ವಾಸ್ತವವಾದಿ ನೆಲೆಯಲ್ಲಿ ಮೈತಳೆದ ಕತೆಗಳು
ಸಿನಿಕತನದಲ್ಲಾಗಲೀ, ಅಸಹಾಯಕತೆಯಲ್ಲಾಗಲೀ ಇವರು ಅಳುತ್ತಾ, ಹಣೆಬರೆಹವನ್ನು ಹಳಿಯುತ್ತಾ ಕೂಡುವುದಿಲ್ಲ. ಹೀಗಿದ್ದಾಗಲೂ ಬಿಗಿಹುಬ್ಬಿನ ಕಾರ್ಪಣ್ಯದ, ಶಠತ್ವದ ಬದುಕನ್ನೂ ಇವರು ನಡೆಸುವುದಿಲ್ಲ. ಬದಲಿಗೆ ಅದೇ ಜೀವನೋತ್ಸಾಹದ, ಲವಲವಿಕೆಯ ವ್ಯಕ್ತಿತ್ವವನ್ನು ಕೊನೆಯವರೆಗೂ ಉಳಿಸಿಕೊಳ್ಳುತ್ತಾರೆ. ತಿಳಿಗೇಡಿಯನ್ನು ಕಟ್ಟಿಕೊಂಡೇ ಬದುಕನ್ನು ಗೆಲ್ಲುತ್ತಾ ಹೋಗುವ ಈ ಹೆಣ್ಣು ಮಕ್ಕಳು ಇವರಿಬ್ಬರೂ ಮನೆಯಲ್ಲಿಲ್ಲದ ಹೊತ್ತಿನಲ್ಲಿ ಆತ ಮಿತಿಮೀರಿ ತಿಂದ ಜಾಮೂನಿನ ಕಾರಣಕ್ಕೆ ಕಳೆದುಕೊಳ್ಳುವುದು ವಿಕಟ ವ್ಯಂಗ್ಯದಂತೆ ನಮಗೆ ಕಾಣಿಸುತ್ತದೆ.
ಶೋಭಾ ಗುನ್ನಾಪೂರ ಕಥಾ ಸಂಕಲನ “ಭೂಮಿಯ ಋಣ”ಕ್ಕೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ