ಒಂದೊಂದು ತಲೆಗೂ ಒಂದೊಂದು ಬೆಲೆ
ಈವರೆಗೂ ಅವರು ಇಂಟರ್‍ವ್ಯೂ ಪ್ಯಾನಲ್‍ಗಳಲ್ಲಿ ಕುಳಿತು ಸಂದರ್ಶನ ತೆಗೆದು ಕೊಂಡವರೇ ಹೊರತು ಸಂದರ್ಶನ ಕೊಟ್ಟವರಲ್ಲ. ಅದೂ, ಹೆಚ್ಚಾಗಿ ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಕೊನೆಯ ಹಂತದ ಇಂಟರ್‍ವ್ಯೂಗಳಿಗೆ ಎಚ್ ಆರ್ ಪ್ರತಿನಿಧಿಸುವ ಪ್ಯಾನಲ್‍ನ ಸದಸ್ಯರಾಗಿ. ಇಂಜಿನಿಯರಿಂಗ್ ಡಿಪಾರ್ಟಮೆಂಟ್‍ನ ಸೀನಿಯರ್ ಮ್ಯಾನೇಜರ್‍ಗಳು ತಮ್ಮ ಸುದೀರ್ಘ ಪ್ರಶ್ನೋತ್ತರಗಳನ್ನು ಮುಗಿಸಿದ ಮೇಲೆ ತಮ್ಮ ಸರದಿಬಂದಾಗ ಒಂದೆರಡು ಎಚ್‍ಆರ್ ಪ್ರಶ್ನೆಗಳನ್ನು ಕೇಳಿ, “ದ ಕ್ಯಾಂಡಿಡೇಟ್ ಹ್ಯಾಸ್ ರೀಸನಬಲ್ ಕಮ್ಯುನಿಕೇಶನ್ ಸ್ಕಿಲ್ಸ್”
ಎಂ.ಆರ್. ದತ್ತಾತ್ರಿ ಅವರ “ಒಂದೊಂದು ತಲೆಗೂ ಒಂದೊಂದು ಬೆಲೆ” ಕಾದಂಬರಿಯ ಕೆಲವು ಪುಟಗಳು ನಿಮ್ಮ ಓದಿಗೆ