Advertisement

Tag: ಕೆಂಡಸಂಪಿಗೆ

ʻಬಾಳೆ ಪಣ್ಣದೊಂದು ರುಚಿ…ʼ: ಡಾ. ಚಂದ್ರಮತಿ ಸೋಂದಾ ಸರಣಿ

ಮಲೆನಾಡಿನ ಊರುಗಳಲ್ಲಿ ಬಾಳೆಹಣ್ಣನ್ನು ಅಕ್ಕಿಯೊಂದಿಗೆ ರುಬ್ಬಿ ರೊಟ್ಟಿ, ದೋಸೆ, ಸುಟ್ಟೇವು ಎನ್ನುವ ತಿಂಡಿಗಳನ್ನು ಮಾಡುತ್ತಾರೆ. ಬಾಳೆಹಣ್ಣಿನ ರೊಟ್ಟಿ, ದೋಸೆಗಳೆಂದರೆ ಹಿರಿಯರಿಂದ ಕಿರಿಯರವರೆಗೆ ಪ್ರಿಯವಾದ ತಿಂಡಿ. ಅಮ್ಮನ ಭಾಷೆಯಲ್ಲಿ ಹೇಳುವುದಾದರೆ ಎರಡು ಹೊಟ್ಟೆ. ಬಾಳೆಹಣ್ಣಿನ ಕಡುಬು ಹಲಸಿನಹಣ್ಣಿನ ಕಡುಬಿನಷ್ಟೆ ರುಚಿಯಾದ ಸಿಹಿತಿಂಡಿ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ನಗುತ್ತಲೆ ಬದುಕಿದವಳು ನನ್ನಮ್ಮ: ಮಾರುತಿ ಗೋಪಿಕುಂಟೆ ಸರಣಿ

ನನಗಾಗ ಐದಾರು ವರ್ಷಗಳಿರಬೇಕು. ಪ್ರತಿದಿನ ಅಮ್ಮ ಕೂಲಿ ಹೋಗುತ್ತಿದ್ದಳು. ಅವಳಿಗೆ ಬರುವ ಅಲ್ಪ ಕೂಲಿಯಲ್ಲಿ ಇಡಿ ಬದುಕನ್ನು ನಡೆಸಬೇಕು. ಅದರಲ್ಲಿ ಬೆಳಗಿನ ಚಹಾದಿಂದ ಹಿಡಿದು ರಾತ್ರಿಯ ಊಟದವರೆಗೂ ಕೂಲಿಯ ಹಣದಿಂದಲೆ ಸರಿದೂಗಿಸಬೇಕು. ಅಕ್ಷರ ಜ್ಞಾನವಿಲ್ಲದ ಆಕೆ ಹೇಗೆ ನಿಭಾಯಿಸುತ್ತಿದ್ದಳೊ. ಇಂದಿಗೂ ಅದೊಂದು ಆಶ್ಚರ್ಯದ ಸಂಗತಿ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿ

Read More

ಭಾವಗಳ ‘ತೇರ’ ಯಾತ್ರೆ….: ರಾಮ್ ಪ್ರಕಾಶ್ ರೈ ಕೆ ಬರಹ

ಜೈಲಿನ ಕೈದಿಯೊಬ್ಬರು “ನಾವು ಮನುಷ್ಯರಾಗಿ ಹುಟ್ಟಿಲ್ಲ, ಮನುಷ್ಯರಾಗಲು ಹುಟ್ಟಿದ್ದೇವೆ” ಎಂದರೆ, ಇನ್ನೊಮ್ಮೆ “ಜೈಲು ಹೆರಿಗೆ ಮನೆಯಂತೆ, ಇಲ್ಲಿಗೆ ಬಂದವರು ಹೊಸ ಹುಟ್ಟು ಪಡೆದೇ ಹೊರಹೋಗುವುದು” ಎನ್ನುತ್ತಾರೆ. ಸುಖದ ಬದುಕು ಸಾಗುತ್ತಿರಬೇಕಾದರೆ ಹಿರಿಯ ಮಹಿಳೆಗೆ ಬಸ್ಸಿನ ಸೀಟು ಬಿಟ್ಟುಕೊಡುವ ಪ್ರಿಯ, ಕಷ್ಟ ಕಾಲಿಟ್ಟಾಗ ಆ ಮಹಿಳೆಯ ಕಡೆಗೆ ನಿರ್ಭಾವುಕ ನೋಟವನ್ನು ಬೀರುವ ಪರಿ, ಆ ಬದಲಾವಣೆಯಂತೂ ಮಾನವ ಬದುಕಿನ ವಾಸ್ತವ ನಡುವಳಿಕೆಗೆ ಹಿಡಿದ ದರ್ಪಣದಂತೆ ಕಾಣುತ್ತದೆ.
ಹೇಮಂತ್‌ ರಾವ್‌ ನಿರ್ದೇಶನದ “ಸಪ್ತ ಸಾಗರದಾಚೆ ಎಲ್ಲೋ” ಸಿನಿಮಾದ ಕುರಿತು ರಾಮ್ ಪ್ರಕಾಶ್ ರೈ ಕೆ ಬರಹ

Read More

ಬೆಂಗಳೂರ ಸ್ಮಶಾನಗಳಲ್ಲೊಂದು ಸುತ್ತು: ಎಚ್. ಗೋಪಾಲಕೃಷ್ಣ ಸರಣಿ

ದೇವರನ್ನು ಇಟ್ಟಿದ್ದ ಗರ್ಭಗುಡಿಗೆ ದೀಪ ಇಲ್ಲ. ಗರ್ಭ ಗುಡಿಗೆ ದೀಪ ಹಾಕದೇ ಕತ್ತಲಲ್ಲಿ ದೇವರನ್ನು ಹುಡುಕುವ ಪ್ರಯೋಗ ನಮಗೆ ಬಹುಶಃ ಕೇರಳದ ಕೊಡುಗೆ ಇರಬೇಕು. ಅಲ್ಲಿನ ಪದ್ಮನಾಭ ದೇವರ ದೇವಸ್ಥಾನದಲ್ಲಿ ಲೈಟು ಇಲ್ಲ ಮತ್ತು ಎಷ್ಟೇ ರಶ್ಷು ಇದ್ದರೂ ಜನ ಕತ್ತಲಲ್ಲೇ ದೇವರನ್ನು ಹುಡುಕಬೇಕು. ಹೊರಗಿನ ಪ್ರಾಂಗಣದಲ್ಲಿ ನಿಂತು ದೇವರು ಅಲ್ಲಿದ್ದಾನೆ ಅಂತ ನೋಡಿದ್ದು ಅಷ್ಟೇ.

Read More

2023 ವಿಶ್ವ ಕಪ್‌ನ ಪಕ್ಷಿನೋಟ: ಇ.ಆರ್. ರಾಮಚಂದ್ರನ್ ಅಂಕಣ

ಕ್ರಿಕೆಟ್‌ನಲ್ಲಿ ಅನೇಕ ಪವಾಡಗಳನ್ನು ಪ್ರೇಕ್ಷಕರು ವೀಕ್ಷಿಸಿದ್ದಾರೆ. ಆದರೆ ಇಂತಹ ಆಟವನ್ನು ವಾಂಖೇಡೆ ಮೈದಾನದಲ್ಲಿ ಯಾರೂ ನೋಡಿರಲಿಲ್ಲ. ಲಕ್ಷಾಂತರ ಜನ ಟಿವಿಯಲ್ಲಿ ಇಂತಹ ದೃಶ್ಯವನ್ನು ವೀಕ್ಷಿಸಿರಲಿಲ್ಲ. ಪವಾಡಗಳು ಸಾಮಾನ್ಯವಾಗಿ ಕೇಳಿರುವುದು ಸಹಜ. ಯಾವುದೋ ಕಾಲದಲ್ಲಿ ಹೀಗಾಯಿತು, ಹೀಗೆ ಮಾಡಿದರು ಎನ್ನುವುದನ್ನು ಓದಿರುತ್ತೇವೆ, ಕೇಳಿರುತ್ತೇವೆ.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಹೊಸ ಬರಹ ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ