Advertisement

Tag: ಕೆಂಡಸಂಪಿಗೆ

“ಆ ಕಾಲದ ರಾಜಲಕ್ಷ್ಮಿ…” ಸರಣಿ ಆರಂಭ

ರಾಜಲಕ್ಷ್ಮಿ ಎನ್. ರಾವ್ ಅವರನ್ನು ಅವರ ಕತೆಗಳ ಮೂಲಕ ಪರಿಚಯ ಮಾಡಿಕೊಂಡು ಸುಮಾರು ಮೂವತ್ತು ವರುಷಗಳ ಮೇಲಾಯಿತು. ನನ್ನ ಅಧ್ಯಯನ ಮತ್ತು ವೆಂಕಟಲಕ್ಷ್ಮಿಯವರ ಸಂದರ್ಶನದ ಒಟ್ಟು‌ ಮೊತ್ತವಾಗಿ ನಾನು ಕಂಡುಕೊಂಡ ಕತೆಗಾರ್ತಿ ರಾಜಲಕ್ಷ್ಮಿಯವರು ಬೆರಗು ಹುಟ್ಟಿಸಿದರು. ಸುಮಾರು ಹತ್ತು ಹನ್ನೆರೆಡು ವರ್ಷಗಳ ಹಿಂದೆ ಸನ್ಯಾಸಿನಿಯಾದ ಅವರನ್ನು ನಾನು ಅವರ ಆಶ್ರಮದಲ್ಲಿ ಭೇಟಿಯಾದಾಗ ಆ ಬೆರಗು ಬೆಳಕಾಗಿ ನನ್ನ ಮುಂದೆ ನಿಂತಿತ್ತು. ಆ ಬೆಳಕು ಈಗ ವಿಸ್ಮಯವಾಗಿದೆ.
ಗಿರಿಜಾ ಶಾಸ್ತ್ರಿ ಬರೆಯುವ ಸರಣಿ “ಆ ಕಾಲದ ರಾಜಲಕ್ಷ್ಮಿ” ಪ್ರತಿ ಶುಕ್ರವಾರದಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ಮಹಿಳಾ ಕ್ರಿಕೆಟ್ ಲೋಕದ‌ ತಾರೆಯರು….

ಅವರ ಕ್ರಿಕೆಟ್ ಜೀವನದಲ್ಲಿ ಕೋಚ್ ಆಗಿದ್ದ ರಮೇಶ್ ಪವಾರ್ ಅವರ ಜೊತೆ ಹೊಂದಾಣಿಕೆ ಇಲ್ಲದೆ ಕೆಲವು ಘರ್ಷಣೆಗಳಾದವು. ಬಿಸಿಸಿಐ ತನಕ ದೂರುಗಳು ಹೋದವು. ಅವರ ಮತ್ತು ಈಗಿನ ಕಪ್ತಾನ್‌ರ ಹರ್ಮನ್‌ಪ್ರೀತ್ ಕೌರ್ ಮಧ್ಯೆಯೂ ಅಷ್ಟು ಹೊಂದಾಣಿಕೆ ಇರಲಿಲ್ಲ. ಆದರೂ ವೃತ್ತಿಪರ ಸಂಬಂಧವನ್ನು ಬದಿಗಿಟ್ಟು ತಂಡದ ಹಿತಕ್ಕಾಗಿ ಜೊತೆಗೆ ಚೆನ್ನಾಗಿ ಆಡುತ್ತಿದ್ದಾರೆ. ಇದು ಬಹಳ ಮುಖ್ಯ. ವೈಯುಕ್ತಿಕವಾಗಿ ಏನೇ ಒಡಕು ತೊಡಕುಗಳಿರಲಿ ಅದನ್ನು ಬದಿಗಿಟ್ಟು ತಂಡದ ಏಳಿಗೆಗಾಗಿ ಶ್ರಮಿಸುವವರ ಕೊಡುಗೆ ಬಹಳ ಮಹತ್ತರವಾದದ್ದು.
ಇ.ಆರ್. ರಾಮಚಂದ್ರನ್ ಬರೆಯುವ “ಕ್ರಿಕೆಟಾಯ ನಮಃ” ಅಂಕಣ ಬರಹ ನಿಮ್ಮ ಓದಿಗೆ

Read More

ಎಮ್ಮೆಎಮ್ಮೆಯೆಂದೇಕೆ ಬೀಳುಗಳೆವಿರಿ?

ಕೆಲವು ಎಮ್ಮೆಗಳು ಬಹಳ ಸೂಕ್ಷ್ಮ. ಎಮ್ಮೆ ಕರುಹಾಕಿ ನಂತರದಲ್ಲಿ ಒಬ್ಬರೇ ಹಾಲು ಕರೆಯುತ್ತಿದ್ದರೆ ಅದು ಕೆಲವು ದಿನಗಳ ನಂತರ ಇನ್ನೊಬ್ಬರಿಗೆ ಹಾಲನ್ನು ಕೊಡುವುದಿಲ್ಲ. ಸೊರವು ಬಿಡದೆ ಸುಮ್ಮನೆ ನಿಂತಿರುತ್ತದೆ. ಮೊಲೆಗಳನ್ನು ಎಷ್ಟೇ ಜಗ್ಗಿದರೂ ಮೊಲೆಗೆ ಹಾಲು ಇಳಿಸುವುದೇ ಇಲ್ಲ. ಇದನ್ನು ನಮ್ಮೂರಕಡೆ ಕೈಮರ್ಚಲು ಎನ್ನುತ್ತಾರೆ. ಇನ್ನೊಬ್ಬರು ಹಾಲು ಕರೆಯಬೇಕೆಂದರೆ ಸಾಕಷ್ಟು ಸರ್ಕಸ್ ಮಾಡಬೇಕಾಗುತ್ತದೆ.
ಎಮ್ಮೆಯ ಕುರಿತು ಹಲವು ಕುತೂಹಲಕರ ಪ್ರಸಂಗಗಳನ್ನು ಬರೆದಿದ್ದಾರೆ ಚಂದ್ರಮತಿ ಸೋಂದಾ

Read More

ಏಕೆ ಕುಣಿವೆ ತೂಕ ತಪ್ಪಿ ಸಾಕು ಕಾಲ ಭೈರವ

ಗೇರುಹಣ್ಣನ್ನು ತಿಂದು ಬೀಜವನ್ನು ಎಲ್ಲರೂ ಸೇರಿ ಒಂದೆಡೆ ಕೂಡಿಡುತ್ತಿದ್ದೆವು. ನೂರು ಬೀಜಗಳಾದ ಮೇಲೆ ಅದನ್ನು ಕಮ್ತೀರ ಅಂಗಡಿಗೆ ಕೊಟ್ಟರೆ ಅವರು ನಮಗೆಲ್ಲ ಒಂದೊಂದು ಆಯ್ಸ್-ಕ್ಯಾಂಡಿ ಕೊಡುತ್ತಿದ್ದರು. ತಂಪಾಗಿರುವ ಅದನ್ನು ತಿನ್ನುತ್ತಾ ಅದಕ್ಕೆ ಹಾಕಿರುವ ಕೆಂಪನೆಯ ಬಣ್ಣ ನಮ್ಮ ಬಾಯಿಯ ಸುತ್ತಮುತ್ತ ಚಂದದ ಪ್ರಭಾವಳಿಯನ್ನು ರಚಿಸುತ್ತಿತ್ತು. ನಮ್ಮ ಈ ಘನಂದಾರಿ ನಡೆ ಅದು ಹೇಗೋ ಪರಮಜ್ಜನಿಗೆ ಗೊತ್ತಾಗಿಬಿಡುತ್ತಿತ್ತು. ನಾರಾಯಣ ಯಾಜಿ ಬರಹ

Read More

ಮಾಡಿದ ತಪ್ಪುಗಳು ಮತ್ತು ಅಪ್ಪನ ಶಿಕ್ಷೆ…

ಇಬ್ಬರ ನಾಗಾಲೋಟದ ಓಟ ರೇಸಿಗೆ ಬಿದ್ದಂತೆ ಸಾಗುತ್ತಿದೆ. ನಾನು ಮುಂದೆ ಅಪ್ಪ ಹಿಂದೆ. ಓಡಿದೆ ಓಡಿದೆ….. ಅಪ್ಪನೂ ನಿಲ್ಲಿಸಲಿಲ್ಲ… ಊರ ಹೊರಭಾಗದ ರಸ್ತೆಯನ್ನು ಒಂದು ಸುತ್ತು ಸುತ್ತಿಸಿದೆ. ಅಪ್ಪ ಸುಸ್ತಾದ ಅಂತ ಕಾಣುತ್ತದೆ. ಊರಿಗೆ ಹತ್ತಿರವಾಗಿ ನಮ್ಮ ಮನೆಗೆ ಹೋಗುವ ದಾರಿಯಲ್ಲಿ ಜೋಳದ ಹೊಲ ಇತ್ತು ಅದು ಗುಂಪು ಗುಂಪಾಗಿತ್ತು. “ನಿಲ್ಲು ಓಡ್ಬೇಡ… ಓಡ್ಬೇಡ…” ಅಪ್ಪ ಕೂಗುತ್ತಲೆ ಇದ್ದ. ಅದಕ್ಕಾಗಿ ನಾನು ಓಡುವುದನ್ನು ನಿಲ್ಲಿಸಲಿಲ್ಲ.
ಮಾರುತಿ ಗೋಪಿಕುಂಟೆ ಬರೆಯುವ “ಬಾಲ್ಯದೊಂದಿಗೆ ಪಿಸುಮಾತು” ಸರಣಿಯ ಐದನೆಯ ಕಂತು ನಿಮ್ಮ ಓದಿಗೆ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ