Advertisement

Category: ಸಂಪಿಗೆ ಸ್ಪೆಷಲ್

ವಿಜಯಶ್ರೀ ಹಾಲಾಡಿ ಬರೆದ ಈ ಭಾನುವಾರದ ಕತೆ

ಹನ್ನೆರಡು ದಿನಗಳ ನಂತರ ಆಸ್ಪತ್ರೆಯಿಂದ ಮರಳಿ ಬಂದಾಗ ಲತಕ್ಕ ಹೇಳಿದಂತೆ ಹೊಸ ಬದುಕು ಶುರುವಾಯಿತು. ಸೌಮ್ಯಳಿಗೆ ನಿಶ್ಯಕ್ತಿ, ಜ್ವರವಿತ್ತು. ಅದಲ್ಲದೆ ಅವಳು ಯಾರಲ್ಲೂ ಒಂದಕ್ಷರವೂ ಮಾತಾಡುತ್ತಿರಲಿಲ್ಲ. ಏನು ಹೇಳಿದರೂ, ಕೇಳಿದರೂ ಒಂದೋ ಮುಖ ತಿರುಗಿಸಿಕೊಂಡು ಮಲಗಿ ಬಿಡುತ್ತಿದ್ದಳು...

Read More

ಸುಂದರ ಕಾಡಿನ ರೋ‌ಚಕ ಕಥೆಗಳು-೨: ರೂಪಾ ರವೀಂದ್ರ ಜೋಷಿ ಸರಣಿ

ಶಾಲೆಗೆ ಹೋಗುವಾಗ, ಹಲವೆಡೆ ನಾವು ಇಂಥ ನಯನ ಮನೋಹರ “ಹೂ ರಥ” ನೋಡುತ್ತ ಹೋಗುತ್ತಿದ್ದೆವು. ಈಗಲೂ ಆ ಸುಂದರ ದೃಶ್ಯ ನನ್ನ ಕಣ್ಣಿಗೆ ಕಟ್ಟಿದಂತಿದೆ. ಹಾಗೇ ಇನ್ನೊಂದು ಚಂದದ ಹೂ ಅಂದರೆ, ಚದುರಂಗಿ. ಇದು ತೀರಾ ಪುಟಾಣಿ ಹೂಗಳ ಗೊಂಚಲು. ನಕ್ಷತ್ರದ ಆಕಾರದ ಗಾಢ ಕೇಸರಿ, ಕೆಂಪು ಹೂಗಳ ಚದುರಂಗಿ ಪೊದೆಯಾಗಿ ಬೆಳೆಯುವ ಸಸ್ಯ. ಇದರ ಸಪೂರ ಕಾಂಡಕ್ಕೆ ಸೂಕ್ಷ್ಮ ಮುಳ್ಳುಗಳಿರುತ್ತವೆ. ಇದರ ಹೂ ನೋಡಲು ಬಹಳ ಚಂದ.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿಯ ಹನ್ನೊಂದನೆಯ ಕಂತು

Read More

ರೇಗಿಸ್ತಾನದಲ್ಲಿ ಉರಿಯುವ ಬಣ್ಣಗಳು: ಹೇಮಾ ನಾಯಕ ಪ್ರವಾಸ ಕಥನ

ಶಾಮ ಸುಮ್ಮನೆ ಮಾತನಾಡುವವನಲ್ಲ, ಹೇಳಿದ್ದನ್ನು ಕೇಳಿಸಿಕೊಂಡು ಆಳವಾಗಿ ವಿಚಾರ ಮಾಡಿ, ಎದುರಿಗೆ ಇರುವವರಿಗೆ ಆಸಕ್ತಿ ಇದ್ದರೆ ಮಾತ್ರ ವಿಷಯ ಹಂಚಿಕೊಳ್ಳುವವನು. ನಸುಕಿನ ನಾಲ್ಕಕ್ಕೇ ಎಬ್ಬಿಸಿ ನಮ್ಮನ್ನು ಗಾಡಿಯಲ್ಲಿ ಹತ್ತಿಸಿಕೊಂಡು ಹೊರಟ. ಧೋಲಿಯಾದಿಂದ ಹೊರಟು ಪೋಖ್ರನ್ ತಹಶೀಲಿನ ಹುಲ್ಲುಗಾವಲುಗಳ ಕಡೆ ಹೊರಟೆವು. ದಾರಿಯುದ್ದಕ್ಕೂ ಮೌನ, ಚಳಿಯಲ್ಲಿ ಬಾಯಿ ತೆರೆಯಲೂ ಆಗದೇ ಹಲ್ಲು ಕಡಿಯುತ್ತ ಕೂರಬೇಕಾಯಿತು. ಹೋಗಿ ತಲುಪಿದ್ದು ಎಲ್ಲಿ ಎಂದು ಗುರುತಿಸಲಾಗದಂತ ಒಣ ಕಡ್ಡಿಗಳ ನಡುವೆ.
ಹೇಮಾ ನಾಯಕ ಬರೆದ ಪ್ರವಾಸ ಕಥನ ನಿಮ್ಮ ಓದಿಗೆ

Read More

ಶತಾಯುಷಿ ಸಾಧಕಿಗೆ ಶತಕೋಟಿ ಪ್ರಣಾಮ!: ಕ್ಷಮಾ ವಿ. ಭಾನುಪ್ರಕಾಶ್ ಬರಹ

ಅನೇಕ ಸಂದರ್ಶನಗಳಲ್ಲಿ ಅವರೇ ಹೇಳಿದಂತೆ, ತಿಮ್ಮಕ್ಕ, ಗಿಡ-ಮರಗಳಲ್ಲಿ ಮಕ್ಕಳನ್ನು ಕಂಡು ಸಂತಸಪಟ್ಟವರು. ಪಾತಿ ಮಾಡಿ ಗಿಡ ನೆಡುವುದು, ಅವುಗಳೊಂದಿಗೆ ಮಾತಾಡುತ್ತಾ ನೀರುಣಿಸಿ, ತಲೆಸವರಿ ಅವುಗಳನ್ನು ಹೆಮ್ಮರವಾಗಿಸುವುದು – ತಿಮ್ಮಕ್ಕನವರ ಹವ್ಯಾಸವಲ್ಲ, ಅದು ಅವರ ಬದುಕಿನ ಸಾರ. ಹುಲಿಕಲ್ ಮತ್ತು ಕುಡೂರಿನ ನಡುವಿನ ಹೆದ್ದಾರಿಯ ಅಕ್ಕಪಕ್ಕ ೩೮೫ ಆಲದ ಮರಗಳನ್ನು ಹೀಗೆ ಬೆಳೆಸಿದ ಶ್ರೇಯವೇ, ತಿಮ್ಮಕ್ಕನನ್ನು ‘ಸಾಲುಮರದ ತಿಮ್ಮಕ್ಕ’ನನ್ನಾಗಿಸಿತು, ಗೌರವಾದರಗಳನ್ನು ಮನೆಬಾಗಿಲಿಗೆ ಬರಮಾಡಿಸಿತು!
ನೆನ್ನೆ ತೀರಿಕೊಂಡ ವೃಕ್ಷಮಾತೆ ಸಾಲುಮರದ ತಿಮ್ಮಕ್ಕನವರ ಕುರಿತು ಕ್ಷಮಾ ವಿ. ಭಾನುಪ್ರಕಾಶ್‌ ಬರಹ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ