ಸೊಪ್ಪು-ತರಕಾರಿ ಎನ್ನುವ ಕಿರುವೈದ್ಯ: ಚಂದ್ರಮತಿ ಸೋಂದಾ ಸರಣಿ
ನಾವು ದಿನನಿತ್ಯ ಬಳಸುವ ಕೆಲವು ತರಕಾರಿ ಸೊಪ್ಪುಗಳಲ್ಲಿ ನಮ್ಮ ಕೆಲವು ಚಿಕ್ಕಪುಟ್ಟ ಕಾಯಿಲೆಗಳನ್ನು ಗುಣಪಡಿಸುವ ಅಂಶಗಳಿವೆ ಎನ್ನವುದನ್ನು ಹಿಂದಿನವರು ಬಲ್ಲವರಾಗಿದ್ದರು. ʻಅಗ್ಗಾರು ಬ್ಯಾಸಿಗೆ, ಇನ್ನೊಂದಿಷ್ಟು ದಿವ್ಸ ಒಂದೆಲಗದ ತಂಬುಳಿ ಮಾಡದೆʼ ಎನ್ನುತ್ತಿದ್ದರು. ʻಈ ಚಳಿಗಾಲದಲ್ಲಿ ಕನ್ನೆಕುಡಿ ಕಟ್ನೆ ಮಾಡಿಕ್ಯಂಡು ಬಿಸಿಬಿಸಿ ಕಟ್ನೆಗೆ ತುಪ್ಪ ಹಾಕಿ ಉಂಡು ಹೊದ್ದು ಮಲಗಿದ್ರೆ ಚಳಿಯೆಲ್ಲ ಹೆದ್ರಿ ಓಡ್ಹೋಗ್ತುʼ ಎನ್ನುವ ಮಾತು ಕೇಳಿಬರುತಿತ್ತು.
ಡಾ. ಚಂದ್ರಮತಿ ಸೋಂದಾ ಬರೆಯುವ “ಮಾತು ಮಂದಲಿಗೆ” ಸರಣಿಯ ಇಪ್ಪತ್ತನೆಯ ಕಂತು ನಿಮ್ಮ ಓದಿಗೆ