Advertisement

Category: ಸಂಪಿಗೆ ಸ್ಪೆಷಲ್

ಅವ್ವ ಸಾಮಾನ್ಯಳು, ಅಸಮಾನ್ಯಳು!: ಮನು ಗುರುಸ್ವಾಮಿ ಬರಹ

ಕರುಳಬಳ್ಳಿಯನ್ನು ಕಡಿಯುವ ತಾಯಿ ಜಗದಲ್ಲುಂಟೆ? ಡಿ ವಿ ಜಿ ಅವರು ಒಂದುಕಡೆ ಹೇಳುತ್ತಾರೆ “ಕೊಲೆಗಡುಕ ಹುಲಿ ಸಲುಹದೇನ್ ಮರಿಗಳನು”. ಕ್ರೂರಪ್ರಾಣಿ, ಇತರ ಪ್ರಾಣಿಗಳನ್ನು ಕೊಂದು ತಿನ್ನುವ ಹುಲಿ ತನ್ನ ಮರಿಗಳ ವಿಚಾರ ಬಂದಾಗ ಎಷ್ಟು ಮುತುವರ್ಜಿ ವಹಿಸಿ ಸಲುಹಿ ಬೆಳೆಸುತ್ತದೆಯಲ್ಲವೆ? ಪ್ರಾಣಿಗಳೇ ಹೀಗೆಂದ ಮೇಲೆ ಇನ್ನೂ ವಿವೇಚನಾ ಶಕ್ತಿಯುಳ್ಳ ಮನುಷ್ಯ ಹೇಗೆ? ಇಲ್ಲಿ ಮಗು ನೀನು ಕರುಳಬಳ್ಳಿಯನ್ನು ಕಡಿಯಲು ಇಷ್ಟಪಡುವುದಿಲ್ಲ; ಬದಲಿಗೆ ಒಲವೂಡುತ್ತಿರುವೆ ಎನ್ನುತ್ತಿದೆ.
ತಾಯಿಯ ಕುರಿತಾದ ಕವಿತೆಗಳ ಕುರಿತು ಮನು ಗುರುಸ್ವಾಮಿ ಬರಹ

Read More

ನಗೆಗಡಲಲಿ ಚಿಂತನೆಯ ಅಲೆ: ರವಿಕುಮಾರ ಬರಹ

ನಾರಾಯಣ ಭಟ್ಟನ ಎಮ್ಮೆ ಸಂಸ್ಕಾರವೇ ಆಗಿರಲಿ ಅಥವಾ ಲೋಯರ್ ಸೆಕೆಂಡರಿಯನ್ನು ಮೊದಲ ಬಾರಿ ಕಟ್ಟಿ ಏಳು ಬಾರಿ ಫೇಲಾಗಿರುವ ರಂಗೇಗೌಡನ ಓದಿನ ವಿಚಾರವೇ ಆಗಿರಲಿ ಆದಿಕರ್ನಾಟಕದವನಾದ ಲಿಂಗನತ್ತ ವ್ಯಕ್ತವಾಗುವ ಶೀನಪ್ಪನ ಜೀವಪರ ಕಾಳಜಿಗಳೇ ಆಗಲಿ ನವಿರಾದ ಹಾಸ್ಯ ಅಂತರ್ಗತವಾಗಿ ಹರಿಯುತ್ತಲೇ ಇರುತ್ತದೆ. ಸಾಹಿತ್ಯವೂ ರಂಗಕೃತಿಯಾಗುವಾಗ ಸಹಜವಾಗಿಯೇ ಹಾಸ್ಯ ಇಮ್ಮಡಿಯಾಗಿ ಕೆಲವೆಡೆ ಹೆಚ್ಚೇ ಅನಿಸುವಂತಿದೆ.
ನಿರಂತರ ರಂಗ ತಂಡದ ‘ಗೊರೂರು’ ನಾಟಕದ ಕುರಿತು ರವಿಕುಮಾರ ಬರಹ

Read More

ಡೆಮೆನ್ಷಿಯಾದ ಮೂರು ಕತೆಗಳು: ಮುರಳಿ ಹತ್ವಾರ್‌ ಬರಹ

ತನ್ಮಾತ್ರ ಬಹುಶ ತನ್ನ ಕಾಲಕ್ಕೆ ಮೀರಿದ ಸಿನೆಮಾ. ಮಧ್ಯಮ ವರ್ಗದ ಕುಟುಂಬವೊಂದರ ಮುಖ್ಯಸ್ಥನಿಗೆ ಪ್ರಿ -ಸೆನೈಲ್ ಡಿಮೆನ್ಶಿಯಾ ಬಂದರೆ ಅದರಿಂದಾಗುವ ಆರ್ಥಿಕ, ಮಾನಸಿಕ, ಮತ್ತು ಸಾಮಾಜಿಕ ಹಿಂಸೆಗಳ ಪರಿಣಾಮಕಾರಿ ಚಿತ್ರಣ ಈ ಸಿನೆಮಾದಲ್ಲಿ ಮೂಡಿದೆ. ಪ್ರಿ-ಸೆನೈಲ್ ಡಿಮೆನ್ಷಿಯಾ ೬೫ ವರ್ಷಕ್ಕೆ ಮುನ್ನವೇ ಕಾಣಿಸಿಕೊಳ್ಳುವ ಡಿಮೆನ್ಷಿಯಾಗೆ ಕೊಟ್ಟ ಹೆಸರು.
“ಡೆಮೆನ್ಷಿಯಾ” ಎಂಬ ಕಾಯಿಲೆ ಸಾಮಾನ್ಯವಾಗುತ್ತಿರುವ ಈ ಸಮಯದಲ್ಲಿ ಅದರ ಕುರಿತಾದ ಚಲನಚಿತ್ರಗಳ ಕುರಿತು ಮುರಳಿ ಹತ್ವಾರ್‌ ಬರಹ ನಿಮ್ಮ ಓದಿಗೆ

Read More

ಯಾವುದೀ “ಮುಳ್ಳು, ನಾಲಿಗೆ…?”: ವಸಂತಕುಮಾರ್‌ ಕಲ್ಯಾಣಿ ಬರಹ

ಹಾಗಾಗಿ ಕೆಲವು ಗಂಡು ಮಕ್ಕಳು ಹೆಣ್ಣು ಮಕ್ಕಳು ಕೂತ ಭಾಗದಲ್ಲಿನ ಕೊನೆಯ ಬೆಂಚ್‌ಗಳಲ್ಲಿ ಕೂರಬೇಕಿತ್ತು. ಅವರ ಪೆನ್ನಿನಲ್ಲಿ ಇಂಕ್ ಖಾಲಿಯಾದಾಗ, ಒಬ್ಬಳು ಇನ್ನೊಬ್ಬಳಿಂದ ಸಾಲ ಪಡೆಯುತ್ತಿದ್ದಳು. ಅದು ಹೇಗೆಂದರೆ, ಪೆನ್ನಿನ ಮೇಲ್ ಭಾಗದ ತಿರುಪು ತಿರುಗಿಸಿಕೊಂಡು, ಕೆಳಮುಖವಾಗಿ ಇಟ್ಟುಕೊಂಡು ಪುನಃ ತಿರುಪು ಟೈಟ್ ಮಾಡುವಾಗ ಒಂದೊಂದೇ ತೊಟ್ಟು ಇಂಕ್ ಕೆಳಗೆ ಬೀಳುತ್ತಿತ್ತು, ಅದನ್ನು ಇಂಕ್ ಬೇಕಾದವರು ತಮ್ಮ ಪೆನ್ನನ್ನು ಸಿದ್ಧವಾಗಿಟ್ಟುಕೊಂಡು ನಾಜೂಕಾಗಿ ಒಳಗೆ ಬೀಳುವಹಾಗೆ ಮಾಡಿಕೊಂಡು, ಎಷ್ಟು ತೊಟ್ಟು ಬಿತ್ತು ಗಮನಿಸಿ, ಪುನಃ ಸಾಲ ವಾಪಸ್ ಮಾಡಬೇಕು.
ವಸಂತಕುಮಾರ್‌ ಕಲ್ಯಾಣಿ ಬರಹ

Read More

ಕಪ್ಪುಹಲಗೆಯ ಮೇಲಿನ ಬಣ್ಣದ ಅಕ್ಷರಗಳು…: ಆಶಾ ಜಗದೀಶ್‌ ಪ್ರಬಂಧ

ಒಮ್ಮೆ ಸೀರಿಯಸ್ಸಾಗಿ ನೋಟ್ಸ್ ಕರೆಕ್ಷನ್ ಮಾಡುತ್ತಾ ಕುಳಿತಿದ್ದೆ. ಆಗ ಇದ್ದಕ್ಕಿದ್ದಂತೆ ಜಗದೀಶ, ಜೋರು ಧ್ವನಿಯಲ್ಲಿ ಟೇಬಲ್ ಬಡಿಯುತ್ತಾ “ಚೆಲ್ಲಿದರೂ ಮಲ್ಲಿಗೆಯಾ… ಬಾಣಾಸೂರೇರೀ ಮ್ಯಾಲೆ…” ಅಂತ ಹಾಡತೊಡಗಿದ. ತಲೆ ಎತ್ತಿ ನೋಡಿದರೆ, ಅವ ಈ ಲೋಕದಲ್ಲಂತು ಇರಲಿಲ್ಲ. ಇದ್ದಕ್ಕಿದ್ದಂತೆ ಅವ ಪೆಚ್ಚಾದ. ಮಕ್ಕಳೆಲ್ಲ ಗೊಳ್ ಎಂದು ನಗತೊಡಗಿದರು. ಬಹುಶಃ ಬೇರೆಯ ಹೊತ್ತಾಗಿದ್ದರೆ ನಾನೂ ಅವನೊಂದಿಗೆ ಸೇರಿ ಯುಗಳ ಗೀತೆ ಹಾಡುತ್ತಿದ್ದೆನೇನೋ.
ಶಾಲಾ ಮಕ್ಕಳ ಜೊತೆಗಿನ ಅನುಭವದ ಕುರಿತು ಆಶಾ ಜಗದೀಶ್‌ ಪ್ರಬಂಧ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ