ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಕೆಲವು ಪುಟಗಳು
ಆ ಪದ ಕಿವಿಗೆ ಬೀಳುತ್ತಿದ್ದಂತೆ ಸೈಫೈ ಸಿನಿಮಾಗಳಲ್ಲಿ ರೋಬೋಗಳು ಬ್ಯಾಟರಿ ಡೌನಾಗಿ ತಾನಾಗೆ ಕುಸಿದಂತೆ ಶರತ್ ಕುಸಿದ. ಅವಳು ಹಂಗೇ, ಹಿಂದೆ ಮುಂದೆ ನೋಡದೇ ಅಂದುಬಿಡ್ತಿದ್ದಳು. ಜ್ಯಾಮಿಟ್ರಿ ಬಾಕ್ಸ್ ಮುಚ್ಚಳವನ್ನು ಹಲ್ಲುಗಳನ್ನೆಟ್ಟಿ ತೆಗೆಯುತ್ತಿದ್ದಳು. ಅಸೆಂಬ್ಲಿನಲ್ಲಿ ಆಕಳಿಸುವಾಗ ತುಟಿ ಹರಿಯುವಷ್ಟು ಅಗಲ ಬಾಯಿ ತೆರೆಯುತ್ತಿದ್ದಳು. ಕಿರುನಾಲಗೆಯಿಂದ ಎಂಜಲನ್ನು ಮೋಟಾರಿನಂತೆ ಹಾರಿಸುತ್ತಿದ್ದಳು. ಇಡೀ ಕ್ಲಾಸಿಗೆ ರಾಣಿ, ರೌಡಿ ಎರಡೂ ಆಗಿದ್ದಳು. ಶರತ್ಗೆ ಆಳದಲ್ಲಿ ಅವಳೆಂದರೆ ಭಯ. ತಾನು ಸುಮ್ಮನಿದ್ದರೂ ಆಗಿತ್ತು; ಇಂಥಾ ಬಜಾರ್ಗಿತ್ತಿಯನ್ನು ಕೆಣಕಿ ʼಕಳ್ಳʼ ಅನ್ನಿಸ್ಕೊಳಂಗಾಯ್ತಲ್ಲ ಎಂದು ಕೈಹಿಸುಕಿಕೊಂಡ.
ಮಧು ವೈ.ಎನ್. ಹೊಸ ಕಾದಂಬರಿ “ಇಂತಿ, ಪೂರ್ವಿ”ಯ ಒಂದು ಅಧ್ಯಾಯ ನಿಮ್ಮ ಓದಿಗೆ
