ಸುಂದರ, ಸಮೃದ್ಧ ಕಾಡಿನ ರೋಚಕ ಕಥೆಗಳು: ರೂಪಾ ರವೀಂದ್ರ ಜೋಶಿ ಸರಣಿ
ತುಂಬ ದಟ್ಟವಾದ ಎತ್ತರವಾದ ಮರಗಳಿಂದ ಕಂಗೊಳಿಸುವ ಕಾಡಿನಿಂದ ಆವೃತವಾದ ಆ ಗುಡ್ಡ ನೋಡುವುದೆಂದರೆ ಎಲ್ಲಿಲ್ಲದ ಖುಶಿ ನನಗೆ. ಅದರಲ್ಲಿ ಒಂದು ವಿಚಿತ್ರ ಆಕರ್ಷಣೆ ಇತ್ತು. ಹಗಲು ಅಷ್ಟು ಪ್ರೀತಿಯಿಂದ ನೋಡುವ ಗುಡ್ಡ, ರಾತ್ರಿ ಮಾತ್ರ ಭಯ ಹುಟ್ಟಿಸುತ್ತಿತ್ತು. ರಾತ್ರಿ ಊಟ ಮಾಡಿ ಕೈತೊಳೆಯಲು, ‘ವಂದ’ ಮಾಡಲು ಹೊರಗೆ ಬಂದಾಗಲೆಲ್ಲ ನಾವು ಅತ್ತ ದೃಷ್ಟಿ ಹರಿಸುವ ಸಾಹಸವನ್ನೇ ಮಾಡುತ್ತಿರಲಿಲ್ಲ. ಆಕಸ್ಮಿಕವಾಗಿ ಕಣ್ಣು ಅತ್ತ ಹೋದರೆ ಸಾಕು, ಕಾರ್ಗತ್ತಲೆಯಲ್ಲಿ ಮಸಿ ಬಳಿದಷ್ಟು ಕರ್ರಗೆ ಬೃಹದಾಕಾರವಾಗಿ ಕುಳಿತ ಅದು, ಭಯಂಕರವಾದ ಕಲ್ಪನೆ ಮೂಡಿಸಿ, ಎದೆಯ ನಗಾರಿ ಬಡಿತ ಏರುತ್ತಿತ್ತು.
ರೂಪಾ ರವೀಂದ್ರ ಜೋಶಿ ಬರೆಯುವ “ಹಸಿರ ಮಲೆನಾಡಲ್ಲಿ ಹಸನಾದ ಬಾಲ್ಯ” ಸರಣಿ
