕತೆ ಮತ್ತು ಸೃಜನಶೀಲತೆಗಳ ಮೂಲಕ ವಿವಿಧ ಕಲೆಗಳನ್ನು ರೂಪಿಸಿಕೊಂಡಿದೆ ಜಮೈಕಾ. ಕಲೆಗಳು ಅಲ್ಲಿಯ ಜನರ ಬದುಕಿನ ಸ್ಫೂರ್ತಿಯ ಸೆಲೆಯಾಗಿದೆ. ಬ್ಯಾರಿಂಗ್ಟನ್ ವ್ಯಾಟ್ಸನ್, ಆಲ್ಬರ್ಟ್ ಹುಯಿ ಇವರು ಜಮೈಕಾದ ಚಿತ್ರಕಲಾವಿದರು. ಎಡ್ನಾ ಮ್ಯಾನ್ಲಿ ಎನ್ನುವವರು ಪ್ರಸಿದ್ಧ ಶಿಲ್ಪಿಯಾಗಿದ್ದಾರೆ. ಇವರು ಜಮೈಕಾದಲ್ಲಿ ಮಾತ್ರವಲ್ಲದೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಿಕೊಂಡಿದ್ದಾರೆ.
ಡಾ. ವಿಶ್ವನಾಥ ಎನ್.‌ ನೇರಳಕಟ್ಟೆ ಬರೆಯುವ “ವಿಶ್ವ ಪರ್ಯಟನೆ” ಸರಣಿ

Read More

ಲಿಂಗಾಯತರು ಮತ್ತು ಲಿಂಗಾಯತ: ರಂಜಾನ್ ದರ್ಗಾ ಸರಣಿ

ಇಲ್ಲಿನ ಇಡೀ ವ್ಯವಸ್ಥೆ ಬಸವತತ್ತ್ವಕ್ಕೆ ವಿರುದ್ಧವಾಗಿದೆ. ಬಸವಧರ್ಮದಲ್ಲಿ ಯಜ್ಞಯಾಗಾದಿಗಳಿಲ್ಲ. ನವಗ್ರಹಗಳ ಪೂಜೆ ಇಲ್ಲ. ಮೂರ್ತಿ ಮಂದಿರಗಳೇ ಇಲ್ಲ. ಕರ್ಮಸಿದ್ಧಾಂತವಿಲ್ಲ. ಸ್ವರ್ಗ ನರಕ ಪುನರ್ಜನ್ಮಗಳಿಲ್ಲ, ಸಕಲ ಜೀವಾತ್ಮರಿಗೆ ಲೇಸನೆ ಬಯಸುವ ಜೀವಕಾರುಣ್ಯದ ಮೇಲೆ ಬಸವತತ್ತ್ವ ನಿಂತಿದೆ. ಯೋಗ್ಯ ಉತ್ಪಾದನೆಯ ಕಾಯಕ, ನಿಸರ್ಗ ಮತ್ತು ಮಾನವ ಉತ್ಪನ್ನದ ಯಾವುದೂ ದುರ್ಬಳಕೆ ಆಗದಂತೆ ನೋಡಿಕೊಳ್ಳುವ ಪ್ರಸಾದ ಪ್ರಜ್ಞೆ ಮತ್ತು ಯೋಗ್ಯ ಸಾಮಾಜಿಕ ವಿತರಣೆಯ ದಾಸೋಹ ಜ್ಞಾನ ಈ ಮೂರೂ ಬಸವತತ್ತ್ವದಲ್ಲಿ ಪ್ರಮುಖವಾಗಿವೆ.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ