Advertisement

Category: ವಾರದ ಕಥೆ

ಸುಜಯ್‌ ಪಿ ಬರೆದ ಈ ಭಾನುವಾರದ ಕತೆ

ಭಾಗೀರಥನ ಕಾಲನ್ನು ಬಿಡಿಸಲು ಬೇಕಾಗಿ ಸಂಕದ ಎರಡು ಹಲಗೆಗಳನ್ನು ಕಡಿದು ತೆಗೆದು ಬೇರೆ ಹಲಗೆ ಹಾಕುವಷ್ಟರಲ್ಲಿ ಡೀಮಣ್ಣ ಕಡಿಮೆಂದರೂ ಹತ್ತರ ಮೇಲೆ ಬೀಡಿ ಸೇದಿದ್ದರು. ಬೀಡಿ ಸೇದಿದ ಮೇಲೆ ಉಳಿಯುವ ಬೀಡಿಯ ತುದಿಯನ್ನು ಕೂಡಾ ಜಗಿದು ತಿನ್ನುವ ಅಭ್ಯಾಸವಿದ್ದ ಡೀಮಣ್ಣ ಆವತ್ತು ಪ್ರತೀ ಬೀಡಿ ಮುಗಿಯುತ್ತಲೂ ಬಂಗಾಳದ ಭಾಗೀರಥನಿಗೆ ಬಯ್ಯದೆ ಅವನನ್ನು ಈ ಊರಿಗೆ ಕರೆದುಕೊಂಡು ಬಂದ ಮಣಿಕಂಠನಿಗೆ ಬಾಯಿ ಬಂದಂತೆ ಬಯ್ಯುತ್ತಲೇ ಇದ್ದರು.

Read More

ಡಾ.ಕೆ. ಷರೀಫಾ ಬರೆದ ಈ ಭಾನುವಾರದ ಕಥೆ “ಹೀಗೊಂದು ಖುಲಾಹ್”

ಇತ್ತೀಚೆಗೆ ಅವನು ಯಾಕೆ ಮಾತು ಮಾತಿಗೆ ತಲ್ಲಾಖ್ ಕೊಡುತ್ತೇನೆಂದು ಹೆದರಿಸುತ್ತಲೇ ಇರುತ್ತಿದ್ದ. ನಾನೂ ಸುಮ್ಮನೇ ಮನೆಯಲ್ಲಿ ಸುಮ್ಮನೆ ಕೂಡುತ್ತಿರಲಿಲ್ಲ. ಟೇಲರಿಂಗ್ ಸೆಂಟರ್‌ನಲ್ಲಿ ಕೆಲಸ ಮಾಡಿ ಸಂಪಾದಿಸುತ್ತಿದ್ದೆ. ಅತ್ತೆಯವರು ಮಕ್ಕಳನ್ನು ನೋಡಿಕೊಳ್ಳತ್ತಿದ್ದರು. ಗಂಡ ಮಗಳು ಸಲ್ಮಾಗೆ ಒಳ್ಳೆಯ ಶಾಲೆಗೆ ಸೇರಿಸಿದ್ದನು. ಶೋಯೇಬ್‌ಗೆ ಇನ್ನೂ ಶಾಲೆಗೆ ಹಾಕಿರಲಿಲ್ಲ. ಮಾತು ಮಾತಿಗೆ ಹೊಡಿಬಡಿ ಮಾಡುವುದು, ಕೂಗಾಡುತ್ತಿದ್ದುದೇ ಅವಳಿಗೊಂದು ಸಮಸ್ಯೆಯಾಗಿತ್ತು.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಸು ಬೇವಿನಗಿಡದ ಬರೆದ ಕತೆ

ಅಳುತ್ತಿದ್ದ ಅವಳನ್ನು ಡಾಕ್ಟರ್ ಒಂದೆರಡು ಗುಳಿಗೆ ನುಂಗಿಸಿ ನೀರು ಕುಡಿಸಿ ಸಮಾಧಾನಪಡಿಸಿದರು. ಕೂಡಲೆ ಆಕೆ ನಿದ್ದೆಹೋದಳು. ಆಕೆಯ ಮನಸ್ಸು ಕೃಷ್ಣನ ಕಥೆಯಿಂದ ಘಾಸಿಗೊಂಡಿದೆಯೆಂದು ಅವರಿಗೆ ತಿಳಿಯಿತು. ‘ನಾಟಕದ ಕೃಷ್ಣ ಬಂದು ನಮ್ಮಣ್ಣನ ಸಾಯಹೊಡದು ನನ್ನ ಕರ್ಕೊಂಡು ಹೋಗ್ತಾನಂತ.’ ಎಚ್ಚರಾದಾಗ ವಿಮಲವ್ವ ಹೇಳಿದ ಮಾತಿಗೆ ಡಾಕ್ಟರ್ ನಕ್ಕರು. ‘ನಿಮ್ಮಣ್ಣ ದೊಡ್ಡ ಹುಲಿ ಅದಾನು. ಇಂವ ಅಡರ್ ಅಂದ್ರ ಕೃಷ್ಣನ ಕಿರೀಟ ಅಲ್ಲೇ ಬೀಳ್ತದ ತಗೋ. ನೀಯೇನೂ ಹೆದರಬ್ಯಾಡ’.

Read More

ಕಾರ್ತಿಕ್ ಆರ್. ಬರೆದ ಈ ಭಾನುವಾರದ ಕತೆ

ಇಷ್ಟೆಲ್ಲ ನಡೆಯತ್ತಿದ್ದಾಗ, ಅವನೆಲ್ಲಿದ್ದ? ಎಂದೇನಾದರೂ ಕೇಳಿದರೆ ತಾರಾಗೆ ಸರಿಯಾಗಿ ಉತ್ತರಿಸಲು ಸಾಧ್ಯವಾಗುವುದಿಲ್ಲ. ಅಷ್ಟಕ್ಕೂ ತಮ್ಮಿಬ್ಬರ ನಡುವೆ ಏನಿತ್ತು? ಇದ್ದದ್ದು ಎಷ್ಟು ಗಾಢವಾಗಿತ್ತು? ಸಾಧ್ಯವಾಗಿದ್ದರೆ ಅವನ ಜೊತೆ ಓಡಿ ಹೋಗುತ್ತಿದ್ದೇನೇ ತಾನು? ಕೇಳಿಕೊಳ್ಳುತ್ತಾಳೆ ಕೆಲವೊಮ್ಮೆ! ಕೆಲಕಾಲ ಬಿಟ್ಟಿರಲಾರದಂತೆ ಬೆಸೆದುಕೊಂಡಿದ್ದ ತಾವಿಬ್ಬರೂ, ಅದೆಷ್ಟು ಬೇಗ ಒಂದೇ ಊರಿನಲ್ಲಿದ್ದೂ ದಶಕಗಟ್ಟಲೇ ಅಜ್ಞಾತರಾಗಿ ಬದುಕಿ ಬಿಡುವಷ್ಟು ಬದಲಾಗಿ ಹೋದೆವು? ಮಾತಿನಲ್ಲಿ ನೂರಾರು ಚಂದದ ಕನಸುಗಳನ್ನು ಹೆಣೆದುಕೊಡುತ್ತಿದ್ದ ಅವನು…”

Read More

ನಾನು ಮೆಚ್ಚಿದ ನನ್ನ ಕಥಾಸರಣಿಯಲ್ಲಿ ಬಿದರಹಳ್ಳಿ ನರಸಿಂಹಮೂರ್ತಿ ಬರೆದ ಕಥೆ

ಪರಿಸ್ಥಿತಿ ಬಿಗಡಾಯಿಸುತ್ತಿತ್ತು. ಕಾನ್ಸ್‌ಟೇಬಲ್ಗೆ ರೈಫಲ್ಹಿಡಿದು ನಿಲ್ಲಲು ಸೂಚಿಸಿದೆ. ಮೊಬೈಲ್ ಫೋನಿನಲ್ಲಿ ತಹಶೀಲ್ದಾರರನ್ನು ಸಂಪಕಿಸಲು ನೋಡಿದೆ. ಶಿರಸ್ತೆದಾರ್ ಸಿಂಪಿಗೇರ್ ಸಿಕ್ಕ. ಎಲೆಕ್ಷನ್ ಡ್ಯೂಟಿಯಿಂದ ವಿನಾಯ್ತಿ ಕೇಳಿದ್ದಕ್ಕೆ ಬೇಕೆಂತಲೆ ನನ್ನನ್ನ ಈ ತರ್ಲೆಊರಿಗೆ ಪ್ರಿಸೈಡಿಂಗ್ ಆಫೀಸರ್ ಮಾಡಿಹಾಕಿಸಿದ್ದ ಮಹಾಶಯ ಅವ. ಪರಿಸ್ಥಿತಿ ವಿವರಿಸಿ ಹೆಚ್ಚೂಕಡಿಮೆ ಆದರೆ ಎಲೆಕ್ಷನ್ ರದ್ದುಮಾಡಬೇಕಾಗುತ್ತದೆ ಎಂದು ತಿಳಿಸಿದೆ. ಅರ್ಧಗಂಟೆಯಲ್ಲಿ ಪೋಲೀಸ್ ಜೀಪು ಬಂದಿತು. ಅದರಲ್ಲೆ ನ್ಯಾಮತಿಗೆ ಹೋಗಿ ಐವತ್ತು ರೊಟ್ಟಿ ಕಟ್ಟಿಸಿಕೊಂಡು…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ