Advertisement

Tag: ಕನ್ನಡ ಸಾಹಿತ್ಯ

ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು”

ಅವರು ಹೇಳಿದ ದ್ವೀಪವಾಸಿ ಮುತ್ತುಕೋಯಾನ ಕಥೆಯನ್ನು ಕೇಳಿದರೆ ಏಕಕಾಲದಲ್ಲಿ ನಗುವೂ ವಿಷಾದವೂ ಖೇದವೂ ನಗುವೂ, ವಿಷಾದವೂ, ಖೇದವೂ, ವೈರಾಗ್ಯವೂ ಉಂಟಾಗುವ ಹಾಗೆ ಇತ್ತು. ಮುಕ್ತಿಯಾರರು ಹೇಳಿದ ಹಾಗೆ ಮುತ್ತುಕೋಯಾರಿಗೆ ಸುಮಾರು ಎಂಬತ್ತರ ಆಸುಪಾಸು ವಯಸ್ಸು ಇರಬಹುದು.
ಅಬ್ದುಲ್‌ ರಶೀದ್‌ ಬರೆದ ಈ ಭಾನುವಾರದ ಕತೆ “ಅಮವಾಸ್ಯೆಯ ಇರುಳ ಅಸಂಖ್ಯ ನಕ್ಷತ್ರಗಳು” ನಿಮ್ಮ ಓದಿಗೆ

Read More

ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

ನಿನ್ನೆ ಜಗಳವಾದ ಮೇಲೂ ರಾಘವ ಹೇಳಿದಂತೆ ಕೇಳಬೇಕಿತ್ತು. ನೀನು ಸುಮ್ಮನಿದ್ದಿದ್ದರೆ ಮುಗಿಯುತ್ತಿತ್ತು. ಎಂಬವನ ಮಾತು ಸರಿಯಾಗಿತ್ತು. ಮಾತಿನ ಬರದಲ್ಲಾದ ತಪ್ಪಿಗೆ ಇವತ್ತು ಮ್ಯಾನೇಜ್‌ಮೆಂಟ್‌ನಲ್ಲಿ ತಾನು ಅಪರಾಧಿಯ ಸ್ಥಾನದಲ್ಲಿದ್ದೇನೆ. ಅವಳು ನನ್ನ ಭಾಷೆಯ ಬಗ್ಗೆ ಹಾಗೆ ಮಾತಾಡಿದ್ದು ತನಗೆ ಹಿಡಿಸಲಿಲ್ಲ, ಅಲ್ಲದೇ ಅದು ಸರ್ಕಾರದ ಪ್ರಾಜೆಕ್ಟ್ ಮತ್ತು ಈ ಪ್ರಾಜೆಕ್ಟಿನ ಎಲ್ಲ ಕಡತಗಳನ್ನು ಸರ್ಕಾರ ಕನ್ನಡದಲ್ಲೇ ಮಂಡಿಸುವುದು. ಇಂಥ ಸ್ಟೇಟ್ ಕನ್ನಡ ಪ್ರಾಜೆಕ್ಟ್‌ನಲ್ಲಿ ಇದ್ದುಕೊಂಡೇ ಹೀಗೇ ಮಾತಾಡುವವರು ಇನ್ನೂ ಎಂ.ಎನ್.ಸಿ. ಕಂಪನಿಯಲ್ಲಿದ್ದರೆ ಕನ್ನಡವನ್ನು ಸಾಯಿಸಿಯೇ ಬಿಡುತ್ತಾರೆ, ಭಾಷೆ ವಿಚಾರದಲ್ಲಿ ನಾನು ಮಾಡಿದ್ದೆ ಸರಿ ಎನಿಸಿತವಗೆ.
ಶಿವಕುಮಾರ ಚನ್ನಪ್ಪನವರ್‌ ಬರೆದ ಈ ಭಾನುವಾರದ ಕತೆ “ಗುಡ್‌ವಿಲ್”

Read More

ರಿಯಾಜು ಮಾಡದ ಭಾಷೆ ಮೊಂಡಾಗುತ್ತದೆ: ಡಾ. ಲಕ್ಷ್ಮಣ ವಿ ಎ ಬರಹ

ಅತಿಯಾದ ಓದು ಕೆಲವೊಮ್ಮೆ ಸೃಜನಶೀಲತೆಗೆ ಮಾರಕವಾಗಬಹುದು ಎಂಬ ಮಾತಿನಲ್ಲಿ ಸತ್ಯವಿದೆ. ಯಾಕೆಂದರೆ ನಿರಂತರವಾಗಿ ಇತರರ ಧ್ವನಿಗಳನ್ನು ಮಾತ್ರ ಕೇಳುತ್ತಾ ಹೋದರೆ, ನಮ್ಮ ಒಳಧ್ವನಿ ನಿಧಾನವಾಗಿ ಮೌನವಾಗಬಹುದು. ಅತಿಯಾಗಿ ಓದುವ ಕೆಲ ಲೇಖಕರು ಒಂದು ಹಂತದ ನಂತರ ತಮ್ಮದೇ ಭಾಷೆಯನ್ನು ಕಳೆದುಕೊಳ್ಳುತ್ತಾರೆ. ಅವರ ವಾಕ್ಯಗಳಲ್ಲಿ ತಮ್ಮ ಉಸಿರಿಗಿಂತ ಇತರರ ನೆರಳು ಹೆಚ್ಚು ಕಾಣುತ್ತದೆ. ಅವರು ಬರೆಯುವುದಿಲ್ಲ — ಓದಿದವರ ಪ್ರತಿಧ್ವನಿಯನ್ನು ಮರುಸೃಷ್ಟಿಸುತ್ತಾರೆ. ಆದರೆ ಓದದೇ ಇರುವ ಲೇಖಕನ ಸ್ಥಿತಿಯೂ ಅಪಾಯಕರವೇ. ಓದಿಲ್ಲದ ಬರಹ ಹಲವೊಮ್ಮೆ ಆಳವಿಲ್ಲದ ಭಾವೋದ್ರೇಕವಾಗಿ ಉಳಿಯುತ್ತದೆ.
ಓದು-ಬರಹದ ಕುರಿತು ಡಾ. ಲಕ್ಷ್ಮಣ ವಿ.ಎ. ಬರಹ ನಿಮ್ಮ ಓದಿಗೆ

Read More

ನಾಗರೇಖಾ ಗಾಂವಕರ ಬರೆದ ಈ ಭಾನುವಾರದ ಕತೆ “ಸೋಡಿನಾಟ”

ನೌಕರಿ ಸೇರಿದ ಹೊಸದರಲ್ಲಿ ಅಪ್ಪನ ಉಮೇದಿಗೆ ಕಡಿಮೆ ಇರಲಿಲ್ಲ. ಸಾಯುವವರೆಗೂ ಮನೆಯ ಜವಾಬ್ದಾರಿ ನಿಭಾಯಿಸುತ್ತಾ ಬದುಕಿದ ಜೀವ ತನ್ನಪ್ಪ. ಸಾಯುವ ಹಿಂದಿನ ದಿನವೂ “ಅಪ್ಪಾ!! ಸುಸ್ತಾಗಿದೆ ನಿಂಗೆ. ಮನಿಕಾ” ಎಂದು ಹಾಸಿಗೆ ಜಾಡಿಸಿ ತಲೆದಿಂಬು ಸರಿ ಮಾಡಿಕೊಟ್ಟರೆ “ಮಾಬ್ಲೂ ಮಲಗುಲಾ ಮನೇ!! ಆ ಹಾಳೆ ಕಟ್ಟು ತಕಂಡ ಬಾ!!” ಎಂದು ತಮ್ಮ ಲೆಕ್ಕದ ಪುಸ್ತಕ ತರಿಸಿಕೊಂಡು ಆ ವರ್ಷದ ಖರ್ಚು ವೆಚ್ಚ ಬರೆದುದನ್ನು ಮತ್ತೊಮ್ಮೆ ಚೆಕ್ ಮಾಡಿದ್ದರು. “ಮಾಬ್ಲು ಗಿಡವಕ್ಕೆ ಈ ಸಲ ಗೊಬ್ಬರ ಹಾಕಬೇಕಾಗತ. ಯಾರಿಗರೂ ಹೇಳ.
ನಾಗರೇಖಾ ಗಾಂವಕರ ಬರೆದ ಕತೆ “ಸೋಡಿನಾಟ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು”

ನೆತ್ತಿಯ ಮೇಲಿನ ಕಣ್ಣ ಸ್ವಾಮೀಜಿ ಈಗ ಸಮಾಧಾನದಲ್ಲಿದ್ದು ಬೆವರುವುದನ್ನು ನಿಲ್ಲಿಸಿದ್ದರು. ಉಂಗುರಗಳನ್ನು ಹಾಕಿದ್ದ ಹಿತ್ತಾಳೆ ಚೊಂಬಿನ ನೀರನ್ನು ಇಬ್ಬರಿಗೂ ತೀರ್ಥದಂತೆ ಕೊಟ್ಟು ತಾವೂ ಬಲಗೈ ಗೆ ಬಗ್ಗಿಸಿಕೊಂಡರು. ಸ್ವಾಮೀಜಿ ಏನು ಮಾಡುತ್ತಾರೋ ಅದನ್ನೇ ಮಾಡಲು ತಯಾರಾದ ದಂಪತಿಗಳು ಅವರನ್ನೇ ನೋಡುತ್ತಿದ್ದರು. ಸ್ವಾಮೀಜಿ ನೀರಿದ್ದ ಕೈಯನ್ನು ಎರಡೂ ಕಣ್ಣುಗಳಿಗೆ ಒತ್ತಿಕೊಂಡು ಗಟಕ್ಕೆಂದು ಆ ನೀರನ್ನು ಕುಡಿದರು. ನಂತರ ಅಂಗೈಯನ್ನು ಮುಂಡಾಸಿನ ಬಳಿ ತಗೊಂಡುಹೋದರು.
ಡಾ. ಪ್ರೇಮಲತ ಬಿ. ಈ ಭಾನುವಾರದ ಕತೆ “ನೆತ್ತಿಯ ಕಣ್ಣು” ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Load More

Polls

ಬದುಕಿನಲ್ಲಿ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ