Advertisement

Tag: ಕನ್ನಡ ಸಾಹಿತ್ಯ

ದಯೆಯೆಂಬ ಧರ್ಮದ ಮೂಲ….

ನೆಮ್ಮದಿಗೆ ಭಂಗ ತರುವ ಅನುಭವ ಆದದ್ದು, ತುಂಬ ಶ್ರಮವಹಿಸಿ ನೆಟ್ಟ ಮರಗೆಣಸಿನ ಗಿಡದ ಬುಡದಲ್ಲಿ ಬುಟ್ಟಿಯಷ್ಟು ಬಿದ್ದ ಮಣ್ಣಿನ ರಾಶಿಯನ್ನು ಕಂಡಾಗ. ಒಂದು ಸಣ್ಣ ಸುಳಿವಿಲ್ಲದೆ ಬಂದ ಶತೃಗಳು ಗೆಣಸನ್ನು ತಿಂದು ಅದರ ಸಿಪ್ಪೆಯನ್ನು ಬಿಟ್ಟು ಹೋಗಿದ್ದವು. ಮನೆಯ ಸುತ್ತ ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನೇಕ ಬಿಲಗಳು ಕಂಡವು. ಮನೆಯ ಪಾಗಾರ ಅಡಿಯಿಂದ ಪಕ್ಕದ ಮನೆಗೆ ಹೆದ್ದಾರಿ ಮಾರ್ಗ ರಚಿಸಿಕೊಂಡಿದ್ದರು ನಮ್ಮ ದಿಟ್ಟಿಗೆ ಬಿದ್ದಿರಲಿಲ್ಲ.
ಸುಧಾಕರ ದೇವಾಡಿಗ ಬಿ. ಬರೆದ ಲಲಿತ ಪ್ರಬಂಧ ನಿಮ್ಮ ಓದಿಗೆ

Read More

ಕಲ್ಪನೆ ವಾಸ್ತವಗಳ ಸಂಕ್ರಮಣದಲ್ಲಿ ಅರಿವಿನ ಅನಾವರಣ

ಇಲ್ಲಿ ಲೇಖಕ ಗಣೇಶಯ್ಯನವರು ತಮ್ಮ ವಿಶಿಷ್ಟ ಶೈಲಿಯ ಬರವಣಿಗೆಯಿಂದ ನಮ್ಮನ್ನು ಇಂತಹ ಪುಟ್ಟ ಕೀಟಗಳ ಸಂಸಾರ, ಸಮುದಾಯದೊಳು ಕರೆದೋಯ್ದು ನಾವೂ ಅವುಗಳಲ್ಲಿ ‘ಒಬ್ಬರು’ ಎಂಬ ಭಾವನೆಯನ್ನು ಬಿತ್ತಿ, ಅವುಗಳ ಜೀವನದ ಭಾಗವಾಗಿಸಿ, ಜಂಜಾಟದ ಜೋಕಾಲಿಯಲ್ಲಿ ನಮ್ಮನ್ನ ಜೀಕಿಸುತ್ತಾ ಅಲ್ಲಿನ ಅಚ್ಚರಿಗಳ ‘ಅರ್ಥ’ ಮಾಡಿಸುತ್ತಾರೆ, ವಾಸ್ತವದ ಅರಿವು ಮೂಡಿಸುತ್ತಾರೆ. ಒಂದು ರೀತಿಯಲ್ಲಿ ವಿಸ್ಮಯಕರ ವಿಷಯದ ವಿವರಗಳನ್ನು ಕಲ್ಪನೆಯ ಚಿತ್ರ ಮಂದಿರದಲ್ಲಿ ಕತೆಯ ಮೂಲಕ ಅನಾವರಣಗೊಳಿಸಿದಂತೆ.
ಡಾ. ಕೆ.ಎನ್. ಗಣೇಶಯ್ಯ ಬರೆದ “ಹಾತೆ-ಜತೆ-ಕತೆ” ಕೃತಿಯ ಕುರಿತು ವಿಶ್ವ ದೊಡ್ಡಬಳ್ಳಾಪುರ ಬರಹ

Read More

ಶಾಂತಿ ಕೆ. ಅಪ್ಪಣ್ಣ ಈ ಭಾನುವಾರದ ಕಥೆ

ಅದು ವಿಷಯ! ಅಲ್ಲಿಗೆ ವಯಸ್ಸಾಗಿರುವುದು ಯಾವುದಕ್ಕೆ? ದೇಹಕ್ಕೆ ಮಾತ್ರವೇ? ಮನಸು ಪಕ್ವವಾಗುವುದು ಅನ್ನುತ್ತಾರಲ್ಲ ಅದೇನದು? ಆಯ್ಕೆಗಳನ್ನೆಲ್ಲ ಬದಿಗೊತ್ತಿ, ಹೆಚ್ಚು ತಕರಾರು ಮಾಡದೆ, ಇರುವುದನ್ನು ಒಪ್ಪಿಕೊಂಡು, ಒಪ್ಪಲಾಗದಿದ್ದರೂ ಒಪ್ಪಿಸಿಕೊಂಡು, ಅಪ್ಪಿಕೊಂಡು, ದಬ್ಬಿಸಿಕೊಂಡು ಹೇಗಾದರೊಂದು ಬದುಕುವುದೆ? ಅಥವಾ ಪರಿಸ್ಥಿತಿಗೆ ತಲೆಬಾಗಿ ಸ್ಥಿತಪ್ರಜ್ಞೆಯನ್ನು ಆರೋಪಿಸಿಕೊಂಡು ಒಳಗೊಳಗೇ ಬೇಯುತ್ತ, ಬೇಯುವಿಕೆಯ ಕಮಟು ವಾಸನೆ ಹೊರಗೆ ತೋರದಂತೆ ಕಾಯುತ್ತ, ಹೀಗೆ ಬೇಯುವುದೇ ಜೀವನದ ಸಾರ್ಥಕತೆಯೆಂದುಕೊಂಡು ಸುಳ್ಳೇ ನಂಬಿಸಿಕೊಳ್ಳುವುದೆ?
ಶಾಂತಿ ಕೆ. ಅಪ್ಪಣ್ಣ ಬರೆದ ಈ ಭಾನುವಾರದ ಕಥೆ “ಚಿತ್ರಕಾರನ ಬೆರಳು”

Read More

ಕಾಡ ತೊರೆಯ ಜಾಡು “ಕಡಿದಾಳು ಶಾಮಣ್ಣ”

ಮನಸ್ಸು ಮಾಡಿದ್ದರೆ ಅಥವಾ ಹಣಸಂಪಾದನೆಯ ಮಾರ್ಗ ಹಿಡಿದದ್ದರೆ ದೊಡ್ಡ ಶ್ರೀಮಂತರಾಗಬಹುದಿತ್ತು. ಅವರು ಒಂದು ಕಾಲದಲ್ಲಿ ಸ್ಥಾಪಿಸಿದ್ದ ಪ್ರೆಸ್ಸಿನ ಮೂಲಕವೋ ಇಲ್ಲಾ ಕೃಷಿಯ ಮೂಲಕವೋ ಧಾರಾಳ ಹಣಗಳಿಕೆ ಮಾಡಬಹುದಾಗಿತ್ತು. ಅಥವಾ ಸಂಗೀತದಲ್ಲಿ ಮುಂದುವರೆದಿದ್ದರೆ ಸರೋದ್‌ನಲ್ಲಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಬಹುದಾಗಿತ್ತು. ಹೋರಾಟದ ಹಾದಿಯಲ್ಲಿ ನಡೆಯುತ್ತಿರುವಾಗ ತಾನಾಗಿಯೇ ಬಂದ ಅವಕಾಶವನ್ನು ನಿರಾಕರಣೆ ಮಾಡದಿದ್ದರೆ ಶಾಸಕರಾಗಬಹುದಾಗಿತ್ತು ಅಥವಾ ಕಾಲೇಜು ಉಪನ್ಯಾಸಕರಾಗಬಹುದಾಗಿತ್ತು. ಆದರೆ ಅದ್ಯಾವುದೂ ಆಗದೇ ಸಾಮಾನ್ಯ ರೈತನ ಜೀವನ ನಡೆಸಿದರು.
ಗಿರಿಧರ್‌ ಗುಂಜಗೋಡು ಅಂಕಣ

Read More

ತಿರುಮಲೇಶರ ಸೀಕ್ರೆಟ್ ಸಂಚಿ

ನೆನ್ನೆ ಬೆಳಿಗ್ಗೆ ಕವಿ-ಕಥೆಗಾರ, ಭಾಷಾಶಾಸ್ತ್ರಜ್ಞ ಕೆ.ವಿ.ತಿರುಮಲೇಶ್ ತೀರಿಹೋದರು. ಇಳಿವಯಸ್ಸಿನ ಅನಾರೋಗ್ಯದ ನೆವದಲ್ಲಿ ಈ ಸೂಕ್ಷ್ಮ ಸ್ವಭಾವದ ಆರ್ದ್ರಜೀವಿ ನಮ್ಮಿಂದ ಭೌತಿಕವಾಗಿ ದೂರಹೋದರು. ಧಾವಿಸಿದರು.. ಆದರೆ ನಿಧಾನವಾಗಿ. ಅವರು ಹೋದ ಮೇಲೆ ಅವರು ಧಾವಿಸಿದರು ಎಂದು ನಮಗನ್ನಿಸುವಂತೆ ನಮ್ಮನ್ನು ಬಿಟ್ಟು ಹೋದರು.
ಕೆ.ವಿ. ತಿರುಮಲೇಶ್‌ ಅವರ ವ್ಯಕ್ತಿತ್ವ ಹಾಗೂ ಬರಹದ ಕುರಿತು ಬರೆದಿದ್ದಾರೆ ಸಿಂಧೂರಾವ್‌ ಟಿ.

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ