ಓಬಿರಾಯನ ಕಾಲದ ಕತೆಗಳ ಸರಣಿಯಲ್ಲಿ ಕಡೆಂಗೋಡ್ಲು ಶಂಕರಭಟ್ಟರು ಬರೆದ ಕತೆ “ದುಡಿಯುವ ಮಕ್ಕಳು”
“ಸಂಜೆ ಆಯಿತು; ನೆರಳು ಉದ್ದುದ್ದವಾಗಿ ಎಲ್ಲಾ ಕಡೆಗಳಲ್ಲಿಯೂ ಕತ್ತಲಿಸುತ್ತಿದೆ. ಮನುಷ್ಯ ಸಂಚಾರ ಕಡಿಮೆಯಾಗುತ್ತಿದೆ. ದೂರದೂರದಲ್ಲಿ ಯಾರೋ ಯಾರನ್ನೋ ಕರೆಯುವ ಒಂದೊಂದು ಧ್ವನಿ ಅಲೆಯಾಗಿ ಮಾತ್ರ ಕಿವಿಯನ್ನು ಹೊಡೆಯುತ್ತಿದೆ. ಇತರರಲ್ಲಿ ಕರೆಯುವವರೂ ಇದ್ದಾರೆ. ಕರೆಯಿಸಿಕೊಳ್ಳುವವರೂ ಇದ್ದಾರೆ ! ಈ ಬಡ ಕುಟುಂಬದಲ್ಲಿ ಮಾತ್ರ ಅಂಥವರು ಯಾರೂ ಇಲ್ಲವೆ? ಅನ್ಯಾಯವಿದು. ಲಿಂಗಪ್ಪ ಇನ್ನೂ ಬರಲಿಲ್ಲ.”
Read More