Advertisement

Tag: ಕೆಂಡಸಂಪಿಗೆ

ಕಾರ್ತಿಕ್‌ ಕೃಷ್ಣ ಬರೆಯುವ “ಒಲಂಪಿಕ್ಸ್‌ ಅಂಗಣ” ಸರಣಿ ಇಂದಿನಿಂದ

ಭವ್ಯವಾದ ಉತ್ಸವದಲ್ಲಿ ಪಾಲ್ಗೊಳ್ಳುವುದೇ ಹಲವಾರು ಕ್ರೀಡಾಪಟುಗಳ ಕನಸು. ಅದನ್ನು ಸಾಕಾರಗೊಳಿಸಲು ಹಗಲಿರುಳು ಶ್ರಮಿಸುವ ಎಷ್ಟೋ ಅಥ್ಲೀಟ್‌ಗಳಲ್ಲಿ ಗುರಿಮುಟ್ಟುವುದು ಬೆರಳೆಣಿಕೆಯ ಮಂದಿಯಷ್ಟೇ! ಉಳಿದವರು ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದೆ ತಮ್ಮ ಸೌಭಾಗ್ಯವೆಂದು ಮುಂದಿನ ನಾಲ್ಕು ವರುಷಗಳನ್ನು ಇನ್ನಷ್ಟು ತಯಾರಿಯೊಂದಿಗೆ ಕಳೆಯುತ್ತಾರೆ. ಸೋತವರು ಒಂದೆಡೆಯಾದರೆ, ಕೂದಲೆಳೆಯ ಅಂತರದಲ್ಲಿ ಪದಕ ವಂಚಿತರಾದವರು ಇನ್ನೊಂದೆಡೆ. ಇಲ್ಲಿ ದಾಖಲೆಗಳು ಸೃಷ್ಟಿಯಾಗುತ್ತವೆ, ದಾಖಲೆಗಳು ಧೂಳಿಪಟವಾಗುತ್ತವೆ. ಕಾರ್ತಿಕ್‌ ಕೃಷ್ಣ ಹೊಸ ಸರಣಿ “ಒಲಂಪಿಕ್ಸ್‌ ಅಂಗಣ” ಪ್ರತಿ ಶನಿವಾರಗಳಂದು ನಿಮ್ಮ ಕೆಂಡಸಂಪಿಗೆಯಲ್ಲಿ

Read More

ನಿಜವಾದ ಸೋದರಮಾವ: ಕೆ. ಸತ್ಯನಾರಾಯಣ ಕೃತಿಯ ಬರಹ

ಬೆಂಗಳೂರಿನಿಂದ ಗೌಹಾತಿಗೆ ಹೊರಟಿದ್ದ ರೈಲಿನಲ್ಲಿ ಒಬ್ಬ ಕನ್ನಡಿಗ ಪ್ರಯಾಣಿಕರ ಪರಿಚಯವಾಯಿತು. ಸದ್ಯದಲ್ಲೇ ಅವರು ನಿವೃತ್ತರಾಗಲಿದ್ದರು. ಬೆಂಗಳೂರಿಗೆ ಬಂದು ಬಂಧು-ಮಿತ್ರರ ಜೊತೆ ಬದುಕುತ್ತಾರೆ ಎಂಬುದು ನನ್ನ ನಿರೀಕ್ಷೆ. ಆದರೆ ಅವರು ಬೆಂಗಳೂರಿನಲ್ಲಿದ್ದ ಆಸ್ತಿಯನ್ನೆಲ್ಲ ಮಾರಿ, ಗೌಹಾತಿಯಲ್ಲೇ ಖಾಯಂ ಆಗಿ ನೆಲೆಸಲು ಹೊರಟಿದ್ದರು. ಈಗ ನಾವು ಅಲ್ಲಿ ಜೀವನ ಲಯಕ್ಕೆ ಹೊಂದುಕೊಂಡುಬಿಟ್ಟಿದ್ದೇವೆ. ನಮ್ಮ ತಂದೆ-ತಾಯಿ ಇಬ್ಬರೂ ಖಾಯಿಲೆ ಬಿದ್ದಾಗ ನಮಗಾಗಿ ಬಂದವರು ನೆಂಟರಿಷ್ಟರಲ್ಲ, ನಮ್ಮ ಕಾಲೊನಿಯ ಅಸ್ಸಾಮಿ ಬಂಧುಗಳು. ಅವರಿಗೆ ಕೃತಜ್ಞತೆ ಸಲ್ಲಿಸುವುದೆಂದರೆ, ಅವರೊಡನೆಯೇ ಮುಂದೆ ಬದುಕುವುದು ಎಂದುಬಿಟ್ಟರು.
ಕತೆಗಾರ ಕೆ. ಸತ್ಯನಾರಾಯಣ ಅವರ “ನನ್ನ ಪುಸ್ತಕಗಳ ಆತ್ಮಚರಿತ್ರೆ” ಕೃತಿಯ ಒಂದು ಬರಹ ನಿಮ್ಮ ಓದಿಗೆ

Read More

ಸುಮಾ ಸತೀಶ್‌ ಹೊಸ ಸರಣಿ “ರಂಗಿನ ರಾಟೆ” ಆರಂಭ…

ಹಳ್ಳಿಯೂರ ಬದುಕು ಹಗಲು-ರಾತ್ರಿಯ ಪರಿವಿಲ್ಲದೆ ಕತೆ ನೇಯುವ ಕಥಾಕಣಜ. ಸುಮಾ ಸತೀಶ್ ಇಂಥ ಕಣಜದ ಹತ್ತು ಹಲವು ಕತೆಗಳನ್ನು‌ “ರಂಗಿನ ರಾಟೆ” ಸರಣಿಯಲ್ಲಿ ಪ್ರತೀ ಬುಧವಾರ ಕೆಂಡಸಂಪಿಗೆಯ ಓದುಗರ ಮುಂದೆ ಇಡಲಿದ್ದಾರೆ. ಈ ಹೊಸ ಸರಣಿಯ ಮೊದಲ ಕಂತು ಇಲ್ಲಿದೆ

Read More

ಹುಣಸೇ ಚಿಗುರು ಮತ್ತು ಸ್ತ್ರೀತ್ವ…: ದಯಾ ಗಂಗನಘಟ್ಟ ಮುನ್ನುಡಿ

ಪಿತೃ ಹಿತಾಸಕ್ತ ನಿಲುವುಗಳ ಅರಿವಿರುವ ಕತೆಗಾರ್ತಿ ಪ್ರಜ್ಞಾಪೂರ್ವಕವಾಗಿಯೇ ಅದನ್ನ ತಮ್ಮ ಕತೆಯಲ್ಲಿ ಕಟ್ಟುತ್ತಾರೆ. ಹಾಗಾಗಿಯೇ ಹೆಣ್ಣಿನ ಸಹಜ ಸತ್ವದ ಹುಡುಕಾಟವನ್ನ ಇವರ ಸ್ತ್ರೀ ಪಾತ್ರಗಳಲ್ಲಿ ಬೆದಕಬಹುದು. ಸ್ತ್ರೀತ್ವದ ನಿಲುವಿನ ಬಗ್ಗೆ ಇವರಿಗೊಂದು ಸ್ಪಷ್ಟ ನಿಲುವಿದೆ. ಅದರೊಳಗೊಂದು ಅವರದ್ದೇ ಆದ ಏಸ್ತೆಟಿಕ್ ಇದೆ. ಹೆಣ್ಣಿನ ಅಗತ್ಯ ಮತ್ತು ಆದ್ಯತೆಗಳನ್ನು ಮರು ಪ್ರಶ್ನಿಸಿಕೊಳ್ಳಬೇಕಾದ ಒತ್ತಡ ಕನ್ನಡದ ನವ್ಯ ಸಾಹಿತ್ಯದ ಕೊಡುಗೆಯಾಗಿತ್ತು. ಅದರ ಪರಿಧಿಯನ್ನು ದಾಟಿದ ಈ ಕಾಲಘಟ್ಟದಲ್ಲಿ ಇವರ ಕಥೆಗಳು ಹೆಣ್ಣಿಗೆ ಗಂಡಿನಿಂದ ಏನು ಬೇಕಾಗಿದೆ ಎಂಬ ಪ್ರಶ್ನೆಯನ್ನೂ ಸೂಕ್ಷ್ಮವಾಗಿ ಎತ್ತಿ ಉತ್ತರವನ್ನೂ ಮಿಂಚುವಂತೆ ಮಾಡುತ್ತವೆ.
ದೀಪದ ಮಲ್ಲಿ ಕಥಾಸಂಕಲನ “ಹುಣಸೇ ಚಿಗುರು”ಗೆ ಕತೆಗಾರ್ತಿ ದಯಾ ಗಂಗನಘಟ್ಟ ಬರೆದ ಮುನ್ನುಡಿ

Read More

ಇಂಗ್ಲೀಸ್ನ್ಯಾಗೆ ಹೆಸರು ಬರೆಯಲು ಕಲಿತ ಮಂಜಣ್ಣ!: ಬಸವನಗೌಡ ಹೆಬ್ಬಳಗೆರೆ ಸರಣಿ

ಹೆಸರು ಕಲಿತ ಮಂಜಣ್ಣ ಸಂಬಳವಿದ್ದ ಮನೆಗೆ ಹೋಗಿ ದನಗಳನ್ನೆಲ್ಲಾ ಕಟ್ಟಿ ಹಾಕಿ ಎಣ್ಣೆ ಅಂಗಡಿಗೆ ಹೋಗಿ, ಹೆಸರು ಕಲಿತ ಖುಷಿಗೆ ತುಸು ಹೆಚ್ಚೇ ಕುಡಿದಿದ್ದಾನೆ. ಮನೆ ಓಣಿಯಾಗೆಲ್ಲಾ ತೂರಾಡುತ್ತಾ ‘ನಂಗೆ ಇಂಗ್ಲೀಸ್ನ್ಯಾಗೆ ಹೆಸ್ರು ಬರೆಯೋಕೆ ಬರುತ್ತೆ’ ಎಂದು ಕೂಗಾಡುತ್ತಾ ಹೋಗಿದ್ದಾನೆ. ಮನೆಗೆ ಹೋಗಿ ಮಣ್ಣ ನೆಲದ ಮೇಲೆ ಕಲ್ಲಲ್ಲಿ ಮನೆ ತುಂಬಾ ಕೆತ್ತಿದ್ದಾನೆ.
ಬಸವನಗೌಡ ಹೆಬ್ಬಳಗೆರೆ ಬರೆಯುವ ‘ಬದುಕು ಕುಲುಮೆʼ ಸರಣಿ

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ