Advertisement

Tag: ಕೆ.ಪಿ.ಸುರೇಶ

“ಅಳವು ಅರಿಯದ ಭಾಷೆ” ಎಂಬ ಸಾವಿನ ಗಂಟೆ: ಕೆ. ಪಿ. ಸುರೇಶ ಬರಹ

ಈ ಮಾತು ಎಷ್ಟು? ಬೆಳಗಿನವರೆಗೆ ಪ್ರಸಂಗವನ್ನು ಕಟ್ಟಬೇಕಾದ ಕಾರಣ ಕ್ವಚಿತ್ತಾದ ಚೌಕಟ್ಟಿನ ಮಾತು ಪಾತ್ರಧಾರಿಗೆ ಸಾಲುವುದಿಲ್ಲ. ಆತ ಅಕ್ಷಯಾಂಬರದ ತರ ಮಾತಿನ ಎಳೆಗಳನ್ನು ಪೋಣಿಸುತ್ತಾ ಹೋಗಬೇಕು. ಈ ಸ್ವಾತಂತ್ರ್ಯವೇ ಯಕ್ಷಗಾನದ ವೃತ್ತಿ ಪ್ರದರ್ಶನಗಳ ಜೀವಾಳ ಮತ್ತು ಶಾಪ. ಇದು ಕಲಾವಿದರದ್ದೂ ಕೂಡ. ಹೀಗಾದಾಗ ಮಾತು ಸಡಿಲವಾಗುತ್ತಾ ಸ್ವೇಚ್ಛೆಯಾಗುತ್ತಾ ಹೋಗುವ ವಿಧಿ ಈ ಪ್ರಕಾರದೊಳಗೇ ಅಂತರ್ಗತವಾಗಿದೆ. ಈಗ ಹರಡಿರುವ ಹತ್ತಾರು ಮೇಳಗಳ ಕಲಾವಿದರ ಸಂಖ್ಯೆ ಮತ್ತು ಅವರ ಪ್ರತಿಭಾ ಶ್ರೇಣಿಯನ್ನು ಗಮನಿಸಿದರೆ ವಿದ್ವತ್ತು ಮತ್ತು ಮಾತಿನ ಪ್ರೌಢಿಮೆಗಳೆರಡೂ ಸಮಪಾಕಗೊಂಡ ಕಲಾವಿದರ ಪ್ರಮಾಣ ತೀರ ಕಡಿಮೆ ಸಂಖ್ಯೆಯದ್ದು.
ನಿತ್ಯಾನಂದ ಬಿ. ಶೆಟ್ಟಿ ಬರೆದ “ಅಳವು ಅರಿಯದ ಭಾಷೆ” ಕೃತಿಯ ಕುರಿತು ಕೆ.ಪಿ. ಸುರೇಶ ಬರಹ

Read More

ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ

ಒಂದು ದಿನ ಕ್ಯಾಂಪಸ್ಸಿಗೆ ಬಂದ ಚಂದ್ರಮೌಳಿ ಸಂಜೆ ಸುಧಾಳೊಂದಿಗೆ ಟೀ ಕುಡಿಯುತ್ತಾ “ನೋಡು, ನಾನು ಕಲ್ಕತ್ತಾಗೆ ಹೋಗ್ತಿದ್ದೀನಿ. ಈ ಹೋರಾಟ ಎಲ್ಲ ಶಕ್ತಿಗುಂದುತ್ತಾ ಇದೆ. ಇದ್ರಿಂದೆಲ್ಲ ಏನಾದ್ರೂ ಆಗುತ್ತೆ ಅನ್ನೋ ನಂಬಿಕೆನೂ ನನಗಿಲ್ಲ. ಒಂದು ಅಮೆರಿಕನ್ ಕಂಪೆನಿಯಿಂದ ಒಳ್ಳೆ ಆಫರ್ ಇದೆ. ಎರಡು ವರ್ಷದ ಮೇಲೆ ಸ್ಟೇಟ್ಸ್‌ಗೆ ಹೋಗೋ ಛಾನ್ಸೂ ಇದೆ. ನಿಂಗೆ ಇದು ದ್ರೋಹದ ಥರ ಕಾಣಿಸಬಹುದು, ಪರ್ಸನಲ್ ಲೆವೆಲ್‌ನಲ್ಲೂ…
ನಾನು ಮೆಚ್ಚಿದ ನನ್ನ ಕಥಾ ಸರಣಿಯಲ್ಲಿ ಕೆ.ಪಿ.ಸುರೇಶ ಕತೆ “ಯಾರಲ್ಲಿ, ಕಳೆದಿರುಳು….” ನಿಮ್ಮ ಈ ಭಾನುವಾರದ ಓದಿಗೆ

Read More

ಗಾಂಧಿ ಎಂಬ ಕಾಡುವ ನೆನಪು…ಕತೆಗಳಲ್ಲಿ ಮರುಹುಟ್ಟು ಪಡೆದಾಗ…

ಇಲ್ಲಿನ ಇತರ ಕತೆಗಳಲ್ಲೂ ಗಾಂಧಿಯ ಪ್ರತಿರೂಪಗಳು ಬರುತ್ತವೆ. ಇದು ಕುತೂಹಲಕಾರಿ. ಗಾಂಧಿ ಬಯಸಿದ, ಅನ್ವೇಶಿಸಿದ ಆಯಾಮಗಳಲ್ಲೆಲ್ಲಾ ಗಾಂಧಿಯನ್ನೇ ಕಾಣುವ ಒಂದು ತಾಂತ್ರಿಕ ಕೌಶಲ್ಯ ಈ ಕತೆಗಳಲ್ಲಿದೆ. ಇದೇ ಜಾಡಿನಲ್ಲಿರುವ ಗಾಂಧಿಯೊಂದಿಗೆ ಮಾತಾಡುವೆ ಮತ್ತು ಆಲದ ಮರದಲ್ಲಿ ಒಂದು ಹಕ್ಕಿ ಕತೆಗಳು ಕಥಾವಸ್ತುವಿನ ಸ್ವರೂಪ ಮತ್ತು ಶೈಲಿಯಲ್ಲಿ ಕೊಂಚ ಭಿನ್ನ. ಗಾಂಧಿ ಅನುಯಾಯಿಯ ಮಕ್ಕಳು ತಮ್ಮ ತಾಯಿ/ತಂದೆ ಪ್ರಭಾವಕ್ಕೊಳಗಾದ ಶಕ್ತಿಯನ್ನು ಮರುಭೇಟಿಮಾಡುವ, ಆ ಮೂಲಕ ಗಾಂಧಿಯನ್ನು ಮುಖಾಮುಖಿಯಾಗುವ ಪರಿಯನ್ನು ಅನಾವರಣಮಾಡುತ್ತವೆ.
ಕೆ. ನಲ್ಲತಂಬಿ ಅನುವಾದಿಸಿದ ಮಹಾತ್ಮನ ಬದುಕಿನ ಕೆಲವು ಆಯ್ದ ಕತೆಗಳ ಸಂಕಲನ “ಮತ್ತೊಂದು ರಾತ್ರಿ” ಕೃತಿಗೆ ಕೆ.ಪಿ. ಸುರೇಶ ಬರೆದ ಮುನ್ನುಡಿ

Read More

ಸಂಸ್ಕೃತಿ ಕಥನವೇ ಆಗಿಬಿಡುವ ಬಾಲ್ಯದ ನೆನಪುಗಳ ಹೊತ್ತಿಗೆ

”ಬಾಲ್ಯದ ಅನುಭವಗಳನ್ನು ಬಿಡಿಬಿಡಿ ಅನುಭವ ಕಥನಗಳ ಮೂಲಕ ಸಾದರಪಡಿಸುವ ಜೋಯಪ್ಪ, ಈ ಅನುಭವಗಳನ್ನು ಒಂದು ಸಂಸ್ಕೃತಿ ಕಥನದ ಮಟ್ಟಕ್ಕೆ ಏರಿಸಿಬಿಡುತ್ತಾರೆ. ಸಂದ ಕಾಲದಲ್ಲಿ ನೆಲೆ ಊರಿದ್ದ ಒಂದು ಭೌಗೋಳಿಕ ಚೌಕಟ್ಟಿನ ಬದುಕನ್ನು; ಇದು ಎಲ್ಲಾ ಕುಟುಂಬಗಳ ಕಥೆ ಎಂಬಂತೆ ಹರಳು ಕಟ್ಟಿದ ಕಥನಗಳ ಮೂಲಕ ಜೋಯಪ್ಪ ಕಟ್ಟುತ್ತಾರೆ”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ