ಕೂರಾಪುರಾಣ ೮: ಸ್ವಪ್ರೇಮ ಮತ್ತು ನಾಯಿಪ್ರೇಮ ಎಂಬ ಪರಿಶುದ್ಧ ಪ್ರೇಮಗಳು
ಎಲ್ಲರಿಗು ಪರಮಶ್ರೇಷ್ಟರಾಗುವುದು ಸಾಧ್ಯವಿಲ್ಲ ಆದರೆ ಶ್ರೇಷ್ಟರಾಗುವುದು ಖಂಡಿತ ಸಾಧ್ಯವಿದೆ ಎಂದು ನನ್ನ ನಂಬಿಕೆ. ನಿಮಗೆ ನಾಯಿಯ ಬಗ್ಗೆ ಭಯ ಅಥವಾ ಅನಾದರ ಅಥವಾ ಮತ್ತೇನೋ ಇದ್ದರೂ ನಾಯಿಯೊಂದನ್ನು ಹತ್ತಿರದಿಂದ ನೋಡಲು ಶುರು ಮಾಡಿದಾಗ ಅದು ಖಂಡಿತ ದೂರವಾಗಿ ಶುದ್ಧವಾದ ಅಂತಃಕರಣವೊಂದು ಹುಟ್ಟುತ್ತದೆ. ಇದಕ್ಕೆ ನಾನೇ ಉದಾಹರಣೆ. ನಾನೊಬ್ಬಳು ನಾಯಿಪ್ರೇಮಿಯಾಗುತ್ತೇನೆ, ಆಗಬಲ್ಲೆ ಎಂದು ನಾನು ಯಾವತ್ತು ಯೋಚಿಸಿರಲಿಲ್ಲ.
ಸಂಜೋತಾ ಪುರೋಹಿತ ಬರೆಯುವ “ಕೂರಾಪುರಾಣ” ಸರಣಿಯ ಎಂಟನೆಯ ಕಂತು
