Advertisement

Category: ವಾರದ ಕಥೆ

ಮೋಹಕ ದ್ವೀಪದ ಮೂಗಿನ ತುದಿ: ಅಬ್ದುಲ್ ರಶೀದ್ ಬರೆದ ಕಥೆ

“ಇವರ ಕಥೆಯನ್ನು ಕೇಳಿಸಿಕೊಂಡ ನಾನು ಅವರಿಗೆ ಬೇಕಾಗಿ ನಕ್ಕು ಸುಮ್ಮನಾಗುತ್ತೇನೆ. ಎಲ್ಲಿಂದ ಎಲ್ಲಿಗೋ ಹೊರಟಿದ್ದ ಉಕ್ಕಿನ ನೌಕೆಯೊಂದು ಯಾರದೋ ಹುಚ್ಚು ಮೋಹದಿಂದಾಗಿ ಇಲ್ಲಿ ತುಕ್ಕು ಹಿಡಿದು ಸಾಯಬೇಕಾಗಿ ಬಂದಿರುವುದು ಇವರಿಗೆ ನಗುವಿನ ವಿಷಯ… “

Read More

ಬಿಡುಗಡೆ: ಉಮೇಶ ದೇಸಾಯಿ ಬರೆದ ವಾರದ ಕಥೆ

“ರಾತ್ರಿ ಮಗಳು ಫೋನ್ ಮಾಡಿದ್ದಳು. ಬಿಕ್ಕುತ್ತಲೇ ಮಾತನಾಡಿದಳು. ಮೇಲಿಂದ ಮೇಲೆ ಸಾರಿ ಕೇಳುತ್ತಿದ್ದಳು. ಅವಳಿಗೆ ವಿಶ್ವಾಸ ತುಂಬಿ ನಾಕು ಸಮಾಧಾನದ ಮಾತು ಹೇಳಿದಾಗ ರಾಧಾಳಲ್ಲೂ ನಿರಾಳತೆಯ ಭಾವ. ಆದರೆ ಬೆಳಿಗ್ಗೆ ಬಂದ ಫೋನು ಅವಳನ್ನು ವ್ಯಗ್ರಳನ್ನಾಗಿಸಿತು. ಅನಿಲ ಕಪೂರ ಫೋನ್ ಮಾಡಿದ್ದ. ಎಲ್ಲದಕ್ಕೂ ರಾಧಾಳೇ ಹೊಣೆ, ಅವಳ ಮಹತ್ವಾಕಾಂಕ್ಷೆಗೆ ಮಗಳು ಬೋರ್ಡಿಂಗ್ ಸೇರುವಂತಾಯಿತು.”

Read More

ಸುನೈಫ್ ವಿಟ್ಲ ಅನುವಾದಿಸಿ ವೈಕಂ ಮುಹಮ್ಮದ್ ಬಷೀರ್ ಕತೆ “ಅಮ್ಮ”

“ನನಗೆ ಎರಡು ಆಸೆಗಳಿದ್ದವು. ಎರಡೆನೆಯದ್ದು ಒಂದು ಶಾಲು. ದ್ರಾಕ್ಷೆ ಬಳ್ಳಿಗಳ ಅಂಚು ಇರುವ ಖಾದಿ ಶಾಲನ್ನು ಮಿಸ್ಟರ್ ಅಚ್ಚುತನ್ ನನಗೆ ಕೊಡಿಸಿದರು. ಮೊದಲನೇ ಆಸೆ 270ನ್ನು ಕೊಲ್ಲಬೇಕು! ಅದಕೆ ನನ್ನ ಕೈಯಲ್ಲಿ ಆಯುಧಗಳೊಂದೂ ಇಲ್ಲ. ಒಂದು ರಿವಾಲ್ವರ್ ಸಿಕ್ಕಿದ್ದರೆ ಸಾಕಿತ್ತು! ಎಂದು ಮನಸು ಹೇಳುತ್ತಿತ್ತು. ಆತ ಪಾಳಯಂ ಅಲ್ಲಿ ಟ್ರಾಫಿಕ್ ಡ್ಯೂಟಿಯಲ್ಲಿದ್ದದ್ದನ್ನು ನಾನು ನೋಡಿದೆ…”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಪಡುಕೋಣೆ ರಮಾನಂದರಾವ್ ಬರೆದ ಕತೆ

“ಹೊರಗಿನಿಂದ ಆ ಬಡ ಜನರ ಗಲಾಟೆ ಇನ್ನೂ ಅವನಿಗೆ ಕೇಳಿಸುತ್ತಿತ್ತು. ಆದರೆ ಅವರ ಮೇಲಿದ್ದ ಅವನ ಕೋಪವೂ ತಾತ್ಸಾರವೂ ಈಗ ಬಹಳ ಮಟ್ಟಿಗೆ ಕಡಿಮೆಯಾದುವು. ಅವರಲ್ಲೊಬ್ಬರಿಗೆ ಒಂದೊಂದು ಅರ್ಧಪಾವು ಅಕ್ಕಿ ಹಾಕಿ ಅವರನ್ನೆಲ್ಲ ಕಳುಹಿಸಿಬಿಡಲೇ ಎಂದು ಆಲೋಚಿಸಿದನು. ಆದರೆ ಅವರ ಗೋಳು ಭಿಕ್ಷೆಯನ್ನೆತ್ತುವುದಕ್ಕಲ್ಲ, ಅಕ್ಕಿಯ ಧಾರಣೆಯನ್ನು ಕಡಿಮೆ ಮಾಡುವುದಕ್ಕೆ ಎಂದು ಅವನು ಚೆನ್ನಾಗಿ ತಿಳಿದಿದ್ದನು. ಅದು ಅವನ ನೆನಪಿಗೆ ಬರುತ್ತಲೆ ಮೆಲ್ಲಮೆಲ್ಲನೆ ದ್ರವಿಸುತ್ತಿರುವ ಅವನ ಹೃದಯ.. “

Read More

ಮುನವ್ವರ್ ಜೋಗಿಬೆಟ್ಟು ಬರೆದ ಸಣ್ಣ ಕತೆ “ಎರಡನೇ ತಿರುವು”

“ಏನೋ ತೀರ್ಮಾನಿಸಿದವಳಂತೆ, ಮೆಟ್ಟಿಲಿಳಿದು ರಸ್ತೆಗೆ ಬಂದಳು. ನಿಡು ದೂರದಲ್ಲಿ ಕುತೂಹಲ ಹುಟ್ಟಿಸುವ ಆ ಎರಡನೇ ಅಡ್ಡ ರಸ್ತೆ. ಒಮ್ಮೆ ಉರಿದು ಮತ್ತೆ ನಂದುತ್ತಿರುವ ದಾರಿದೀಪ. ಸಾಲದ್ದಕ್ಕೆ ಲೈಟು ಕಂಬದಿಂದ “ಟ್ರೀ” ಎಂಬ ಶಾರ್ಟ್ ಸರ್ಕ್ಯೂಟಿನ ಸದ್ದು. ಬೆಳಕು ನಂದಿ ಹೊತ್ತುವಷ್ಟರಲ್ಲೇ ಕತ್ತಲ ಮಧ್ಯೆ ರಪ್ಪನೆ ಯಾರೋ ನುಗ್ಗಿದಂತಾಗಿ ಇವಳೆದೆಯ ತುಂಬಾ ಹಾಲಿನವನ ಪ್ರೇತ. ಮತ್ತೆ ಮತ್ತೆ ನಡೆದಳು.”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ