Advertisement

Category: ದಿನದ ಕವಿತೆ

ರವಿ ಶಿವರಾಯಗೊಳ ಬರೆದ ಈ ದಿನದ ಕವಿತೆ

“ಹೈಸ್ಕೂಲೂ ಓದದ ಚಾಯ್ ಹುಡುಗನಿಗೆ
ವಿಜ್ಞಾನಕಿಂತ ಲೋಕಜ್ಞಾನ ಬಲು ರುಚಿಸುತ್ತದೆ
ಒಮ್ಮೊಮ್ಮೆ ಯಾರಿಗೋ ಅವನು ಓಶೋ ಆಗುತ್ತಾನೆ
ದಾರಿ ತಪ್ಪಿ ಬಂದವರ ಕೈಗೊಂದು ಚಾ ಇಟ್ಟು
ದಿಕ್ಕು ತೋರಿಸುತ್ತಾನೆ…
ಚಾದ ಮೇಲಿನ ಹೊಗೆಯಂತೆಯೇ ಬಂದವರು
ಇವನ ಕೈ ಬೆರಳಿನ ನೇರಕ್ಕೆ ಹೋಗಿ ಎತ್ತಲೋ ತಿರುಗಿ ಮರೆಯಾಗುತ್ತಾರೆ
ಒಳಗೊಳಗೇ ಇವನಿಗೆ ಎಂಥದೋ ಖುಷಿ…”- ರವಿ ಶಿವರಾಯಗೊಳ ಬರೆದ ಈ ದಿನದ ಕವಿತೆ

Read More

ಮೆಹಬೂಬ್ ಮಠದ ಬರೆದ ಈ ದಿನದ ಕವಿತೆ

“ಝಗಮಗಿಸುವ ಇಂದ್ರನ ಅರಮನೆಗಳು
ನರಳುತ್ತಿವೆ
ಅಷ್ಟದಿಗ್ಭಂದನ ನಡುವೆ
ಮೈತುಂಬಾ ಹೊಲಿಗೆ ಹಾಕಿಸಿಕೊಂಡ
ಗುಡಿಸಲುಗಳು ಗುನುಗುವ
ಹಾಡಿನ ಬೊಗಸೆ ತುಂಬಾ
ನಳ ನಳಿಸುವ ಪ್ರೀತಿ”- ಮೆಹಬೂಬ್ ಮಠದ ಬರೆದ ಈ ದಿನದ ಕವಿತೆ

Read More

ವಸು ವತ್ಸಲೆ ಬರೆದ ಈ ದಿನದ ಕವಿತೆ

“ಅಸ್ಪಷ್ಟ ಭಾವಗಳು ಲಾವಾರಸದಂತೆ ಉಕ್ಕಿ
ಕುದಿ ಮೌನ ಈರ್ಷ್ಯೆಯಲಿ ಕಣ್ಣೊಳಗೆ ನುಂಗುತ್ತಿದೆ…
ಮುಲಾಜಿಲ್ಲದ ಮಾತು ಭಯ ಉದ್ವೇಗ ಮೀರಿ
ಬದುಕನ್ನು ಮುದ್ದಿಸುವುದ ಮರೆತು
ತಗುಲಿಕೊಂಡಿದೆ ಕ್ರೂರ ಕೋಪದ ಹರಿತ
ಕತ್ತಿಯ ತುದಿಗೆ ….”- ವಸು ವತ್ಸಲೆ ಬರೆದ ಈ ದಿನದ ಕವಿತೆ

Read More

ದೀಪಾವಳಿ ಹಬ್ಬಕೆ ಆಶಾ ಜಗದೀಶ್‌ ಕವಿತೆ

“ಮುತ್ತಿರುವ ಕತ್ತಲೆಯ ತುಂಬ
ಹರಿದ ಖೋಲಿಯ ನೂರಾರು ಕತೆಗಳು
ಬರುವ ಬೆಳಕಿನ ಬಸಿರಲಿ
ಹಲವು ಆಶೋತ್ತರಗಳು
ನನಸಾಗಿಸಿ ಉಳಿಸು ಬೆಳಕೇ”- ದೀಪಾವಳಿ ಹಬ್ಬಕೆ ಆಶಾ ಜಗದೀಶ್‌ ಕವಿತೆ

Read More

ಶಾಂತಾಕುಮಾರಿ ಬರೆದ ಈ ದಿನದ ಕವಿತೆ

“ಅಲ್ಲೇ ಕುಳಿತೆ ಕಲ್ಲುಬೆಂಚಿನ ಮೇಲೆ
ಕಟ್ಟೆಯ ಬದಿಯಲ್ಲಿ ಚ್ವಾರಟೆ ಹುಳುಗಳೆರಡು
ಸಮಾಗಮದಲ್ಲಿ ಬಂಧಿಯಾಗಿದ್ದವು
ಕಡ್ಡಿಯಿಂದ ಕಿತ್ತೆಸೆದೆ ಮಕ್ಕಳು ಮರಿಗಳಾಗಿ
ಸಂತತಿ ಅನಂತವಾದರೆ ರಗಳೆ
ಕಣ್ಣು ಹಾಯಿಸಿದೆ ಸುಂದರ ಹೂಬಿಟ್ಟ
ಗಿಡಗಳ ಮೇಲೆ ಹಾಗೇ ಪಾಟಿನ ಬುಡಕ್ಕೆ
ಬರೀ ಸಿಂಬಳದ ಹುಳಗಳ ಸಾಲು”- ಶಾಂತಾಕುಮಾರಿ ಬರೆದ ಈ ದಿನದ ಕವಿತೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ