Advertisement

Tag: ಕೆಂಡಸಂಪಿಗೆ

ನಿಯಂತ್ರಿತ ಕ್ರೋಧದ ಕವಿತೆಗಳು: ಎಸ್.‌ ಜಯಶ್ರೀನಿವಾಸ ರಾವ್ ಸರಣಿ

ಕೆಲವೊಮ್ಮೆ ಎನ್ಸೆನ್ಸ್‌ಬರ್ಗರ್ ಅವರ ಕವನಗಳಿಗೆ ಒಗ್ಗಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಳ್ಳುವುದು ಸಹಜ, ಏಕೆಂದರೆ ಅವರ ಕವನಗಳಲ್ಲಿ ಪ್ರಾಸವು ಅಪರೂಪವಾಗಿರುತ್ತೆ ಹಾಗೂ ರೂಪಕಗಳು ಮತ್ತು ಪದಗುಚ್ಛಗಳ ದಟ್ಟವಾದ ಕೊಲಾಜ್‌-ಗಳನ್ನು ರಚಿಸುವ ಏಕಾಗ್ರತೆಯಲ್ಲಿ ಲಯವು ದ್ವಿತೀಯ ಸ್ಥಾನಕ್ಕೆ ಹೋಗುತ್ತೆ. ಅವರು ವಿಷಯದ ವಿಸ್ತಾರವನ್ನು ಹೊಂದಿದ್ದಾರೆ, ವಿವಿಧ ಶೈಲಿಗಳನ್ನು ಬಳಸುತ್ತಾರೆ.
ಎಸ್. ಜಯಶ್ರೀನಿವಾಸ ರಾವ್ ಬರೆಯುವ “ಲೋಕ ಕಾವ್ಯ ವಿಹಾರ” ಸರಣಿ

Read More

ಸಾಮರಸ್ಯ, ಸಮನ್ವತೆಗಾಗಿ ಈ ಮತ!: ವಿನತೆ ಶರ್ಮ ಅಂಕಣ

ಸಂವಿಧಾನದ ರಚನೆಯಾಗಿ ೧೨೨ ವರ್ಷಗಳಾದರೂ ಈ ನೆಲದ ಮೂಲವಾಸಿಗಳು ದೇಶದ ಸಂವಿಧಾನದಲ್ಲಿ ಸೇರಿಲ್ಲ. ಅಂದರೆ ಸಂವಿಧಾನದ ಪ್ರಕಾರ ಅವರಿಗೆ ಅಸ್ಮಿತೆಯೂ ಇಲ್ಲ. ಅವರಿಗೆ ಸೇರಿದ ಎಲ್ಲಾ ವಿಷಯಗಳನ್ನೂ ನಿರ್ಧರಿಸುವುದು ಕೇಂದ್ರ ಸರಕಾರಕ್ಕೆ ಸೇರಿದ್ದು. ಮೂಲನಿವಾಸಿಗಳಾದ ಅಬೊರಿಜಿನಲ್ ಮತ್ತು ಟೊರ್ರೆ ಸ್ಟ್ರೇಟ್ ದ್ವೀಪವಾಸಿ ಜನರು ಈ ಬಿಟ್ಟುಬಿಡುವಿಕೆಯನ್ನು ಅಥವಾ ತಮ್ಮನ್ನು ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಬಹಳ ವರ್ಷಗಳಿಂದ ‘ಈ ಪರಿಸ್ಥಿತಿ ಬದಲಾಗಬೇಕು, ತಮ್ಮನ್ನು ಸಂವಿಧಾನದಲ್ಲಿ ಈ ದೇಶದ ಮೂಲಜನರೆಂದು ಗುರುತಿಸಬೇಕು.
ಡಾ. ವಿನತೆ ಶರ್ಮ ಬರೆಯುವ “ಆಸ್ಟ್ರೇಲಿಯಾ ಪತ್ರ” ನಿಮ್ಮ ಓದಿಗೆ

Read More

“ಶಿವಗಂಗೆ” ಹತ್ತಿದ ನೆನಪುಗಳು: ಎಚ್. ಗೋಪಾಲಕೃಷ್ಣ ಸರಣಿ

ಕಡಲೆಕಾಯಿ ತಿನ್ನುತ್ತಾ ಹಾದಿ ಸವೆಯಿತು. ಸೌತೆಕಾಯಿ, ಬಾಳೆಹಣ್ಣು ಕಡಲೆಕಾಯಿ ನಂತರ ಖಾಲಿ. ಬೆಟ್ಟದ ಬುಡ ಸೇರುವಷ್ಟರಲ್ಲಿ ಕೈ ಖಾಲಿ ಆಗಿ ನಿರಾಳ ಅನಿಸಿತ್ತು. ಅಲ್ಲೂ ಎರಡೋ ಮೂರೋ ಗೋಲಿ ಸೋಡಾ ಕುಡಿದೆವು. ಬೆಟ್ಟ ಏರಲು ಶುರು ಹಚ್ಚಿದೆವು. ತುಂಬಾ ಕಡಿದಾದ ದೊಡ್ಡ ದೊಡ್ಡ ಬಂಡೆಗಳನ್ನು ಮೆಟ್ಟಲು ತರಹ ಮಾಡಿ ಹತ್ತುವವರಿಗೆ ಅನುಕೂಲ ಆಗಲಿ ಅಂತ ಪೈಪು ಹಾಕಿದ್ದಾರೆ.
ಎಚ್. ಗೋಪಾಲಕೃಷ್ಣ ಬರೆಯುವ “ಹಳೆ ಬೆಂಗಳೂರ ಕಥೆಗಳು” ಸರಣಿಯ ಹದಿನೆಂಟನೆಯ ಕಂತು ನಿಮ್ಮ ಓದಿಗೆ

Read More

ವಿಶ್ವ ಕಪ್ 2023ರ ಮಾಹಿತಿಗಳು(2): ಇ.ಆರ್.‌ ರಾಮಚಂದ್ರನ್‌ ಅಂಕಣ

ಇದೇ ಮೊದಲ ಬಾರಿ ಇಂತಹ ಸಂತೋಷ ಪರಿಸ್ಥಿತಿಯಲ್ಲಿ ಭಾರತ ಬಂದು ನಿಂತಿದೆ. ಇದು ಹರ್ಷ ಉಲ್ಲಾಸ ತರುವ ಸಂಗತಿ. ಇದರ ಶ್ರೇಯಸ್ಸು ಆಟಗಾರರಿಗೆ ಸಲ್ಲಬೇಕು, ಇದರ ಜೊತೆಗೆ ಅವರ ಏಳಿಗೆಗೆ ಒಂದೇ ಸಮನೆ ಕಳೆದ 3 ವರ್ಷಗಳಿಂದ ಶ್ರಮಿಸಿದ ಭಾರತದ ಕೋಚ್ ಮತ್ತು ಮಾಜಿ ಕ್ರಿಕೆಟ್ ನಾಯಕ, ಶ್ರೇಷ್ಟ ಆಟಗಾರ ರಾಹುಲ್ ದ್ರಾವಿಡ್ ಮತ್ತು ಅವರ ಸಂಗಡ ಶ್ರಮಿಸುವ ಬೋಲಿಂಗ್ ಕೋಚ್, ಬ್ಯಾಟಿಂಗ್ ಕೋಚ್‌ಗೆ ಸಲ್ಲಬೇಕು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣದಲ್ಲಿ ಭಾರತದಲ್ಲಿ ನಡೆಯಲಿರುವ ವಿಶ್ವ ಕಪ್‌ನ ಕುರಿತ ಬರಹ ನಿಮ್ಮ ಓದಿಗೆ

Read More

ಮಳೆಯಲಿ…ಚಳಿಯಲಿ…ಕಾಫಿ ಜೊತೆಯಲಿ: ಸುಮಾವೀಣಾ ಸರಣಿ

ಮಲೆನಾಡಲ್ಲಿ ಇರುವವರೆಗೂ ನಮಗೆ ಇವುಗಳಲ್ಲಿ ಕಾಫಿ ಕುಡಿದು ಅಭ್ಯಾಸವಿರಲಿಲ್ಲ. ಮಗ್‌ಗಳಲ್ಲಿ ಕುಡಿದು ಅಭ್ಯಾಸ. ಸ್ಟ್ರಾಂಗ್ ಕಾಫಿಯನ್ನಲ್ಲ ಲೈಟ್ ಕಾಫಿಯನ್ನು. ಬೈಟು ಕಾಫಿ, ಬೈ ತ್ರಿ ಕಾಫಿ ಪದಗಳನ್ನು ಮಲೆನಾಡು ಬಿಟ್ಟಮೇಲೆ ನಾನು ಪರಿಚಯಿಸಿಕೊಂಡದ್ದು. ಮನುಷ್ಯನ ಆಲೋಚನಾ ರೀತಿಯನ್ನು, ಅನುಭವಿಸುವ ತಳಮಳವನ್ನು, ಮನಸ್ಥಿತಿಯನ್ನು ಅವರವರು ಕಾಫಿ ಕಪ್ ಹಿಡಿಯುವ ಬಗೆ, ಅದನ್ನು ಸೇವಿಸುವ ಬಗೆ ಇತ್ಯಾದಿಗಳಲ್ಲಿ ಅವರ ಅಧ್ಯಯನ ಮಾಡಬಹುದು.
ಸುಮಾವೀಣಾ ಬರೆಯುವ “ಕೊಡಗಿನ ವರ್ಷಕಾಲ” ಸರಣಿಯ ಹನ್ನೊಂದನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ