Advertisement

Tag: ಕೆಂಡಸಂಪಿಗೆ

ಛಲದ ಮುಂದೆ ನ್ಯೂನತೆಗಳು ನಿಲ್ಲೋಲ್ಲ: ಕಾರ್ತಿಕ್ ಕೃಷ್ಣ ಸರಣಿ

ನನಗೆ ಎಲ್ಲಕ್ಕಿಂತ ಇಷ್ಟವಾದದ್ದು ಲೈಲ್ಸ್‌ನ ಖತರ್ನಾಕ್ ಎಂಟ್ರಿ. ಅವನು ಟ್ರ್ಯಾಕ್‌ಗೆ ಬರುವ ಕಾನ್ಫಿಡೆನ್ಸನ್ನು ನೀವೊಮ್ಮೆ ನೋಡಬೇಕು. ಆ ಕಾಂಫಿಡೆನ್ಸಿನಿಂದಲೇ ಅವನು ಅರ್ಧ ಪಂದ್ಯವನ್ನು ಗೆಲ್ಲುತ್ತಾನೆ ಎಂದು ನನಗನ್ನಿಸುತ್ತದೆ. ಹೆಸರು ಕೂಗಿದೊಡನೆ ವೇಗವಾಗಿ ಓಡಿ ಬಂದು, ಕುದುರೆಯಂತೆ ನೆಗೆದು ಇಡೀ ಪ್ರಪಂಚದ ಗಮನವನ್ನು ತನ್ನತ್ತ ಸೆಳೆಯುವ ಅವನ ಆತ್ಮವಿಶ್ವಾಸ ಎಂತವರನ್ನೂ ಹುಬ್ಬೇರಿಸುವಂತೆ ಮಾಡುತ್ತದೆ. ನೂತನ ಒಲಿಂಪಿಕ್ ಚಾಂಪಿಯನ್ ನೋಅ ಲೈಲ್ಸ್ ನಮ್ಮ ಆತ್ಮವಿಶ್ವಾಸವನ್ನೂ ಒಂದಷ್ಟು ಹೆಚ್ಚಿಸಲಿ ಅಲ್ಲವೇ?
ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ

Read More

ಮಧ್ಯಮ ವರ್ಗ ಮತ್ತು ಬೆಲೆಬಾಳುವ ಕಾಗದದ ಚೂರುಗಳು: ರಾಮ್ ಪ್ರಕಾಶ್ ರೈ ಕೆ. ಸರಣಿ

‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಬ್ಬ ಕಳ್ಳನಿದ್ದಾನೆ’ ಎಂಬ ವಾಕ್ಯ, ‘ಪ್ರತಿಯೊಬ್ಬ ಮನುಷ್ಯನಲ್ಲಿಯೂ ಒಂದು ಮಗುವಿದೆ’ ಎಂದು ಕೋಟಿಯ ಕೈಗಳಲ್ಲಿ ಬದಲಾಗುವುದೇ ಆತನ ವ್ಯಕ್ತಿತ್ವದ ಹೆಚ್ಚುಗಾರಿಕೆಯ ಸಂಕೇತ. ಚಿತ್ರದ ತುಂಬೆಲ್ಲಾ ರೂಪಕಗಳ ಬಳಕೆ ಹೇರಳವಾಗಿದೆ. ಕೋಟಿಯೆಂಬ ಹೆಸರು ಅದರಲ್ಲೊಂದು. ಇಲ್ಲಿ ಎಲ್ಲರೂ ಸಾಗುತ್ತಲೇ ಇರುತ್ತಾರೆ. ಥೇಟು ಪಟ್ಟಣದ ಯಾಂತ್ರಿಕ ಬದುಕಿನಂತೆ. ಆದರೆ ಆ ಪಯಣಕ್ಕೊಂದು ವೇಗ ನಿಯಂತ್ರಕ ಎದುರಾದಾಗ, ಹೇಗೆ ಉತ್ತರಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿರ್ಧರಿತವಾಗುತ್ತದೆ ಎಂಬುದನ್ನು ನಿರೂಪಿಸಲಾಗಿದೆ.
ರಾಮ್ ಪ್ರಕಾಶ್ ರೈ ಕೆ. ಬರೆಯುವ “ಸಿನಿ ಪನೋರಮಾ” ಸರಣಿ

Read More

ಶಾಪ ವಿಮೋಚನೆಯ ಹಂಬಲದ ಮಹತ್ವಾಕಾಂಕ್ಷಿ ಕಥನಗಳು: ಗೋವಿಂದರಾಜು ಕಥಾಸಂಕಲನದ ಮುನ್ನುಡಿ

‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ ಸಂಕಲನದ ಕಥೆಗಳು ತಮ್ಮ ಆಶಯ ಮತ್ತು ಭಿನ್ನ ದೇಹದ ಮೂಲಕ ಗಮನಸೆಳೆಯುತ್ತವೆ ಹಾಗೂ ಕಥೆಗಾರನ ಪ್ರಯೋಗಶೀಲತೆಯ ಬಗ್ಗೆ ಮೆಚ್ಚುಗೆ ಹುಟ್ಟಿಸುತ್ತವೆ. ಭಾವಾವೇಶಕ್ಕೆ ಒಳಗಾಗದೆ ಒಡಲ ಸಂಕಟವನ್ನು ಕಲೆಯಾಗಿಸುವುದು ಸಾಧ್ಯವಾಗಿರುವುದರಿಂದಲೇ, ಈ ಕಥೆಗಳು ಓದುಗರೊಳಗೆ ತಮ್ಮ ಕಂಪನಗಳನ್ನು ವಿಸ್ತರಿಸಿಕೊಳ್ಳುವ ಕಸುವು ಹೊಂದಿವೆ.
ಗೋವಿಂದರಾಜು ಎಂ ಕಲ್ಲೂರು ಕಥಾ ಸಂಕಲನ ‘ನಕ್ಷತ್ರಕ್ಕಂಟಿದ ಮುಟ್ಟಿನ ನೆತ್ತರು’ಕ್ಕೆ ರಘುನಾಥ ಚ.ಹ. ಬರೆದ ಮುನ್ನುಡಿ

Read More

ಇರುವಲ್ಲೇ ಖುಷಿ ಕಾಣುವ ಪಾಠ: ಗುರುಪ್ರಸಾದ ಕುರ್ತಕೋಟಿ ಸರಣಿ

ಅಲ್ಲಿ ಇರೋದೇ ಬೇಡ, ನನ್ನ ದೇಶವೇ ನನಗೆ ಚಂದ, ಅಲ್ಲಿಯೇ ಸುಖ ಇದೆ, ವಾಪಸ್ಸು ಹೋಗಿಯೇ ತೀರುತ್ತೇನೆ ಅಂತೆಲ್ಲ ಬಡಬಡಿಸುತ್ತಿದ್ದ ನನಗೆ, ನಲವತ್ತು ವರ್ಷಗಳಿಗಿಂತ ಹೆಚ್ಚು ಕಾಲ ಅಲ್ಲಿದ್ದು, ತಾವು ಅಲ್ಲಿ ಸುಖವಾಗಿ ಇದ್ದೇವೆ, ಯಾವುದೇ ವಿಷಾದ ಇಲ್ಲ ಅಂತ ಮಾತು ಹಾಗೂ ಕೃತಿಯಿಂದ ತೋರಿಸಿದ ನನ್ನ ಅಕ್ಕ ಬೆರಗು ಮೂಡಿಸಿದ್ದಳು! ಆ ಕ್ಷಣದಿಂದ ಬೇರೆಯವರಿಗೆ, ನೀವ್ಯಾಕೆ ಅಮೆರಿಕೆಯಲ್ಲಿಯೇ ಇರಲು ಬಯಸುತ್ತೀರಿ…?
ಗುರುಪ್ರಸಾದ ಕುರ್ತಕೋಟಿ ಬರೆಯುವ “ಅಮೆರಿಕದಲ್ಲಿ ಕುರ್ತಕೋಟಿ” ಸರಣಿಯ ಇಪ್ಪತ್ಮೂರನೆಯ ಬರಹ

Read More

ಕದಿರಪ್ಪನ ಪರಿಷೆ: ಸುಮಾ ಸತೀಶ್ ಸರಣಿ

ಸ್ಯಾನೆ ವಿಸೇಸವಾದ್ದು ಅಂದ್ರೆ ಆಟುದ್ ಸಾಮಾನಿನ ಬುಟ್ಟಿಗ್ಳು. ಕಾರು ಬೈಕು ಅಲ್ಲ ಬುಡಿ. ಆ ಬುಟ್ಟಿಗ್ಳಾಗೆ ಬುಡಿಗೆಗಳು ಇರ್ತಿದ್ವು. ಎಲ್ಡು-ಮೂರು ಬೆಟ್ಟಿನ ಗಾತ್ರದ ಮಣ್ಣಿನ‌‌ ಮಡಿಕೆ ಕುಡಿಕೆಗಳು, ಒಲೆ, ಬಟ್ಟಲು, ಮುಚ್ಚಳ, ಸೌಟು, ಹಂಚು ಇಂತಾ ಅಡ್ಗೆ ಮನೆ ಸಾಮಾನು. ಹುಡುಗೀರೆಲ್ಲಾ ಅಲ್ಲೇ ಸೇರ್ಕಂಡು ಒಬ್ಬಳು ಬಟ್ಟಲು ತಕಂಡ್ರೆ, ಇನ್ನೊಬ್ಬಳು ಒಲೆ ತಕಣಾದು. ಐದು ಪೈಸೆ, ಹತ್ತು ಪೈಸೆ, ಜಾಸ್ತಿ ಅಂದ್ರೆ ನಾಕಾಣೆ ಇರ್ತಿದ್ವು. ನಮ್ಗೋ ತಲಾಕೈವತ್ತು ಪೈಸೇ ಸಿಕ್ತಿದ್ರೆ ಹೆಚ್ಚು.‌
ಸುಮಾ ಸತೀಶ್ “ರಂಗಿನ ರಾಟೆ” ಸರಣಿ

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ