Advertisement

Category: ಸಾಹಿತ್ಯ

ಕೆ. ಸತ್ಯನಾರಾಯಣ ಬರೆದ ಈ ಭಾನುವಾರದ ಕತೆ

ತಂದೆ ಏಕೆ ಹೀಗಾದರೂ ಅಂತ ಈವತ್ತಿಗೂ ನನಗೆ ಗೊತ್ತಾಗುತ್ತಿಲ್ಲ. ಸ್ನಾನ, ಸಂಧ್ಯಾವಂದನೆ, ಪೂಜೆ, ಅಚರಣೆ, ಯಾವುದನ್ನೂ ತಂದೆ ತಪ್ಪಿಸಿದವರಲ್ಲ. ಅವರ ತಂದೆಯ ಭಯದಲ್ಲೇ ಬೆಳೆದಿದ್ದರು. ತಂದೆ ಸತ್ತು ಹೋದ ಮೇಲೆ ಹೀಗೆಲ್ಲ ಆದದ್ದು. ನಿನ್ನ ಹತ್ತಿರ ಏನು ಮುಚ್ಚು ಮರೆ. ನಮ್ಮ ತಾತನದು ಕೂಡ ಇದೇ ರೀತಿಯ ರಂಪವಂತೆ. ಆತ ಇಟ್ಟುಕೊಂಡಿದ್ದವಳೊಬ್ಬಳನ್ನು ಮನೆಗೇ ಕರೆದುಕೊಂಡು ಬಂದು ಮಂಚದ ಮೇಲೆ ಮಲಗಿಸಿಕೊಳ್ಳುತ್ತಿದ್ದರಂತೆ. ನಮ್ಮಜ್ಜಿ ಅವಳ ಎಂಜಲು ತಟ್ಟೆ ತೊಳೆಯುವುದರಿಂದ ಹಿಡಿದು ಪ್ರತಿಯೊಂದು ಸೇವೆಯನ್ನೂ ಮಾಡಬೇಕಾಗುತ್ತಿತ್ತಂತೆ.
ಕೆ. ಸತ್ಯನಾರಾಯಣ ಬರೆದ ಕಥೆ “ಪ್ರೀತಿ ಬೇಡುವ ರೀತಿ” ‌

Read More

‘ಮಗಳ ಮದುವೆ’: ಪೂರ್ಣ ಮತ್ತು ಅಪೂರ್ಣ ಬದುಕಿನ ಮಾದರಿಗಳು

ರತ್ನಾಕರನ ಗೆಳೆಯನೂ ಸರಳ ಸಜ್ಜನನೂ ಆಗಿರುವ ರಂಗಣ್ಣನ ತಮ್ಮ ವೆಂಕಣ್ಣನಲ್ಲಿ ಸ್ವಲ್ಪ ಒಳ್ಳೆಯ ಗುಣಗಳು ಇದ್ದರೂ ಚಳುವಳಿಗಾರರಾಗಿರುವ ಅವನ ಸಂಗಡಿಗರು ಪೋಲೀಸರೊಂದಿಗೆ ಕೈಜೋಡಿಸಿ ರತ್ನಾಕರನನ್ನು ಸೆರೆಮನೆಗೆ ತಳ್ಳುವಂತೆ ಮಾಡಲು ಹೇಸದಷ್ಟು ಧೂರ್ತರಾಗಿದ್ದಾರೆ. ಕುಮುದಳನ್ನು ಮದುವೆಯಾಗಲು ಯೋಗ್ಯನಾಗಿದ್ದ ರತ್ನಾಕರನು ತನ್ನ ಗೆಳೆಯರ ಕುಮ್ಮಕ್ಕಿನಿಂದಾಗಿ ಸೆರೆಮನೆಗೆ ತೆರಳಬೇಕಾಗುವ ಸಂದರ್ಭವು ಇದಕ್ಕೊಂದು ನಿದರ್ಶನ.
ಆನಂದಕಂದರ ‘ಮಗಳ ಮದುವೆ’ ಕಾದಂಬರಿಯ ಕುರಿತು ಡಾ. ಸುಭಾಷ್‌ ಪಟ್ಟಾಜೆ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕತೆ

ಅಲಾ.. ಒಂದ್ ಜಾಕೀಟ್ ಬಟ್ಟೆ ಅರ‍್ಸಕ್ಕೆ ವರ್ಸ ಪೂರ‍್ತಿ ದುಡ್ ವಟ್ಮಾಡಿ ಬಟ್ಟೆ ಅಂಗ್ಡಿಗ್ ವೋಗಿದೀನಿ. ಕದಿಯದಾಗಿದ್ರೆ ಇಷ್ಟು ಕಸ್ಟ ತಗೀಬೇಕಾ? ಆ ದೇವ್ರೂ ಈ ಅನ್ಯಾಯ ನೋಡ್ಕ್ಯಂತ ಸುಮ್ಕಿದಾನಾ ಅಂಗಾರೆ? ಅಲಾ ಈ ಸೀರೆ ವಯರ್ ಬುಟ್ಟಿಲಿ ಯಾವಾಗ್ ಬಂದ್ ಸರ‍್ಕಂತು ಅಂತ? ಬವುಶ್ಯ ನನ್ ಇಂದ್ಗಡೀಕೇ ನಿಂತ್ಕಂದಿದ್ನಲ್ಲ ಇವ್ನು.. ಇವ್ನೇ ಎಲ್ಲಾರೂ.. ಇವ್ನೇ ಇವ್ನೇ! ಇನ್ಯಾರ್ ಇಂತಾ ಕ್ಯಲ್ಸ ಮಾಡ್ತರೆ? ಅಲಾ.. ಅದ್ಯಾ ಮಾಯ್ಕದಲ್ಲಿ ವಯರ್ ಬುಟ್ಟಿಗೆ ಸೀರೆ ತಗ್ದು ಆಕಿಬುಟ್ಟಿದ್ನೋ ಅಂತ!
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾದಂಬಿನಿ ಬರೆದ ಕಥೆ “ತಲೆ ಮ್ಯಾಕೆ ವೂದ ನೀರು” ನಿಮ್ಮ ಈ ಭಾನುವಾರದ ಓದಿಗೆ

Read More

ವಸಂತಕುಮಾರ್‌ ಕಲ್ಯಾಣಿ ಬರೆದ ಈ ಭಾನುವಾರದ ಕತೆ

ಆನಂದನಿಗೆ ತಾನು ಅಭ್ಯಸಿಸುತ್ತಿದ್ದ ಕೆಲವು ಪುಸ್ತಕಗಳಲ್ಲಿ ‘ವೀರ್ಯನಾಶವೇ ಮೃತ್ಯು, ಬ್ರಹ್ಮಚರ್ಯವೇ ಜೀವನ’ ಎಂಬ ಉಕ್ತಿಗಳು ಪ್ರಭಾವ ಬೀರಿದವು. ಆದರೆ ‘ಎಲ್ಲ ಹೆಣ್ಣುಮಕ್ಕಳನ್ನು ಸೋದರಿಯರಂತೆ ಕಾಣುವುದು ದುಸ್ಸಾಧ್ಯ’ ಎಂಬ ಅನುಭವೂ ಕಾಡುತ್ತಿತ್ತು. ಅನೇಕ ಟೀಚರ್‌ಗಳಿಗೆ ಅಚ್ಚರಿಯಾಗುವಂತೆ ಪಿ.ಯು.ಸಿಯಲ್ಲಿ ಕಾಮರ್ಸ್ ತೆಗೆದುಕೊಂಡ. ಬಿ.ಕಾಂ. ಮಾಡಲು ಖರ್ಚು ಕಡಿಮೆ. ಬೇಗ ಕೆಲಸ ಸಿಗುವುದು. ತಮ್ಮನಾದ ಶೃಂಗ ಬೇಕಾದರೆ ಬಿ.ಇ. ಮಾಡಲಿ. ಅಪ್ಪನಿಗೆ ವಿ.ಆರ್.ಎಸ್. ಸಾಧ್ಯತೆ ಹೆಚ್ಚಿರುವುದರಿಂದ ತಾನು ಬೇಗನೆ ದುಡಿದು ಮನೆ ನೋಡಿಕೊಳ್ಳಬೇಕು.
ವಸಂತಕುಮಾರ್‌ ಕಲ್ಯಾಣಿ ಬರೆದ ಕತೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕತೆ

ಸಾತಪ್ಪಗ ಇಕಾಡಿದಿಕಾಡಿ ಕುಡಿಯೂ ಚಟಾ ಬಿದ್ದಂಗಿತ್ತು. ಮೊದ ಮೊದಲ ಅಪರೂಪಕ್ಕೊಮ್ಮ ಹೊಲದೊಳಗ ರಾಶಿ ಇದ್ದಾಗ… ಯಾರದರೇ ಕಣಕ್ಕ ಹೋದರ, ಇಲ್ಲಾಂದ್ರ ಭಜನಾಕ ಹೋದರ ಅಷ್ಟೇ ಕುಡೀತಿದ್ದ. ಈಗೀಗ ಎರಡು ದಿನಕ್ಕೊಮ್ಮ ಕುಡಿಯಾಕ ಸುರು ಮಾಡಿದ್ದ. ರೊಕ್ಕ ಈಡಾಗಲಿಲ್ಲಂದ್ರ ಅಲ್ಲಿ ಇಲ್ಲಿ ಸಾಲಾ ತಗೊಂತಿದ್ದ. ವಿಜಯಪುರದೊಳಗ ಒಂದಿಬ್ಬರು ಅಡತ ಅಂಗಡಿಯವರಿದ್ದರು. ಸಾತಪ್ಪನ ಅಪ್ಪ ಬೋಜಪ್ಪ ಇದ್ದಾಗಿನಿಂದಲೂ ಅಲ್ಲೇ ವ್ಯವಹಾರ ಮಾಡಕೊಂಡು ಬಂದವರು. ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಎಸ್.ಬಿ.ಜೋಗುರ ಬರೆದ ಕಥೆ “ಕೇಡುಗಾಲದ ಕುದುರೆ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ