Advertisement

Tag: ಕತೆ

ಆಕರ್ಷ ಕಮಲ ಬರೆದ ಈ ಭಾನುವಾರದ ಕತೆ

ಪಜಲ್ ಪೀಸ್‌ಗಳನ್ನು ಕೆಳಕ್ಕಿರಿಸಿ ಕೀಲಿಕೈಗಳ ಗೊಂಚಲನ್ನು ಚರಂಡಿಗೆ ಎಸೆಯಲು ನಿರ್ಧರಿಸಿದ್ದನೇನೋ ಎನ್ನುವಷ್ಟೇ ವೇಗವಾಗಿ ಎಲಿವೇಟರ್‌ಗಳ ಕಡೆಗೆ ಓಡಿದ. ಹದಿಮೂರನೇ ಮಹಡಿಯಿಂದ ಗ್ರೌಂಡ್ ಫ್ಲೋರ್ ಲಾಬಿಗೆ ಬರುವಷ್ಟರಲ್ಲಿ ಕಚೇರಿಯಿಂದ ಹೊರನಡೆಯುವಾಗ ತನ್ನ ಹೆಸರು ನೆನಪಿಲ್ಲದ ಕಾವಲುಗಾರನಿಗೆ ಏನು ಹೇಳಬಹುದು, ಮನಸ್ಸನ್ನು ನೋಯಿಸದೆ ಪೊಲಿಟಿಕಲಿ ಕರೆಕ್ಟ್ ಆಗಿ ಹೇಗೆ ಮಾತನಾಡಬಹುದು ಎಂದೆಲ್ಲ ಯೋಚಿಸಿದ. ಆಕ್ಸೆಸ್ ಕಾರ್ಡ್ ಇಲ್ಲದೆಯೇ ಮತ್ತೆ ಕಚೇರಿಗೆ ಬರಲೇಬೇಕು.
ಆಕರ್ಷ ಕಮಲ ಬರೆದ ಕತೆ “ಆಯತಾಕಾರದ ನೆರಳು” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್ ಕಥೆ

ಈ ದೃಶ್ಯಕ್ಕೆ ಅನತಿ ದೂರದಲ್ಲಿ ಮತ್ತೊಂದು ಹೃದಯವಿದ್ರಾವಕ ಘಟನೆ ನಡೆಯುತ್ತಿದೆ. ಲಚ್ಚಣ್ಣನಿಗೆ ಎರಡು ದಶಕಗಳ ಕಾಲ ಈ ಊರಿನಲ್ಲಿ ಅನ್ನದ ವ್ಯಾಪ್ತಿ ತೋರಿಸಿದ್ದ ದೇವಿ ಪ್ರಸಾದ ಹೋಟೆಲಿನ ವಸ್ತ್ರಾಪಹರಣ ಮಾಡುತ್ತಿರುವಂತೆ ನಾಲ್ವರು ಕೆಲಸಗಾರರು ಅದರ ಮಾಡಿನ ಹಂಚುಗಳನ್ನು ಕಳಚಿ ಇಳಿಸುತ್ತಿದ್ದಾರೆ. ಆ ಹೋಟೆಲನ್ನು ಮೂರು ದಶಕಗಳ ಕಾಲ ನಡೆಸಿದ್ದ ಗೋಪಾಲಕೃಷ್ಣ ಮಂಜಿತ್ತಾಯರು ಕೊನೆಯುಸಿರೆಳೆದ ತಾಯಿಯ ಶವದೆದುರು ಶತಪಥ ಹಾಕುವ ಆಘಾತಗೊಂಡ ಮಗನಂತೆ ಅತ್ತಿಂದಿತ್ತ ಹೋಗುತ್ತಿದ್ದಾರೆ.
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಡಾ. ಬಿ. ಜನಾರ್ದನ ಭಟ್‌ ಬರೆದ ಕತೆ “ವಿದಾಯ” ನಿಮ್ಮ ಓದಿಗೆ

Read More

ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಈ ಭಾನುವಾರದ ಕತೆ

ದೊಡ್ಡ ಮನೆ, ಐದೆಕರೆ ಫಲವತ್ತಾದ ಕೃಷಿಭೂಮಿ, ಅಡಕೆ ತೋಟ ಮೇಲಾಗಿ ಅತ್ತೆ ನಾದಿನಿಯರ ಕಾಟವಿಲ್ಲದ ಎಲ್ಲರೂ ಬಯಸುವ ಕನಸಿನ ಸಂಸಾರ! ಏನು ಕೊರತೆ ಇತ್ತು ಸುಖಕ್ಕೆ? ಆದರೆ ಯಾಕೋ ಅಲ್ಲಿ ಸ್ವರ್ಗಕ್ಕೆ ಕಿಚ್ಚು ಹಚ್ಚುವ ಯಾವುದೇ ಸಂಭ್ರಮ ಕಾಣದೇ ನಿಧಾನವಾಗಿ ಸಂಸಾರದೊಳಗೇ ಅಸಮಾಧಾನದ ಕಿಚ್ಚು ಹೊತ್ತಿಕೊಂಡದ್ದು ಅಷ್ಟು ಬೇಗನೇ ಯಾರ ಅರಿವಿಗೂ ಬರಲಿಲ್ಲ. ಆದರೆ ಎಲ್ಲರ ಅರಿವಿಗೆ ಬರುವ ಹೊತ್ತಿಗೆ ಬಹಳ ತಡವಾಗಿ ಹೋಗಿತ್ತು.
ರವೀಂದ್ರ ನಾಯಕ್‌ ಸಣ್ಣಕ್ಕಿಬೆಟ್ಟು ಬರೆದ ಕತೆ “ಶಿಕ್ಷೆ” ನಿಮ್ಮ ಈ ಭಾನುವಾರದ ಓದಿಗೆ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಮಧುಸೂದನ ವೈ. ಎನ್. ಕತೆ

ಅವಳು ಚಡಪಡಿಸಿದಳು. ಮುಷ್ಠಿ ಬಿಗಿ ಹಿಡಿದಳು. ಉಗಿದು ಅವನನ್ನು ಓಡಿಸುವುದೋ, ಅಥವಾ ಕಿರುಚಿಕೊಳ್ಳುವುದೋ ಗೊತ್ತಾಗಲಿಲ್ಲ. ಸುಮ್ಮನೆ ನಿರ್ಲಕ್ಷಿಸಿ ನಿಂತರೆ ಹೇಗೆ, ಯೋಚಿಸಿದಳು. ಅವನು ಇದಾವುದರ ಪರಿವೆಯೆ ಇಲ್ಲದಂತೆ ಬಜ್ಜಿ ತಿನ್ನುತ್ತಲೆ ಇದ್ದ. ಅವಕಾಶ ಸಿಕ್ಕಂತೆಲ್ಲ ಅವನು ಹತ್ತಿರ ಸರಿಯುತ್ತಿರುವುದು ಅವಳಿಗೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.
“ನಾನು ಮೆಚ್ಚಿದ ನನ್ನ ಕತೆ”ಯ ಸರಣಿಯಲ್ಲಿ ಮಧುಸೂದನ ವೈ. ಎನ್. ಬರೆದ ಕತೆ “ಬೋಣಿ”

Read More

ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ

ಈಗ ಗೋಡೆಯ ಮೇಲಿನ ಚಿತ್ರಗಳು ಬದಲಾಗಿ ವಿಶಾಲವಾದ ಸಮುದ್ರ ಗೋಚರಿಸತೊಡಗಿದೆ. ಸಮುದ್ರದ ನಟ್ಟನಡುವೆ ಹಡಗಿನಲ್ಲಿ ರಮೇಶ, ಶೇಖರ ಹಾಗೂ ಹೆಂಗಸೊಬ್ಬಳು ನಿಂತಿದ್ದಾರೆ! ಹೆಂಗಸಿನ ಅಣತಿಯನ್ನು ಶಿರಸಾವಹಿಸಿ ಪಾಲಿಸುವಂತೆ ರಮೇಶ, ಶೇಖರನನ್ನು ಹಡಗಿನಿಂದ ಸಮುದ್ರಕ್ಕೆ ದೂಡಿದ! ಉರವಣಿಸಿ ಬಂದ ಅಲೆಗಳು ಶೇಖರನನ್ನು ತಮ್ಮೊಳಗೆ ಕರಗಿಸಿಕೊಂಡವು. ಶೇಖರ ಇನ್ನಿಲ್ಲವಾದ! ‘ಇಲ್ಲಾ, ಇಲ್ಲಾ! ನಾನು ಮದುವೇನೇ ಆಗಲ್ಲ!’ ಎಂದು ಚೀರಿ ಕನಸಿನ ಭ್ರಮಾಲೋಕದಿಂದ ವಾಸ್ತವ ಪ್ರಪಂಚಕ್ಕೆ ಮರಳಿದ ರಮೇಶ!
ವೆಂಕಟೇಶ ಬಿ.ಎಂ. ಬರೆದ ಈ ಭಾನುವಾರದ ಕತೆ “ಸಹೋದರರ ಕನಸು” ಹೊಸ ವರ್ಷದ ಮೊದಲ ಓದಿಗೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

`ಚಿಲಿಪಿಲಿ ಕನ್ನಡ ಕಲಿ’: ಮಂಡಲಗಿರಿ ಪ್ರಸನ್ನ ಬರಹ

ಹೊರನಾಡಿನಲ್ಲಿ ನೆಲೆಸಿರುವ ಕನ್ನಡ ಕಂದಮ್ಮಗಳ ಬೆಳವಣಿಗೆಯ ಪರಿಸರ ತೀರ ವಿಭಿನ್ನವಾದದ್ದು. ಅಂತಹ ಮಕ್ಕಳ ಕನ್ನಡ ಕಲಿಕೆಗೆ ಬೇಕಾದ ವಾತಾವರಣ ಸೀಮಿತವಾದದ್ದು. ಇಂತಹ ಮಕ್ಕಳಿಗೆ ಭಾಷೆ ಕಲಿಸಲು ಪದ್ಯಗಳು…

Read More

ಬರಹ ಭಂಡಾರ