Advertisement

Tag: ಕೆಂಡಸಂಪಿಗೆ

ಕೈ ಹಿಡಿದು ನೀ ನಡೆಸು ಮುಂದೆ…: ಕಾರ್ತಿಕ್ ಕೃಷ್ಣ ಸರಣಿ

ಡೆರೆಕ್ ರೆಡ್ಮಂಡ್ ಆ ದಿನ ಪದಕವನ್ನು ಗೆಲ್ಲಲಿಲ್ಲ. ಆದರೆ ಅವನು ಅದಕ್ಕಿಂತ ಹೆಚ್ಚು ಬೆಲೆಬಾಳುವ ಪ್ರಪಂಚದಾದ್ಯಂತದ ಲಕ್ಷಾಂತರ ಹೃದಯಗಳನ್ನು ಗೆದ್ದಿದ್ದ. ಬಾರ್ಸಿಲೋನಾ ಒಲಿಂಪಿಕ್ಸ್‌ನ ಆ ಘಟನೆ, ರೆಡ್ಮಂಡ್‌ನ ಪರಿಶ್ರಮ, ಮಾನವ ಸಂಬಂಧಗಳ ಶಕ್ತಿ, ತಂದೆ ಮತ್ತು ಮಗನ ನಡುವಿನ ಮುರಿಯಲಾಗದ ಬಂಧದ ಸಂಕೇತವಾಗಿ ಅಜರಾಮರವಾಗಿ ಉಳಿಯಿತು. ನಿಜವಾದ ಯಶಸ್ಸು ಅಡಗಿರುವುದು ಗೆಲ್ಲುವುದರಲ್ಲಿ ಮಾತ್ರವಲ್ಲ, ಎಂತಹದೇ ಅಡೆತಡೆಗಳು ಎದುರಾದರೂ ಮುಂದುವರಿಯುವ ಧೈರ್ಯವಿರುವುದರಲ್ಲಿ ಎಂದು ಎಲ್ಲರಿಗೂ ಸಾರಿ ಹೇಳಿತು.
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿಯಲ್ಲಿ ಅಪ್ಪ-ಮಗನ ಬಾಂಧವ್ಯಕ್ಕೆ ಹೆಸರಾದ ಘಟನೆಯೊಂದರ ಕುರಿತ ಬರಹ ನಿಮ್ಮ ಓದಿಗೆ

Read More

ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ” ಆರಂಭ

ಯಾಕೆ ಹೀಗೆ ಮಾಡುತ್ತೇವೆ ನಾವು ಮನುಷ್ಯರು? ನಮ್ಮ ಬದುಕಿನ ನೆಮ್ಮದಿ, ಸಂತೃಪ್ತಿಗಳನ್ನು ದುಬಾರಿ ವಸ್ತುಗಳಲ್ಲಿ, ಅಥವಾ ನಾವು ಅವುಗಳನ್ನು ಕೊಂಡೆವೆಂದು ನಮಗೆ ಮಾನ್ಯತೆ ಕೊಡುವ ಜನರ ಸ್ಪಂದನೆಗಳಲ್ಲಿ, ಮೌಲ್ಯೀಕರಣಗಳಲ್ಲಿ ಯಾಕೆ ಹುಡುಕುತ್ತೇವೆ? ಸೂಫಿ ಕಥೆಯೊಂದರಲ್ಲಿ ಬರುವ ಮುದುಕಿಯಂತೆ ಮನೆಯಲ್ಲಿ ಕಳೆದುಹೋಗಿರುವ ಬೀಗದ ಕೈಯನ್ನು ರಸ್ತೆಯಲ್ಲಿ ಬೆಳಕಿದೆ ಎಂದು ಅಲ್ಲಿ ಹುಡುಕುತ್ತಿದ್ದೇವಾ?
ಡಾ. ಎಲ್.ಜಿ. ಮೀರಾ ಹೊಸ ಅಂಕಣ “ಮೀರಕ್ಕರ”

Read More

ಸುಮಾವೀಣಾ ಹೊಸ ಸರಣಿ “ಮಾತು-ಕ್ಯಾತೆ” ಆರಂಭ

ಮಕ್ಕಳಲ್ಲಿ ಜ್ಞಾನದ ಮಟ್ಟ ಹೆಚ್ಚಿದ್ದರೂ ಅದನ್ನು ಅಭಿವ್ಯಕ್ತಗೊಳಿಸಲು ಸಾಧ್ಯವಾಗುವುದಿಲ್ಲ. ಕಾರಣ ಶಬ್ದಗಳ ಕೊರತೆ. ಮನಸ್ಸಿನಲ್ಲಿ ಭಾವನೆಗಳಿರುತ್ತವೆ….! ಇನ್ನೇನೋ ವಿಶೇಷವಾಗಿರುವುದನ್ನು ಹೇಳಬೇಕು…! ನಾನೂ ಮಾತನಾಡಬೇಕು….! ಎಂದಾಗ ಆ ಭಾವನೆಗಳಿಗೆ ಆತ ಶಬ್ದರೂಪವನ್ನು ಕೊಡಲು ಸಾಧ್ಯವಾಗುವುದಿಲ್ಲ.
ಪದ ಪ್ರಯೋಗಗಳ ಕುರಿತು ಸುಮಾವೀಣಾ ಬರೆಯುವ ಹೊಸ ಸರಣಿ “ಮಾತು-ಕ್ಯಾತೆ” ಇಂದಿನಿಂದ ಹದಿನೈದು ದಿನಗಳಿಗೊಮ್ಮೆ

Read More

ಸುಬ್ರಹ್ಮಣ್ಯ ಹೆಗಡೆ ಬರೆದ ಈ ಭಾನುವಾರದ ಕತೆ

ಅಪರಾಧವು ಸಾಮೂಹಿಕವಾದಾಗ ಅದು ಸಾಮಾಜಿಕ ಸ್ವರೂಪವನ್ನು ಪಡೆದುಕೊಳ್ಳುತ್ತದೆ. ತನ್ಮೂಲಕ ನಮ್ಮ ಊರಿನ ಗಂಡಸರೆಲ್ಲ ತಿಂಗಳಿಗೆ ಒಂದೆರಡು ಬಾರಿ ಟೆಂಟಿನಲ್ಲಿ ಬಿಸಿಯಾಗತೊಡಗಿದರು. ಆಸೆಗಳಿಗೆ ಬೇಧಭಾವವಿಲ್ಲ. ಎಲ್ಲರಿಗು ಆಸೆಗಳಿದ್ದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳಲಿಲ್ಲ. ಕೆಲವು ವರ್ಷಗಳ ನಂತರ ತಾಲೂಕು ಸೆಂಟರಿನಲ್ಲಿ ಮಿನಿ ಥೇಟರು, ವಿಡಿಯೋ ಪಾರ್ಲರುಗಳು ಶುರುವಾದ ಕಾರಣ ಜನರಿಗೆ ಒಳ್ಳೆಯ ಕ್ಲಾರಿಟಿಯ ಅನುಭವ ಸಿಕ್ಕು, ಟೆಂಟು ಸತ್ತು ಹೋಯಿತು.
ಸುಬ್ರಹ್ಮಣ್ಯ ಹೆಗಡೆ ಬರೆದ ಕತೆ “ಪರಾಜಿತ ವಿಠ್ಠಲ ವಿಜಯ” ನಿಮ್ಮ ಈ ಭಾನುವಾರದ ಬಿಡುವಿನ ಓದಿಗೆ

Read More

ಛಲದ ಮುಂದೆ ನ್ಯೂನತೆಗಳು ನಿಲ್ಲೋಲ್ಲ: ಕಾರ್ತಿಕ್ ಕೃಷ್ಣ ಸರಣಿ

ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್‌ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್‌ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಶಾಪ ವಿಮೋಚನೆಯ ಹಂಬಲದ ಮಹತ್ವಾಕಾಂಕ್ಷಿ ಕಥನಗಳು: ಗೋವಿಂದರಾಜು ಕಥಾಸಂಕಲನದ ಮುನ್ನುಡಿ

‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ…

Read More

ಬರಹ ಭಂಡಾರ