Advertisement

Category: ದಿನದ ಕವಿತೆ

ಸುಬ್ರಹ್ಮಣ್ಯ ಹೆಗಡೆ ಬರೆದ ಈ ದಿನದ ಕವಿತೆ

“ಮೂಲೆ ಸೇರಿದ ಮಬ್ಬು,
ಹಳೆ ಪಾತ್ರೆಯೊಂದ ಹುಡುಕಿ,
ಸೋಪಿನಿಂದ ಚನ್ನಾಗಿ ಉಜ್ಜಿ, ತಿಕ್ಕಿ, ತೀಡಿ
ತೊಳೆದು ‘ಲಕ,ಲಕಿಸಿ’,’ ಪಿಲ್ಟರ್’ ಮಾಡಿ,
ಕುದಿಸಿದ ಹಳೇ ನೀರ ತುಂಬಿಸಿ,
ಹೊಸತೆಂದು ಸಂಭ್ರಮಿಸಿದಂತೆ…!”- ಸುಬ್ರಹ್ಮಣ್ಯ ಹೆಗಡೆ ಬರೆದ ಈ ದಿನದ ಕವಿತೆ

Read More

ಮೌಲ್ಯ ಸ್ವಾಮಿ ಬರೆದ ಈ ದಿನದ ಕವಿತೆ

“ತಿಳಿ ಗುಲಾಬಿ ಚಿಟ್ಟೆಗಳ ತಿನ್ನಿಸಿ ನೀಲಿ ನೀಲಿ ಕತ್ತರಿಗಳ ನುಂಗಿಸುತ್ತಲೇ
ಪ್ರೇಮದ ಅಡಕತ್ತರಿಗೆ ನನ್ನ ಎಳೆರೆಕ್ಕೆಗಳ ಸತ್ಯ ಕುಡಿಸಿ ಮಣ್ಣು ಮಾಡಿಬಿಟ್ಟ

ಎಡ ಪಾರ್ಶ್ವದ ಮೂಲೆಯೊಂದರಲ್ಲಿ ಕಾಡ ನಡುವಿನ ಬಿಸಿನೀರ ಬುಗ್ಗೆಯಂತೆ
ಸಾವಿರ ವರ್ಷಗಳಷ್ಟು ಹಳೆಯ ಕತ್ತಲು ಉಕ್ಕುತ್ತಿದೆ
ಒಳಗೊಳಗೆ
ಬುಗ್ಗೆಯಂತೆ”-

Read More

ಅರ್ಚನಾ ಹೆಚ್‌. ಬರೆದ ಈ ದಿನದ ಕವಿತೆ

“ಯೌವ್ವನದ ಅರ್ಧ ಭಾಗವನ್ನೆಲ್ಲಾ
ಆಪೋಶಿಸಿದ ನೈಟ್ ಶಿಫ್ಟುಗಳು..!
ಒಳಗಿನ ಏಸಿ ಚಳಿಗೆ ನಡುಗಿದ್ದು ಪ್ರಾಯ!
ವಾರವಾದರೂ ನೋಡದ ಮಗಳ ಮುಖ
ಮೊಬೈಲ್ ಸ್ಕ್ರೀನ್ನಲ್ಲಷ್ಟೇ…! ಮರೆತ ಸುಖ..!!”- ಅರ್ಚನಾ ಹೆಚ್‌. ಬರೆದ ಈ ದಿನದ ಕವಿತೆ

Read More

ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ದಿನದ ಕವಿತೆ

“ಚಿರತೆ ಮಾಟದ ಹುಡುಗ
ಕೂತ ಕುದುರೆಯೇ ಬಿಸಿಯೇರುವ
ಹುರಿಮೈ ಬಿಲ್ಲಂತೆ ಬಾಗಿಸಿ
ಉಸಿರು ಹೂಬಾಣ ಮಾಡಿ
ಕೊಳಲೂದುತ್ತಾನೆ
ಕಣಕಣವೂ ಜುಮುಗುಡುವ
ನಾದ ಕಚಗುಳಿಗೆ ನವಿರಾಗಿ
ನಡುಗುವ ಮೈ ಇಷ್ಟಿಷ್ಟೇ
ಅರಳುತ್ತ ಸುಡುಸುಡು ಕೇದಗೆ”-

Read More

ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

“ಚಂಡಮಾರುತ ತಂದ ಅಕಾಲಿಕ ಮಳೆಗೇನು ಗೊತ್ತು
ತೋಯ್ದುಹೋಗದೆ ಉಳಿದ ನೂರಾರು ಮಾತುಗಳು, ಆಣೆ ಪ್ರಮಾಣಗಳು
ಒಲ್ಲದ ಮನಸಿನ ಒಡಂಬಡಿಕೆಗಳಿಂದ
ಎಷ್ಟು ಹೃದಯಗಳು ಮುರಿದಿವೆಯೋ ಗೊತ್ತಿಲ್ಲ
ಮುಲಾಮು ಹಚ್ಚುವ ಕೈಗಳಿಗೇ ಮದ್ದಿಲ್ಲ!”- ಸತ್ಯಪ್ರಕಾಶ್ ರಾಮಯ್ಯ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ