Advertisement

Category: ದಿನದ ಕವಿತೆ

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ವಿಷವರ್ತುಲದಲಿ‌ ಮೂರು ಮಾಟಗಾತಿಯರ ಕುಣಿತವನು ಕಂಡು ಜಗದ ಛಾವಣಿಗೆ ಗರಬಡಿಯಿತು
ಮ್ಯಾಕ್ ಬೆತನ ಮುಕುಟದಾಸೆಗೆ ರೈಲು ಬೋಗಿಗಳು ಸ್ಮಶಾನವಾಯಿತು
ಹೆಣದ ರಾಶಿಗಳ ಮೇಲೆ ನಿಂತ ಮಂದಿರಗಳ‌ಲಿ ಮೊಳಗಿದ ಘಂಟಾನಾದವನಾಲಿಸಿದ ದೈವ ಕಿವುಡಾಯಿತು
ಒಳಿತು ಕೆಡುಕಾಯಿತು, ಕೆಡುಕು ಒಳಿತಾಯಿತು
ನೆಲವು ಕೆಂಪಾಯಿತು, ಗಾಳಿ‌ ವಿಷವಾಯಿತು”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

“ಒಳ ಹೊರಗೆ
ತುಂತುರು
ಹನಿ ಹನಿದು
ಜಡಿ ಮಳೆ ಸುರಿದಿತ್ತು
ಆರದಿರಲಿ
ಕೈ ಹಿಡಿದು ಜೋಪಾನಗೊಂಡಿತು
ಎದೆ ಬೆಳಕಿನ ಬೆಳೆ”- ಪೂರ್ಣಿಮಾ ಸುರೇಶ್ ಬರೆದ ಈ ದಿನದ ಕವಿತೆ

Read More

ಡೋ.ರ. ಬರೆದ ಹನಿಗವಿತೆಗಳು

“ನಾನು ಇಲ್ಲಿ ಅಳುತ್ತಿದ್ದೆ , ನೀ ಅಲ್ಲಿ ಬರೆಯುತ್ತಿದ್ದೆ
ನಮ್ಮಿಬ್ಬರ ಮಧ್ಯೆ ಗೊತ್ತಿಲ್ಲದೆ ಪ್ರೀತಿ ಹುಟ್ಟಿದ್ದಕ್ಕಾಗಿ,
ನಾನೂ ಅತ್ತು ತಣ್ಣಗಾದೆ ,ನೀನೂ ಬರೆದು ಖಾಲಿಯಾದೆ,
ಯಾರಿಗೂ ತಿಳಿಯದ ಅರಿಯದ ಪ್ರೀತಿಯನ್ನು ಮುಕ್ತಗೊಳಿಸಲು ಬಾರದೆ..
ನಾನು ನಿನ್ನವಳಾದೆ ನೀನು ನನ್ನವನಾದೆ
ಹೀಗೆ ದೂರದಿಂದಲೆ..”- ಡೋ.ರ. ಬರೆದ ಹನಿಗವಿತೆಗಳು

Read More

ಡಾ. ಮಲರ್‌ ವಿಳಿ ಕೆ ಅನುವಾದಿಸಿದ ತಮಿಳಿನ ಸಂಗಂ ಸಾಹಿತ್ಯದ ಒಂದು “ಪುರನಾನೂರು” ಕವಿತೆ

“ನನ್ನ ಮನೆಯಲ್ಲಿ
ಅಡುಗೆ ಮಾಡುವುದನ್ನೇ
ಹಲವು ದಿವಸ
ಮರೆತು ಹೋದುದರಿಂದ
ಒಲೆಯ ಬದಿಗಳು ಸವೆಯದೆ
ಎತ್ತರವಾಗಿವೆ.
ಆ ಒಲೆಯಲ್ಲಿ
ಅಣಬೆಗಳು ಅರಳಿವೆ
ದೇಹವ ಕೃಶವಾಗಿಸುವ ಹಸಿವಿನಿಂದ
ನನ್ನ ಹೆಂಡತಿ ಬಾಡಿ ಬಸವಳಿದಿದ್ದಾಳೆ;
ಅವಳ ಎದೆಯಲಿ ಹಾಲು ಉತ್ಪತ್ತಿಯಾಗದ ಕಾರಣ
ಸಣ್ಣಗಾಗಿ, ಬಾಡಿ, ರಂಧ್ರ ಮುಚ್ಚಿ
ಅವಳ ಮೊಲೆ ಬರಿದಾಗಿ ಹೋಯಿತು”- ಡಾ. ಮಲರ್‌ ವಿಳಿ ಕೆ ಅನುವಾದಿಸಿದ ತಮಿಳಿನ ಸಂಗಂ ಸಾಹಿತ್ಯದ ಒಂದು “ಪುರನಾನೂರು” ಕವಿತೆ

Read More

ನಾಗಶ್ರೀ ಶ್ರೀರಕ್ಷ ಬರೆದ ಮೂರು ಕವಿತೆಗಳು

“ಒಂದು ದೊಡ್ಡ ಹಾಳೆಯಲ್ಲಿ
ಚಿತ್ರಗಳು ಕುಳಿತಿವೆ ಅಲುಗಾಡದೆ
ಗಂಡು ಹೆಣ್ಣು ಅದು ಇದು ಎಲ್ಲವೂ
ಗಾಳಿಬೀಸಿದರೂ ಯಾರೂ
ಕದಲುತ್ತಿಲ್ಲ ಹಾಗೆಯೇ ಇದ್ದ ಹಾಗೆಯೇ
ಅಲ್ಲಿಂದಲೇ ಎದ್ದು ಜೀವಂತವಾಗಿ
ಬಂದಿರುವೆ ನಾನು”- ಸಣ್ಣ ಪ್ರಾಯದಲ್ಲೇ ತೀರಿಹೋದ ಕನ್ನಡದ ಅನನ್ಯ ಕವಯಿತ್ರಿ ನಾಗಶ್ರೀ ಶ್ರೀರಕ್ಷ ಬದುಕಿದ್ದರೆ ಇಂದಿಗೆ ಅವರಿಗೆ ಮೂವತ್ತೇಳರ ಹರಯ. ಕೆಂಡಸಂಪಿಗೆಯ ಉಪ ಸಂಪಾದಕಿಯೂ ಆಗಿದ್ದ ಅವರ ಚೇತೋಹಾರಿ ನೆನಪಿಗೆ ಅವರ ‘ನಕ್ಷತ್ರ ಕವಿತೆಗಳು’ ಸಂಕಲನದಿಂದ ಆಯ್ದ ಮೂರು ಕವಿತೆಗಳು.

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ