Advertisement

Category: ವಾರದ ಕಥೆ

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಛಾಯಾ ಭಗವತಿ ಬರೆದ ಕತೆ

ಪ್ಯಾಟೀಗೆ ಬಂದಾಗ ಕರಬಸ್ಸಿಗೆ ನೆನಪಾದ್ರೂನೂ, ರೊಕ್ಕ ಕೊಡಲಾರದಂಗ ಹೊಳ್ಳಿ ಹೋಗಿರತಿದ್ದ. ಆದರ ಸಾವಕ್ಕನ ಗಂಡ ಹೇಮ್ಯಾನ್ನ ತಪ್ಪಿದ್ರ ಯಶವಂತನ್ನ ಕಳಿಸಿ ರೊಕ್ಕ ವಸೂಲ ಮಾಡಾತನಾ ಬಿಡ್ತಿರಲಿಲ್ಲ. ಈ ಮಾಬಾರ್ತದಾಗ ಗುದ್ದ್ಯಾಡಿ ಗುದ್ದ್ಯಾಡಿ ಸುಮ್ಮನಾಗಿಬಿಟ್ಟಿದ್ಲು ಸಾವಕ್ಕ. ನಡುಕ ತನಿಗೂ ಅರಿವಿ, ಪರಕಾರ ಹೊಲಸಿಗೆಣ ಹರಕತ್ತು ಇದ್ರೂನೂ ಹೊಳ್ಳಿ ಕೇಳಾದು ಬೇಶಿರಾದಿಲ್ಲ ಅನಿಸೇ ಅಕೀ ಹಿಂದಳ ಓಣಿ ಚನ್ನಮ್ಮಕ್ಕನ ಹತ್ರ ಅರಿವಿ ಕೊಟ್ಟು ತನಿಗೆ ಬೇಕಾದ್ದು ಹೊಲಸತಿದ್ಲು. ಇನ್ನ ಮಕ್ಕಳು ಅಂತೂ ಓದಾಕ….

Read More

ಅಲಕಾ ಕಟ್ಟೆಮನೆ ಬರೆದ ಈ ಭಾನುವಾರದ ಕತೆ

‘ನಮ್ಜಯು ಜಾಣೆ; ಮನೆ ಕೆಲಸಾನೂ ಮಾಡಿ, ಅಂಗಡೀನೂ ನಿಭಾಯಿಸ್ತಾಳೆ’ ಎಂದು ಮನೆಮಂದಿಯೆಲ್ಲಾ ಕೊಂಡಾಡಿದವರೇ, ಮೆಚ್ಚಿ ಮುದ್ದಾಡಿದವರೇ… ಎಲ್ಲವೂ ಸರಿಯಿದ್ದಾಗ. ಮೊದಲ ಬಾರಿಯ ಲಾಕ್ಡೌನ್ ಹೇಗೋ ಕಳೆಯಿತು. ಎರಡನೇ ಬಾರಿ ಲಾಕ್ಡೌನ್ ಆಗುವುದಕ್ಕೆ ಒಂದು ವಾರ ಮೊದಲೇ, ಸಹಾಯಕ್ಕಿದ್ದ ಹುಡುಗಿಗೆ ಎರಡು ತಿಂಗಳ ಮುಂಗಡ ಹಣ ನೀಡಿ, ಬುಟಿಕ್ ಬಾಗಿಲು ಹಾಕಿದ್ದೆ. ಆದರೆ ಮುಂದಿನ ನಾಲ್ಕೇ ದಿನದಲ್ಲಿ ಜ್ವರ ಆರಂಭವಾಗಿತ್ತು.

Read More

ಎಂ.ಜಿ. ಶುಭಮಂಗಳ ಅನುವಾದಿಸಿದ ನಕ್ಷತ್ರಂ ವೇಣುಗೋಪಾಲ್ ತೆಲುಗು ಕತೆ

ನಿಜ ಹೇಳಬೇಕೆಂದರೆ ಎಲ್ಲಿಕಾಟ್ ಸಿಟಿಯಲ್ಲಿ ಮನೆ ತೆಗೆದುಕೊಳ್ಳೋಣವೆಂದು ಪ್ರಸಾದ್ ಹೇಳಿದಾಗ ರಾಧಿಕಳೇ ಬೇಡ ಅದು ಮಿನಿ ಭಾರತ, ಎಲ್ಲಿ ನೋಡಿದರೂ ಮುಖ್ಯವಾಗಿ ತೆಲುಗಿನವರೇ. ಪ್ರತಿಯೊಂದಕ್ಕೂ ಮಕ್ಕಳು, ಮಹಿಳೆಯರು, ಗಂಡಸರ ನಡುವೆ ಅನಗತ್ಯ ಸ್ಪರ್ಧೆ. ಅದಕ್ಕೇ ಭಾರತೀಯರು ಕಡಿಮೆ ಇರುವ ಪ್ರದೇಶದಲ್ಲಿ ಮನೆ ತೆಗೆದುಕೊಳ್ಳೋಣ ಎಂದು ಪಟ್ಟುಹಿಡಿದು ಇಲ್ಲಿಗೆ ಬಂದಿದ್ದಾರೆ.

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕಾ. ಹು. ಚಾನ್‍ಪಾಷ ಬರೆದ ಕತೆ

ಅವ್ರು ಮಾಡ್ತಿರೋದು ಸರೀನಾ! ಇವ್ನು ಮಾಡ್ತಿರೋದು ಸರೀನಾ!.. ಬೀಜ-ವೃಕ್ಷದ ಪ್ರಶ್ನೆ ಇದ್ದಹಾಗೆ ಇದು ಬಿಡಿಸಲಾಗದ ಪ್ರಶ್ನೆ ಎನಿಸಿತು. ಪ್ರತಿ ತಂದೆ-ತಾಯಿಗಳೂ ಸಹ ಮೊದಲು ಮಕ್ಕಳಾಗಿರುತ್ತಾರೆ ತಾನೆ!… ‘ಬೆಳೆದ ಪರಿಸರ, ಪಡೆದ ಸಂಸ್ಕಾರಗಳೇ ಮುಖ್ಯ ಅದೇ ಎಲ್ಲದಕ್ಕೂ ಮೂಲ’ ಎಂದು ಹೇಳುತ್ತಿದ್ದ ರಿಯಾಜ್‌ನ ಮಾತು ನೂರಕ್ಕೆ ನೂರು ಸತ್ಯ ಎನಿಸಿತು. ಏನು ಹೇಳಬೇಕು ಎಂದು ನನಗೆ ತೋಚಲಿಲ್ಲ. ಅವನೂ ಸಹ ಏನೂ ಆಡಲಿಲ್ಲ.

Read More

ದೀಪಾ ಫಡ್ಕೆ ಬರೆದ ಈ ಭಾನುವಾರದ ಕಥೆ

ಬೀಡಾಡಿ ದನವೊಂದು ನೆಟ್ಟಿದ್ದ ತರಕಾರಿ ಸಾಲಿಗೇ ಬಾಯಿ ಹಾಕಿ ಕುತ್ತಿಗೆ ಆಡಿಸುತ್ತಾ ಮೇಯುತ್ತಿದ್ದುದನ್ನು ನೋಡಿ ಅಲ್ಲೇ ಬಿದ್ದಿದ್ದ ಕೋಲೊಂದನ್ನು ತೆಗೆದುಕೊಂಡು `ಹೋಯ್ ಹೋಯ್’ ಎಂದು ಬೊಬ್ಬೆ ಹೊಡೆದುಕೊಂಡು ದಣಪೆಯಿಂದ ಹೊರಗಟ್ಟಲು ಪ್ರಯತ್ನಿಸಿದಳು. ನಾಲಗೆಯಿಂದ `ಹಡಬೆ ದನ’ ಎನ್ನುವ ಬೈಗಳೂ ಸುಲಭವಾಗಿ ಬಂದು ಹೋಯ್ತು. ಇಡೀ ಅಂಗಳ ಓಡಾಡಿಸಿಕೊಂಡು ನೆಟ್ಟಿದ್ದ ಪ್ರೀತಿಯ ಅಬ್ಬಲಿಗೆ ಸಾಲನ್ನೂ ಮೆಟ್ಟಿಕೊಂಡು ಗಿಡಗಳನ್ನು ಧರಾಶಾಯಿಯಾಗಿಸುತ್ತಾ ಕೊನೆಗೂ ದಣಪೆಯಿಂದ ಹೊರಗೆ ಹೋದಾಗ ಅದರ ಬೆನ್ನಿಗೆ…

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ