ಸಂದರ್ಶನಕ್ಕೆಂದು ಚೆನ್ನೈ ತಲುಪಿದ ಕುತೂಹಲಕಾರಿ ಅನುಭವ…: ಬಸವನಗೌಡ ಹೆಬ್ಬಳಗೆರೆ ಸರಣಿ
ಹಣ ಅಡ್ಜಸ್ಟ್ ಆದರೆ ಮಾತ್ರ ಹೋದರಾಯ್ತು ಎಂದುಕೊಂಡು ಮಾಡೋ ಪ್ರಯತ್ನವನ್ನೆಲ್ಲ ಮಾಡಿ ಸುಮ್ಮನಾದೆ. ಇನ್ನೇನು ಇವತ್ತು ರಾತ್ರಿ ಚೆನ್ನೈಗೆ ಹೋಗಬೇಕು ಎಂದು ಅವರು ಕೊಟ್ಟಿದ್ದ ಸಂದರ್ಶನದ ದಿನ ನಾಳೆಯೇ ಆಗಿತ್ತು ಎಂಬ ದಿನದವರೆಗೂ ಪ್ರಯತ್ನ ಮಾಡಿ ಸುಮ್ಮನಾಗಿದ್ದೆ. ಕಡೇ ದಿನ ಎಂದೂ ಕೇಳದ ನಮ್ಮ ಮನೆ ಓನರ್ ಅಂಕಲ್ ಬಳಿ ಕೇಳಿದೆ. ಅದಕ್ಕವರು ಒಂದೂ ಮಾತಾಡದೇ ತುಂಬಾ ಖುಷಿಯಿಂದಲೇ ಹಣ ಕೊಟ್ಟರಲ್ಲದೇ ಸಂದರ್ಶನಕ್ಕೆ ಹಾಜರಾಗುವ ಟಿಪ್ಸ್ಗಳನ್ನೂ ತಿಳಿಸಿದರು, ತುಂಬಾ ಖುಷಿಯಾಗಿ ನಾನು ಬೆಂಗಳೂರಿನ ರೈಲನ್ನು ಆ ದಿನ ಬೆಳಗ್ಗೆಯೇ ಹತ್ತಿ ಬೆಂಗಳೂರಿಗೆ ಸಂಜೆಯಷ್ಟರಲ್ಲಿ ಹೋಗಿ ತಲುಪಿದೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿಯ ಐವತ್ತೇಳನೆಯ ಕಂತು ನಿಮ್ಮ ಓದಿಗೆ
