Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕಥೆ

ಕಣ್ಣುಮುಚ್ಚಿ ಒರಗಿದವನಿಗೆ ನಿದ್ರೆ ಬರಲಿಲ್ಲ. ಬಣ್ಣ ಬಣ್ಣದ ವೇಷ ತೊಟ್ಟ ಯಕ್ಷಗಾನದ ಪಾತ್ರಗಳು ರಿಂಗಣ ಹಾಕಲು ಪ್ರಾರಂಭಿಸಿದಂತೆ ಬದುಕಿನ ಭೂತಕಾಲ ಬೆತ್ತಲೆಯಾಗಿ ನಿಂತಿತು. ಅವನು ತನ್ನ ಅಮ್ಮಿಜಾನಳ ಹೊಟ್ಟೆಯಿಂದ ಈ ಪ್ರಪಂಚಕ್ಕೆ ಬಂದಾಗ ಅಪ್ಪ ಇರಲಿಲ್ಲ. ಅವನ ಅಪ್ಪ ಕಂಕನಾಡಿಯ ವಿಟ್ಟುಪೈಯವರ ಮಂಡಿಯಲ್ಲಿ ಉಪ್ಪು ಮೀನು ಪಡೆದು ಘಟ್ಟದ ಕಡೆಗೆ ಲಾರಿಯಲ್ಲಿ ಸಾಗಿಸಿ, ಮಾರಾಟ ಮಾಡಿ ಮನೆಗೆ ಮರಳಬೇಕಾದರೆ ವಾರವೆರಡು ಕಳೆಯುತ್ತಿದ್ದವು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಭದ್ರಪ್ಪ ಶಿ ಹೆನ್ಲಿ ಬರೆದ ಕತೆ ‘ಎದೆ ಹತ್ತಿ ಉರಿದೊಡೆ’

Read More

ನಾರಾಯಣ ಯಾಜಿ ಈ ಭಾನುವಾರದ ಕಥೆ

ಆತ ಹಿಂದಿಯಲ್ಲಿ “ಮಾಲು ಬೇಕಾ, ಪ್ರೆಶ್ ಇದ್ದಾರೆ” ಎಂದ. ಅನಂತ ಇಲ್ಲಾ ನಾವು ಇಲ್ಲಿ ನಮ್ಮೂರಿನ ಹೋಟೇಲಿನವರನ್ನು ಭೆಟ್ಟಿಯಾಗಲಿಕ್ಕೆ ಬಂದಿದ್ದೇವೆ. ಅಂತಹುದೇನೂ ನಮಗೆ ಆಸೆಯಿಲ್ಲ ಎಂದು ಅವನನ್ನು ಸಾಗಹಾಕಲು ನೋಡಿದ. ಆತನೂ ಬಿಡಲಿಲ್ಲ. “ಸಾಬ್ ನೋಡಿ ಹೋಗಿ, ಅದಕ್ಕೆ ಹಣಕೊಡಬೇಕಾಗಿಲ್ಲ.” ಎಂದು ಒತ್ತಾಯ ಮಾಡಲು ತೊಡಗಿದ. “ನಾವು ಅಂತವರಲ್ಲ ಮರಿ…” ಎಂದು ಮೂರ್ತಿ ಹೇಳುತ್ತಿರುವಂತೆ ಆತ ಮತ್ತೆ ತನ್ನ ವರಾತ ಹಚ್ಚಿ “ನೋಡಿ ಹೋಗಿ ಅವರೆಲ್ಲಾ ತನ್ನ ಅಕ್ಕಂದಿರು” ಎಂದ.

Read More

ನನ್ನ ಮೆಚ್ಚಿನ ನನ್ನ ಕಥಾ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಕತೆ

ಆ ಹೆಂಗಸು ಯಾವ ಮಾತನ್ನೂ ಆಡದೆ ಸುಮಾರು ಅರ್ಧ ಗಂಟೆ ಹಾಗೆಯೇ ಕುಳಿತಿದ್ದಳು. ಅಕ್ಕನ ಕಾಲಿಗೆ ನಮಸ್ಕಾರ ಮಾಡಿ ‘ಹೋಗಿ ಬರುತ್ತೇನಮ್ಮ’ ಎಂದಳು. ನನ್ನಲ್ಲಿ ಯಾವ ಮಾತನ್ನೂ ಆಡಲಿಲ್ಲ. ಮಗುವನ್ನು ಜೋಯಿಸರ ಕುರ್ಚಿಯ ಎದುರು ಸಾಷ್ಟಾಂಗ ನಮಸ್ಕಾರ ಮಾಡಿಸಿದಳು. ತಾನೂ ಆ ಕುರ್ಚಿಗೆ ನಮಸ್ಕರಿಸಿದಳು. ‘ಬಸ್ಸಿಗೆ ತಡಾವಾಯಿತೋ ಏನೋ’ ಎಂದು ತನ್ನಷ್ಟಕ್ಕೆ ಎಂಬಂತೆ ಅಕ್ಕನಿಗೆ ಮತ್ತೊಮ್ಮೆ ಹೇಳಿ ಅವಸರದಲ್ಲಿ ನಡೆದು ಹೋದಳು.
‘ನಾನು ಮೆಚ್ಚಿದ ನನ್ನ ಕತೆ’ಯ ಸರಣಿಯಲ್ಲಿ ಬೆಳಗೋಡು ರಮೇಶ ಭಟ್ ಬರೆದ ಕತೆ ಜೋಯಿಸರ ಕುರ್ಚಿ ಈ ಭಾನುವಾರದ ನಿಮ್ಮ ಓದಿಗೆ

Read More

ಅಬ್ದುಲ್ ರಶೀದ್ ವಿರಚಿತ ‘ರಕ್ತಚಂದನ’ ಎಂಬ ನೀಳ್ಗತೆಯು

ಚಾರುದತ್ತರ ಮರಣದ ಸುದ್ದಿ ನನಗೆ ಗೊತ್ತಾಗಿದ್ದು ಅವರು ತೀರಿಹೋಗಿ ಮಾರನೇ ದಿನ ಮಧ್ಯಾಹ್ನ. ಕೊರೋನಾದ ಮೊದಲ ಅಲೆ ಅದಾಗ ತಾನೇ ಉಲ್ಬಣಿಸುತ್ತಿದ್ದ ಕಾರಣ ಫೇಸ್ ಬುಕ್ಕು ಲೈವಿನಲ್ಲೇ ಅವರಿಗೆ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದರು. ಲೇಖಕಿ ವಿಲಾಸಿನಿ ಹಾಸಿಗೆಯಲ್ಲಿ ಮಲಗಿದ್ದಲ್ಲೇ ಗೋಡೆಗೆ ಒರಗಿ ಕುಳಿತು ಕಣ್ಣು ಮುಖ ಊದಿಸಿಕೊಂಡು ಲೈವಿನಲ್ಲಿ ಮುಳುಮುಳು ಅಳುತ್ತಾ ನಡುನಡುವೆ ಸ್ಪಷ್ಟವಾಗಿ ಮಾತಾಡುತ್ತಿದ್ದಳು. …”

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ ಬರೆದ ಕತೆ

ಕುಲಕರ್ಣಿ ದತ್ತು ಎದ್ದು ನಿಂತು “ಗುರಪಾದ ಹೆಣಾ ಮಣ್ಣ ಮಾಡಬ್ಯಾಡ. ಹಂಗೇನಾದರು ಆತಂದ್ರ ಪೋಲಿಷವರೆಗೆ ಹೋಗತದ ನೋಡು. ನಮ್ಮದಂತು ಕಬೂಲಿಲ್ಲ. ನಾ ನಡೀತೇನ ಅಂತಂದು ಎದ್ದು ಹೊರನಡೆದ. ಅವನ ಜೋಡ ಏಳೆಂಟಮಂದಿ ಎದ್ದರು. ಮಹಮ್ಮದ ಅಲಿ ಎದ್ದು ನಿಂತು ಗುರಪಾದನ ಕಡೀಗಿ ತಿರಿಗಿ “ಗುರುಪಾದನ್ನ ನಮ್ಮ ಜಾತಿಗಿ ವಿರುದ್ಧವಾಗಿ ನಾನೇನು ಮಾಡಂಗಿಲ್ಲ. ನಿಮಗ ಶಿವಾ ಹೆಂಗೋ ನಮಗ ಅಲ್ಲಾನು ಹಂಗ, ನಾವಿನ್ನ ಬರ್ತಿವಿ.. ಎಂದ್ಹೇಳಿ ಅವರು ಎಲ್ಲರು ಎದ್ದುಹೋದರು.”
‘ನಾನು ಮೆಚ್ಚಿದ ನನ್ನ ಕತೆʼಯ ಸರಣಿಯಲ್ಲಿ ಬಸವಣ್ಣೆಪ್ಪಾ ಪ. ಕಂಬಾರ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ