Advertisement

Tag: ಡಾ. ಚಂದ್ರಮತಿ ಸೋಂದಾ

ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ

ಯಾಕೋ ಅವರ ಮನೆಯ ಕೆಲವು ಆಗುಹೋಗುಗಳಿಗೆ ನಾನು ಸಾಕ್ಷಿಯಾಗಿರುವಂತೆ ನನಗೆ ಅನಿಸಿದ್ದು ಸುಳ್ಳಲ್ಲ. ಮೊನ್ನೆಯ ಭೇಟಿಯ ನಂತರದಲ್ಲಿ ಯಾಕೋ ಗಂಗತ್ತೆ ಬಹಳವಾಗಿ ನೆನಪಾಗುತ್ತಿದ್ದಾರೆ. ಅಷ್ಟು ವರ್ಷ ಮನೆಯಿಂದ ದೂರವಿದ್ದ ಅವರಿಗೆ ಕೊನೆಗಾಲಕ್ಕೆ ಮತ್ತೆ ಆ ಮನೆಗೆ ಬರಬೇಕು ಅನಿಸಿದ್ದು ಯಾಕೆ? ಮನೆಯವರು ಒಪ್ಪದಿರುವುದರಿಂದ ಅವರಿಗೆ ಆ ಮನೆಗೆ ಬರುವ ಅವಕಾಶ ದೊರಕಿರಲಿಲ್ಲ. ಆದರೆ ಅವರ ಸಾವು ರಾಮಣ್ಣನನ್ನು ವಿಚಲಿತಗೊಳಿಸಿತೇ? ಸಾವಿನ ಸುದ್ದಿ ತಿಳಿದಿದ್ದೆ ರಾಮಣ್ಣ ಜಾನಕ್ಕ ಅಲ್ಲಿಗೆ ಧಾವಿಸಿದ್ದರಂತೆ.
ಡಾ. ಚಂದ್ರಮತಿ ಸೋಂದಾ ಬರೆದ ಈ ಭಾನುವಾರದ ಕತೆ “ಕಣ್ಣಾಚೆಯ ನೋಟ” ನಿಮ್ಮ ಓದಿಗೆ

Read More

ಮತ್ತೆ ಸಿಗುವ ಆಶಯದ ಪಯಣ: ಚಂದ್ರಮತಿ ಸೋಂದಾ ಸರಣಿ

ಮನೆಯ ಜನರೆಲ್ಲರಿಗೂ ʻಹೋಗಿ ಬರ್ತೇನೆʼ ಎನ್ನುತ್ತ ಅವರು ಎಲ್ಲಿದ್ದಾರೋ ಅಲ್ಲಿಗೆ ಹೋಗಿ ಹೇಳುವುದು, ಅಲ್ಲಿಂದ ನಡುಮನೆಯಲ್ಲಿ ಕೆಲಹೊತ್ತು ಮಾತನಾಡುತ್ತ ನಿಲ್ಲುವುದು, ಅಲ್ಲಿಂದ ಜಗಲಿಗೆ, ಅನಂತರ ಹೆಬ್ಬಾಗಿಲಲ್ಲಿ ತುಸುಹೊತ್ತು ಮಾತನಾಡುತ್ತ ನಿಂತರೆ, ಹೊರಡಲು ಮುಂದಾದವರು ʻಇನ್ನೂ ಮಾತು ಮುಗಿದಿಲ್ವಾ?ʼ ಎಂದು ಕೇಳುತ್ತಲೇ ʻಬಂದೆʼ ಎಂದು ಬಾಯಲ್ಲಿ ಹೇಳಿದರೂ ಅಂಗಳದ ತುದಿಯಲ್ಲಿ ಒಂದು ಗಳಿಗೆಯ ಮಾತುಕತೆ. ಹೀಗೆ ಸಾಗುವ ವಿದಾಯದ ಕ್ಷಣ ನೆನಪಿಡುವಂಥದು. ಕೆಲವೊಮ್ಮೆ ಮನೆಗೆ ಬಂದ ಅಣ್ಣ-ತಮ್ಮಂದಿರು, ಅಥವಾ ಅಕ್ಕ-ತಂಗಿಯರನ್ನು ಕಳುಹಿಸಲು ಊರಬಾಗಿಲತನಕ ಹೋಗುವುದಿದೆ. ಎಲ್ಲರ ಎದುರಿನಲ್ಲಿ ಹಂಚಿಕೊಳ್ಳಲು ಆಗದ ಅದೆಷ್ಟೋ ಸಂಗತಿಗಳು ಅಲ್ಲಿ ವಿನಿಮಯಗೊಳ್ಳುತ್ತಿದ್ದವು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಕೊನೆಯ ಕಂತು

Read More

ಅಯ್ಯೋ ಉಪ್ಪಿಟ್ಟಾ!: ಚಂದ್ರಮತಿ ಸೋಂದಾ ಸರಣಿ

ಎಲ್ಲ ಬಗೆಯ ಉಪ್ಪಿಟ್ಟುಗಳಲ್ಲಿ ಅವರೆಕಾಳಿನ ಉಪ್ಪಿಟ್ಟಿನ ಗಮ್ಮತ್ತೆ ಬೇರೆ. ಯಾರಾದರೂ ಮನೆಗೆ ಬಂದಾಗ ಉಪ್ಪಿಟ್ಟು ಕೊಡಲಾ? ಅಂತ ಕೇಳಿದರೆ `ಈಗ ತಿಂಡಿಯೇನು ಬ್ಯಾಡ’ ಅಂತಾರೆ. `ಅವರೆಕಾಳು ಉಪ್ಪಿಟ್ಟು ಮಾಡಿದ್ದೆ. ಅದ್ಕೆ ಕೇಳ್ದೆ’ ಅಂತ ಹೇಳಿನೋಡಿ. `ಅವರೆಕಾಳು ಉಪ್ಪಿಟ್ಟಾ, ಸ್ವಲ್ಪ ಕೊಡಿ’ ಅಂದೇ ಅಂತಾರೆ. ಅವರ ಮಾತು ನಂಬಿ ತುಸು ಕೊಟ್ಟರೆ `ಬಹಳ ಚೆನ್ನಾಗಿದೆ…
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ನಾಲ್ಕನೆಯ ಕಂತು

Read More

ಆಟದ ಸುತ್ತ ಒಂದು ಸುತ್ತು: ಚಂದ್ರಮತಿ ಸೋಂದಾ ಸರಣಿ

ಮಳೆಗಾಲ ಮುಗಿದ ಮೇಲೆ ಊರಿನ ಬೀದಿ ಶಾಲೆಯ ಅಂಗಳ, ದೇವಸ್ಥಾನದ ಮುಂದಿನ ಬಯಲು ಎಲ್ಲವೂ ನಮ್ಮ ಆಟಕ್ಕೆ ಸೂಕ್ತ ಎಂದು ಭಾವಿಸಿ ಆಡುತ್ತಿದ್ದೆವು. ಮುಟ್ಟಾಟ ಅಥವಾ ಹಿಡಿಯೋ ಆಟಕ್ಕೆ ಬಹಳ ಪ್ರಾಧಾನ್ಯವಿತ್ತು. ಅಟ್ಟಿಸಿಕೊಂಡು ಹೋಗಿ ಹಿಡಿಯುವುದು ಒಂಥರಾ ಖುಶಿ ಕೊಡುತ್ತಿತ್ತು. ಇದರ ಇನ್ನೊಂದ ರೂಪವೇ ʻಕೂತು ಹಿಡಿತಿಯೋ ನಿಂತು ಹಿಡಿತಿಯೋʼ ಎನ್ನುವುದು. ಕೇಳಿದಾಗ ನಿಂತು ಎಂದರೆ ನಿಂತಾಗ, ಇಲ್ಲವೆ ಕುಳಿತು ಎಂದರೆ ಕುಳಿತಾಗ ಅವರನ್ನು ಮುಟ್ಟಬೇಕು, ಆಗ ಅವರು ಆಟದಿಂದ ಹೊರಕ್ಕೆ.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿ

Read More

ನೆನಪಿನಲ್ಲಿ ಉಳಿಯುವ ಸಾಮಾನ್ಯರು: ಚಂದ್ರಮತಿ ಸೋಂದಾ ಸರಣಿ

ಒಮ್ಮೆ ವಾಕಿಂಗಿಗೆ ಹೋಗುವಾಗ ಸರ್ಕಲ್ಲಿನಲ್ಲಿ ಅವಳು ಸೊಪ್ಪು ಮಾರುವುದನ್ನು ಗಮನಿಸಿದೆ. ಒಂದು ದಿನ ಅವಳು ನನ್ನನ್ನು ಕರೆದು ʻಸೊಪ್ಪು ತಕಳಿ. ಈ ಸೊಪ್ಪು ಬಾರಿ ಚೆನಾಗದೆʼ ಅಂತ ಕೊಟ್ಟಳು. ಇನ್ನೂ ಮೊಬೈಲ್‌ ಕೈಯಲ್ಲಿ ಇಲ್ಲದ ಕಾಲ. ʻದುಡ್‌ ತಂದಿಲ್ಲʼ ಅಂದೆ. ʻನಾಳೆ ಕೊಡಿʼ ಅಂದಳು. ʻನಾಳೆ ಬರದಿದ್ದರೆ?ʼ ಅಂದಿದ್ದಕ್ಕೆ ʻಯಾವತ್ತೋ ಕೊಡಿ ಹೋಗಿʼ ಅಂದಳು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತೆರಡನೆಯ ಕಂತು

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ