Advertisement

Category: ವಾರದ ಕಥೆ

ಶ್ರೀಮತಿ ಬ್ರಿಡ್ಜ್ ಳ ಸುಂದರ ಜಗತ್ತು: ಆರ್ ವಿಜಯರಾಘವನ್ ಅನುವಾದಿಸಿದ ಎವನ್ ಎಸ್ ಕಾನಲ್ ಬರೆದ ಕತೆ

“ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ..”

Read More

ಓಬಿರಾಯನ ಕಾಲದ ಕಥಾಸರಣಿಯಲ್ಲಿ ಎಸ್. ವೆಂಕಟರಾಜ ಬರೆದ ಕತೆ

“ಜಮೀನ್ದಾರರ ಮಗನಿಗೆ ಆರು ತಿಂಗಳ ಗಾಂಧಿ ಶಿಕ್ಷೆಯಾಯಿತೆಂದು ಒಂದು ಕ್ಷಣದೊಳಗೆ ಊರಿಗೆ ಊರೇ ಮಾತಾಡತೊಡಗಿತು. ಬೆಂಗಳೂರಿನಿಂದ ರಾಯರಿಗೆ ಬೇಕಾದವರು ಕೊಟ್ಟ ತಂತಿ ಆಗತಾನೇ ಬಂದಿತೆಂದು ಜನರು ಆಡಿಕೊಂಡರು. ಅದನ್ನು ಕೇಳಿ ಕೇಶವಯ್ಯನವರು ತಲೆದೂಗಿ ತನ್ನಷ್ಟಕ್ಕೆ ನುಡಿದರು : ಪ್ರವಾಹದಲ್ಲಿ ಯಾವುದು ತಾನೇ ಕೊಚ್ಚಿಹೋಗುವುದಿಲ್ಲ? ಅದಕ್ಕಾಗಿ ಅಳಬೇಕಾಗಿಲ್ಲ. ಹೆಮ್ಮೆ ಪಡಬೇಕು.”

Read More

ಶಾಲೂ: ಅಂಜನಾ ಗಾಂವ್ಕರ್ ಬರೆದ ಕತೆ

“ಗಂಗಜ್ಜಿಯ ಮಗಳು ಹಳ್ಳಿಯ ಕೆಲಸಕ್ಕೆ ಬೀಳಬಾರದೆಂದು ನಗರದ ವರನ ಹುಡುಕಿ ಕೊಟ್ಟಿದ್ದಳು. ಇನ್ನು ಮಗನಿಗೆ ತಂದ ಹೆಣ್ಣು ಶಾಲು. ಅತ್ತೆಗೆ ಒಂದು ಮಾತೂ ಆಡದವಳು. ಅವಳಾಯಿತು, ಅವಳ ಕೆಲಸವಾಗಿತ್ತು. ಮಗಳಿಗೆ ಹೋಲಿಸಿ ನೋಡುತ್ತಿದ್ದರು. ‘ಸುಜಲಾಗೆ ಎಷ್ಟು ಕಷ್ಟ, ಅತ್ತೆ ಮಾತು ಎದುರಿಸಬೇಕು. ಕೆಲಸಕ್ಕೆ ಹೋಗುತ್ತಾಳೆ. ಜಾಣೆ ಅವಳು.”

Read More

ಪ್ರೋಗ್ರೆಸ್: ಎಂ.ಜಿ. ಶುಭಮಂಗಳ ಅನುವಾದಿಸಿದ ಪೆದ್ದಿಂಟಿ ಅಶೋಕ್ ಕುಮಾರ್ ಬರೆದ ಕತೆ

“‘ಪ್ರಾಮಿಸ್ ಅಪ್ಪಾ.. ತಪ್ಪದೆ ಒಳ್ಳೆ ಮಾರ್ಕ್ಸ್ ತೆಗೆದುಕೊಳ್ಳುತ್ತೇನೆ. ಪ್ರತಿದಿನ ಹನ್ನೆರಡು ಗಂಟೆವರೆಗೂ ಓದುತ್ತೇನೆ. ಬೆಳಿಗ್ಗೆ ಎಬ್ಬಿಸಿದ ತಕ್ಷಣ ಏಳುತ್ತೇನೆ. ತಾತನ ಮನೆಗೆ ಹೋಗುವುದಿಲ್ಲ. ತಮ್ಮನೊಂದಿಗೆ ಆಟವಾಡುವುದಿಲ್ಲ..ʼ ಇನ್ನೂ ಏನೋ ಹೇಳುತ್ತಿದ್ದಾಳೆ.”

Read More

ಅಗಸ್ತ್ಯ: ಉಮಾರಾವ್ ಬರೆದ ಕತೆ

“ದಿನಗಳೆದಂತೆ ಶಮಿ ವರುಣನ ಜೊತೆ ಹೆಚ್ಚು ಹೆಚ್ಚು ಕಾಲ ಕಳೆಯತೊಡಗಿದ್ದಳು. ಈಗೀಗ ಹೆಚ್ಚಾಗಿ ಅವರಿಬ್ಬರೇ ತಿರುಗಾಡಲು ಹೋಗುತ್ತಿದ್ದರು. ಅಗಸ್ತ್ಯ ಜೊತೆಗಿದ್ದಾಗಲೂ; ಎಷ್ಟೋ ಸಲ ತಮ್ಮ ಪ್ರಪಂಚದಲ್ಲೇ ಮೈಮರೆತು, ಇವನ ಇರವನ್ನೇ ಮರೆತುಬಿಡುತ್ತಿದ್ದರು. ಅಂತಹ ಸಮಯದಲ್ಲಿ, ಅಗಸ್ತ್ಯನಿಗೆ ತಾನು ಹೊರಗುಳಿದ ಭಾವನೆ ಬಂದರೂ, ಎಳೆಯ ಮಗುವಿನಂತೆ ಆಡಬಾರದು, ಅವರ ಸ್ನೇಹವನ್ನು ಕಂಡು ಚಿಕ್ಕ ಹುಡುಗನಂತೆ ಅಸೂಯೆ ಪಡಬಾರದು…”

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಹಳ್ಳಿ ಹಾದಿಯ ಹೂವಿನ ಘಮದಲ್ಲಿ ಬಾಲ್ಯದ ಪರಿಮಳ: ಡಾ. ತಿಮ್ಮಯ್ಯ ಶೆಟ್ಟಿ ಬರಹ

ಹಳ್ಳಿ ಹಾದಿಯ ಹೂವು ಕಾದಂಬರಿಯಲ್ಲಿ ಲೇಖಕರು ಒಂಬತ್ತೋ, ಹತ್ತೋ ವರ್ಷದ ಬಾಲಕ ಶಾಮನಾಗಿ ತಮ್ಮ ಅನುಭವದ ಹೂಗಳನ್ನು ತೋರಣವಾಗಿ ಕಟ್ಟಿದ್ದಾರೆ. ಹಳ್ಳಿ ಹಾದಿಯ ಹೂವಿನ ಪರಿಮಳ ಘಮಘಮಿಸಿ…

Read More

ಬರಹ ಭಂಡಾರ